Site icon Vistara News

Gold import | ಏಪ್ರಿಲ್-ಅಕ್ಟೋಬರ್‌ನಲ್ಲಿ ಬಂಗಾರದ ಆಮದು 17% ಇಳಿಕೆ

gold

ನವ ದೆಹಲಿ: ಬಂಗಾರದ ಆಮದು ಕಳೆದ ಏಪ್ರಿಲ್-ಅಕ್ಟೋಬರ್‌ ಅವಧಿಯಲ್ಲಿ 17.38% ಇಳಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ (Gold import ) ವರದಿ ತಿಳಿಸಿದೆ.

ಈ ಅವಧಿಯಲ್ಲಿ 24 ಶತಕೋಟಿ ಡಾಲರ್ ( 1.94 ಲಕ್ಷ ಕೋಟಿ ರೂ.) ಮೌಲ್ಯದ ಬಂಗಾರವನ್ನು ಆಮದು ಮಾಡಿಕೊಳ್ಳಲಾಗಿದೆ. 2021-22ರ ಇದೇ ಅವಧಿಯಲ್ಲಿ 29 ಶತಕೋಟಿ ಡಾಲರ್‌ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು.(2.34 ಲಕ್ಷ ಕೋಟಿ ರೂ.)

ಬೆಳ್ಳಿಯ ಆಮದಿನಲ್ಲೂ ಅಕ್ಟೋಬರ್‌ನಲ್ಲಿ 35% ಇಳಿಕೆಯಾಗಿತ್ತು. ಏಪ್ರಿಲ್-ಅಕ್ಟೋಬರ್‌ನಲ್ಲಿ ವ್ಯಾಪಾರ ಕೊರತೆ 173 ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. (14 ಲಕ್ಷ ಕೋಟಿ ರೂ.) ಭಾರತ ಇತ್ತೀಚೆಗೆ ಚಿನ್ನದ ಆಮದು ಮೂಲ ದರವನ್ನೂ ಏರಿಸಿದ್ದು, ಮುಂಬರುವ ದಿನಗಳಲ್ಲಿ ಆಮದು ಮತ್ತಷ್ಟು ತಗ್ಗುವ ನಿರೀಕ್ಷೆಯೂ ಇದೆ.

Exit mobile version