ಬೆಂಗಳೂರು: ಕಳೆದ ಮೂರು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ದರ ಬುಧವಾರ ಇಳಿಕೆಯಾಗಿದೆ. ಹೀಗಾಗಿ ಖರೀದಿಗೆ (Gold price) ಸಕಾಲ ಎನ್ನುತ್ತಾರೆ ತಜ್ಞರು. ಆದರೆ 1 ಕೆ.ಜಿ ಬೆಳ್ಳಿಯ ದರ 62,400 ರೂ.ಗೆ ಏರಿದ್ದು, 1,000 ರೂ. ವೃದ್ಧಿಸಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಬಂಗಾರದ ದರ ಬುಧ ವಾರ 10 ಗ್ರಾಮ್‌ಗೆ 51,0೩0 ರೂ.ನಷ್ಟಿತ್ತು. 22 ಕ್ಯಾರಟ್ ಅಥವಾ ಆಭರಣ ಚಿನ್ನದ ದರ 10 ಗ್ರಾಮ್‌ಗೆ ೪೬,೭೮೦ ರೂ. ಇತ್ತು. ಸೆಪ್ಟೆಂಬರ್ 6ರಂದು 24 ಕ್ಯಾರಟ್‌ನ 10 ಗ್ರಾಮ್ ಚಿನ್ನದ ದರ ೫೧,೨೦೦ ರೂ. ಇತ್ತು.
ಪ್ಲಾಟಿನಮ್ ದರ 10 ಗ್ರಾಮ್‌ಗೆ 22,480 ರೂ.ನಷ್ಟಿತ್ತು. ಬೆಳ್ಳಿಯ ದರ ಪ್ರತಿ ಕೆ.ಜಿಗೆ 6೨,400 ರೂ. ಇತ್ತು. ಪ್ಲಾಟಿನಮ್ ದರ ಪ್ರತಿ 10 ಗ್ರಾಮ್‌ಗೆ 22,೯೬೦ ರೂ. ಇತ್ತು.
ಅಂತಾರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ಚಿನ್ನದ ದರಗಳು ವ್ಯತ್ಯಾಸವಾಗುತ್ತದೆ. ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ವರ್ಣ ದರ ಇಳಿಕೆಯಾಗುತ್ತಿದೆ. ಹೀಗಿದ್ದರೂ, ಒಟ್ಟಾರೆಯಾಗಿ ಚಿನ್ನದ ದರ ಏರುಗತಿಯನ್ನೇ ಕಂಡಿರುವುದರಿಂದ ಈಗಲೂ ಉಳಿತಾಯ ಮತ್ತು ಹೂಡಿಕೆಯ ದೃಷ್ಟಿಯಿಂದ ಬಂಗಾರ ವಿಶ್ವಾಸಾರ್ಹವಾಗಿದೆ.
ಬಂಗಾರದಲ್ಲಿ ಹೂಡಿಕೆ ಸುಲಭ. ನೇರವಾಗಿ ಜ್ಯುವೆಲ್ಲರಿ ಮಳಿಗೆಗೆ ತೆರಳಿ ಆಭರಣಗಳನ್ನು ಖರೀದಿಸಬಹುದು. ಚಿನ್ನದ ಗಟ್ಟಿ ಅಥವಾ ನಾಣ್ಯಗಳನ್ನು ಕೊಳ್ಳಬಹುದು. ಅಥವಾ ಚಿನ್ನದ ಇಟಿಎಫ್‌ಗಳಲ್ಲಿ ಆನ್‌ಲೈನ್ ಮೂಲಕ ಸುರಕ್ಷಿತ ಹೂಡಿಕೆ ಮಾಡಬಹುದು. ಸಾವರಿನ್ ಗೋಲ್ಡ್ ಬಾಂಡ್‌ಗಳಲ್ಲಿ ಕೂಡ ಹೂಡಿಕೆ ಮಾಡಬಹುದು.