Site icon Vistara News

Gold Price | ಬಂಗಾರದ ದರದಲ್ಲಿ 230 ರೂ. ಇಳಿಕೆ, ಬೆಳ್ಳಿ 1,000 ರೂ. ಅಗ್ಗ

gold bond

ಬೆಂಗಳೂರು: ಬಂಗಾರದ ದರದಲ್ಲಿ ಶುಕ್ರವಾರ 230 ರೂ. ಇಳಿಕೆಯಾಗಿದೆ. ಬೆಳ್ಳಿಯ ದರದಲ್ಲಿ 1000 ರೂ. ತಗ್ಗಿದೆ. 24 ಕ್ಯಾರಟ್‌ನ 10 ಗ್ರಾಮ್‌ ಚಿನ್ನದ ದರ 50,450 ರೂ.ಗೆ ಇಳಿಕೆಯಾಗಿದೆ. (Gold Price) ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಬಂಗಾರದ ದರ 46,250 ರೂ.ಗೆ ಇಳಿಕೆಯಾಗಿದೆ. 200 ರೂ. ಇಳಿದಿದೆ.

ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ 700 ರೂ. ಕಡಿತವಾಗಿದ್ದು, 61,100 ರೂ.ಗೆ ತಗ್ಗಿದೆ. ಪ್ಲಾಟಿನಮ್‌ ದರ 10 ಗ್ರಾಮ್‌ಗೆ 22,560 ರೂ.ಗೆ ಏರಿದ್ದು, 520 ರೂ. ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ಚಿನ್ನದ ದರಗಳು ವ್ಯತ್ಯಾಸವಾಗುತ್ತದೆ. ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ವರ್ಣ ದರ ಇಳಿಕೆಯಾಗುತ್ತಿದೆ. ಹೀಗಿದ್ದರೂ, ಒಟ್ಟಾರೆಯಾಗಿ ಚಿನ್ನದ ದರ ಏರುಗತಿಯನ್ನೇ ಕಂಡಿರುವುದರಿಂದ ಈಗಲೂ ಉಳಿತಾಯ ಮತ್ತು ಹೂಡಿಕೆಯ ದೃಷ್ಟಿಯಿಂದ ಬಂಗಾರ ವಿಶ್ವಾಸಾರ್ಹವಾಗಿದೆ.

ಬಂಗಾರದಲ್ಲಿ ಹೂಡಿಕೆ ಸುಲಭ. ನೇರವಾಗಿ ಜ್ಯುವೆಲ್ಲರಿ ಮಳಿಗೆಗೆ ತೆರಳಿ ಆಭರಣಗಳನ್ನು ಖರೀದಿಸಬಹುದು. ಚಿನ್ನದ ಗಟ್ಟಿ ಅಥವಾ ನಾಣ್ಯಗಳನ್ನು ಕೊಳ್ಳಬಹುದು. ಅಥವಾ ಚಿನ್ನದ ಇಟಿಎಫ್‌ಗಳಲ್ಲಿ ಆನ್‌ಲೈನ್‌ ಮೂಲಕ ಸುರಕ್ಷಿತ ಹೂಡಿಕೆ ಮಾಡಬಹುದು. ಸಾವರಿನ್‌ ಗೋಲ್ಡ್‌ ಬಾಂಡ್‌ಗಳಲ್ಲಿ ಕೂಡ ಹೂಡಿಕೆ ಮಾಡಬಹುದು.

Exit mobile version