Site icon Vistara News

GDP Growth : 2022ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ಜಿಡಿಪಿ 4.4% ಕ್ಕೆ ಇಳಿಕೆ

GDP

ನವ ದೆಹಲಿ: ಭಾರತದ ಜಿಡಿಪಿ ಬೆಳವಣಿಗೆ (GDP) ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಅಂದರೆ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ 4.4%ರಷ್ಟು ದಾಖಲಾಗಿದೆ.( GDP Growth) ಅಂಕಿ ಅಂಶಗಳ ಸಚಿವಾಲಯವು ಜಿಡಿಪಿ ಕುರಿತ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, 2022-23ರ ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ 40.19 ಲಕ್ಷ ಕೋಟಿ ರೂ. ಜಿಡಿಪಿ ಮೌಲ್ಯ ದಾಖಲಾಗಿತ್ತು. 2021-22ರ ಇದೇ ಅವಧಿಯಲ್ಲಿ 38.51 ಲಕ್ಷ ಕೋಟಿ ರೂ. ಮೌಲ್ಯದ ಜಿಡಿಪಿ ದಾಖಲಾಗಿತ್ತು. ಅಧಿಕ ಹಣದುಬ್ಬರ, ಬೇಡಿಕೆಯ ಮಂದಗತಿಯ ಪರಿಣಾಮ ಜಿಡಿಪಿ ಬೆಳವಣಿಗೆ ಕೂಡ ನಿರೀಕ್ಷೆಗಿಂತ ತುಸು ಕಡಿಮೆಯಾಗಿದೆ.

2023ರ ಜನವರಿಯಲ್ಲಿ 8 ಮೂಲ ಸೌಕರ್ಯ ವಲಯಗಳ ಬೆಳವಣಿಗೆ 7.8%ಕ್ಕೆ ಏರಿಕೆಯಾಗಿತ್ತು. ಮೊದಲ ತ್ರೈಮಾಸಿಕದಲ್ಲಿ ಎರಡಂಕಿಯ ಬೆಳವಣಿಗೆಯ ಬಳಿಕ 6.3% ಕ್ಕೆ ಜಿಡಿಪಿ ಇಳಿದಿತ್ತು. ಎಸ್‌ಬಿಐ 4.6% ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಿತ್ತು. ಏಪ್ರಿಲ್-ಜನವರಿಯಲ್ಲಿ ವಿತ್ತೀಯ ಕೊರತೆ 67.8% ಆಗಿದ್ದು, 11.91 ಲಕ್ಷ ಕೋಟಿ ರೂ.ಗಳಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಇತ್ತೀಚಿನ ಜಿಡಿಪಿ ಬೆಳವಣಿಗೆ

ಅವಧಿಜಿಡಿಪಿ ಬೆಳವಣಿಗೆ
ಜುಲೈ-ಸೆಪ್ಟೆಂಬರ್ 2022‌6.3%
ಏಪ್ರಿಲ್-ಜೂನ್ 202213.5%
ಜನವರಿ-ಮಾರ್ಚ್ 20224.1%
ಅಕ್ಟೋಬರ್-ಡಿಸೆಂಬರ್‌ 20225.4%
Exit mobile version