ನವ ದೆಹಲಿ: ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ನಲ್ಲಿ ಬಣ್ಣದ ಟಿಕ್ ಮಾರ್ಕ್‌ಗಳಿಂದ ಗುರುತು ನೀಡುವ ಯೋಜನೆಯನ್ನು ಪರಿಷ್ಕರಿಸಲಾಗಿದೆ. ಈ ಮೊದಲಿದ್ದ ನೀಲಿ ಬಣ್ಣದ ಬ್ಲೂ ಟಿಕ್ ಮಾರ್ಕ್ ಜತೆಗೆ ಗೋಲ್ಡ್ ಮತ್ತು ಗ್ರೇ ಕಲರ್‌ನ ಇನ್ನೆರಡು ಟಿಕ್ ಮಾರ್ಕ್‌ಗಳನ್ನೂ ಸೇರಿಸಲಾಗಿದೆ. ಬಿಸಿನೆಸ್, ವೈಯಕ್ತಿಕ ಮತ್ತು ಸರ್ಕಾರಿ ಅಕೌಂಟ್‌ಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತಿದೆ.
ಗೋಲ್ಡ್, ಗ್ರೇ ಮತ್ತು ಬ್ಲೂ ಟಿಕ್ ಮಾರ್ಕ್ ಗುರುತಿನ ಅರ್ಥವೇನು?
ಗೋಲ್ಡ್ ಟಿಕ್ ಮಾರ್ಕ್ ಕಂಪನಿಗಳು ಅಥವಾ ಅಧಿಕೃತ ಬಿಸಿನೆಸ್ ಅಕೌಂಟ್‌ಗಳನ್ನು ಗುರುತಿಸಲು ಬಳಕೆಯಾಗಲಿದೆ.
ಗ್ರೇ (ಬೂದು) ಬಣ್ಣದ ಟಿಕ್ ಮಾರ್ಕ್ ಅನ್ನು ಸರ್ಕಾರಿ ಖಾತೆಗಳು ಅಥವಾ ಸರ್ಕಾರದ ಜತೆಗೆ ಸಂಬಂಧ ಹೊಂದಿರುವ ಖಾತೆಗಳನ್ನು ಗುರುತಿಸಲು ಬಳಕೆ ಮಾಡಲಾಗುತ್ತದೆ.
ನೀಲಿ ಬಣ್ಣದ ಗುರುತನ್ನು (ಬ್ಲೂ ಟಿಕ್ ಮಾರ್ಕ್) ವೈಯಕ್ತಿಕ ಬಳಕೆದಾರರ ಖಾತೆಗಳನ್ನು ಗುರುತಿಸಲು ನೀಡಲಾಗುತ್ತದೆ. ಟ್ವಿಟರ್‌ನಲ್ಲಿ ಬಳಕೆದಾರರ ಹೆಸರಿನ ಸಮೀಪ ಇದು ಇರುತ್ತದೆ. ಬ್ಲೂ ಟಿಕ್ ಮಾರ್ಕ್ ಬೇಕಿದ್ದರೆ ಆಂಡ್ರಾಯ್ಡ್ ಆಧಾರಿತ ಬಳಕೆದಾರರು ಮಾಸಿಕ 8 ಡಾಲರ್ ಶುಲ್ಕ ನೀಡಬೇಕಾಗುತ್ತದೆ. ಐಫೋನ್ ಮಾಲೀಕರು 11 ಡಾಲರ್ ಕೊಡಬೇಕಾಗುತ್ತದೆ.
ಟಿಕ್ ಮಾರ್ಕ್ ಇರುವುದರಿಂದ ಬಳಕೆದಾರರ ಖಾತೆ ಅಧಿಕೃತ ಎಂಬುದು ಇತರರಿಗೂ ಗೊತ್ತಾಗುತ್ತದೆ. ಇದರಿಂದ ಸಿಲೆಬ್ರಿಟಿಗಳಿಗೆ, ನಾನಾ ವೃತ್ತಿಪರರಿಗೆ ಅನುಕೂಲವಾಗುತ್ತದೆ. ಅಸಲಿ ಯಾವುದು ನಕಲಿ ಯಾವುದು ಎಂಬುದು ದೃಢವಾಗುತ್ತದೆ. ಮಾತ್ರವಲ್ಲದೆ ಕಂಪನಿಗಳು, ಬ್ರಾಂಡ್‌ಗಳು, ಸಂಘಟನೆಗಳು ಕೂಡ ಟಿಕ್ ಮಾರ್ಕ್ ಪಡೆಯಬಹುದು.