ನವದೆಹಲಿ: ಜರ್ಮನಿಯು (Germany) ಪ್ರಸಕ್ತ ಸಾಲಿನಲ್ಲಿ ಜಪಾನ್ (Japan) ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆ (Largest Economy) ರಾಷ್ಟ್ರವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಅಂದಾಜಿಸಿದೆ. ಡಾಲರ್ ಮತ್ತು ಯುರೋ ಎದುರು ಯೆನ್ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜರ್ಮನಿ ಮೂರನೇ ಸ್ಥಾನಕ್ಕೆ ಜಿಗಿಯಲಿದೆ. ಮೊದಲೆರಡು ಸ್ಥಾನಗಳಲ್ಲಿ ಅಮೆರಿಕ ಮತ್ತು ಚೀನಾ ರಾಷ್ಟ್ರಗಳಿವೆ. ಐಎಂಎಫ್ ಹೊಸ ಅಂದಾಜಿನ ಪ್ರಕಾರ, ಜರ್ಮನಿಯ ನಾಮಿನಲ್ ಜಿಡಿಪಿಯು ಪ್ರಸಕ್ತ ವರ್ಷ 4.43 ಟ್ರಿಲಿಯನ್ ಡಾಲರ್ ಇರಲಿದೆ. ಜಪಾನ್ ನಾಮಿನಲ್ ಜಿಡಿಪಿ 4.23 ಟ್ರಿಲಿಯನ್ ಡಾಲರ್ ಇರಲಿದೆ.
ಯೆನ್ ಯೂರೋ ವಿರುದ್ಧ 160 ಮಾರ್ಕ್‌ಗೆ ಹತ್ತಿರವಾಗಿರುವುದರಿಂದ ಮತ್ತು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎರಡನೇ ಸುತ್ತಿನ ಕರೆನ್ಸಿ ಇಂಟೆರ್ವೆಷನ್ ಕಾರಣವಾದ ಡಾಲರ್‌ಗೆ ವಿರುದ್ಧವಾಗಿ 33 ವರ್ಷಗಳ ಕಡಿಮೆ ಅಂತರದಲ್ಲಿ ಉಳಿದಿದೆ. ಯೂರೋ ಕೊನೆಯದಾಗಿ ಆಗಸ್ಟ್ 2008ರಲ್ಲಿ 160 ಯೆನ್ ತಲುಪಿತ್ತು. ಹಣಕಾಸು ನೀತಿಗಳಲ್ಲಿ ಮೂಲಭೂತ ಬದಲಾವಣೆಗಳ ಕಾರಣವೂ ಯೆನ್ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ: BRICS Summit 2023: ಶೀಘ್ರವೇ 5 ಲಕ್ಷ ಕೋಟಿ ಡಾಲರ್ ಆರ್ಥಿಕ ರಾಷ್ಟ್ರವಾಗಲಿದೆ ಭಾರತ ಎಂದ ಪ್ರಧಾನಿ ಮೋದಿ
ಯೆನ್ ಮೌಲ್ಯ ಕುಸಿತವು ಹೆಚ್ಚಾಗಿ ವಿತ್ತೀಯ ನೀತಿಯಲ್ಲಿನ ಮೂಲಭೂತ ವ್ಯತ್ಯಾಸಗಳಿಂದ ಉಂಟಾಗಿದೆ. ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಹಣದುಬ್ಬರವನ್ನು ನಿಭಾಯಿಸಲು ಬಡ್ಡಿದರಗಳನ್ನು ಹೆಚ್ಚಿಸಿವೆ. ಆದರೆ ಬ್ಯಾಂಕ್ ಆಫ್ ಜಪಾನ್ ಪ್ರಚೋದಕ ಕ್ರಮದಲ್ಲಿ ಉಳಿದುಕೊಂಡಿದ್ದು, ವರ್ಷದ ಹಣದುಬ್ಬರವಿಳಿತದ ನಂತರ ಬೆಲೆ ಬೆಳವಣಿಗೆಯನ್ನು ಪೋಷಿಸುವ ಪ್ರಯತ್ನವನ್ನು ಮಾಡುತ್ತಿದೆ.
ಫೆಡ್ ಮತ್ತು ಇಸಿಬಿ ತಮ್ಮ ಮುಂಬರುವ ಸಭೆಗಳಲ್ಲಿ ದರಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಸಾಲದ ವೆಚ್ಚಗಳು ಹೆಚ್ಚು ಕಾಲ ಉಳಿಯುವ ನಿರೀಕ್ಷೆಗಳು ಯೆನ್ ಮೇಲೆ ಒತ್ತಡವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಬಾಂಡ್ ಲಾಭಗಳ ನಿಯಂತ್ರಣಕ್ಕೆ ಸಂಭವನೀಯ ತಿರುಚುವಿಕೆಯ ಊಹಾಪೋಹಗಳ ಮಧ್ಯೆ ಬ್ಯಾಂಕ್ ಆಫ್ ಜಪಾನ್ ಮುಂದಿನ ವಾರ ಸಭೆ ನಡೆಸುವ ಸಾಧ್ಯತೆ ಇದೆ. ಆದರೆ ಅದರ ಋಣಾತ್ಮಕ ಬಡ್ಡಿದರವು ಮುಂದಿನ ವರ್ಷದವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಅಂದರೆ, ಬಡ್ಡಿ ದರ ಹೆಚ್ಚಳವಾಗಲ್ಲ ಎಂದು ಹೇಳಬಹುದು.
ಈ ಮಧ್ಯೆ, ಜಪಾನ್ ಆರ್ಥಿಕತೆಗೆ ಹೋಲಿಸಿದರೆ ಜರ್ಮನಿಯ ಸ್ಥಿತಿ ಅತ್ಯುತ್ತಮವಾಗಿದೆ. ಜಪಾನ್‌ಗೆ( 33,950 ಡಾಲರ್) ಹೋಲಿಸಿದರೆ ಜರ್ಮನಿಯಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ ಒಟ್ಟು ದೇಶೀಯ ಉತ್ಪನ್ನವು 52,824 ಡಾಲರ್ ಎಂದು ಅಂದಾಜಿಸಲಾಗಿದೆ.