ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ 100 ರೂ. ಏರಿಕೆಯಾಗಿದೆ. (Gold Price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 57,160 ರೂ.ಗೆ ವೃದ್ಧಿಸಿದೆ.
22 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರದಲ್ಲಿ 50 ರೂ. ಏರಿಕೆಯಾಗಿದ್ದು, 52,400 ರೂ.ಗೆ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 400 ರೂ. ಹೆಚ್ಚಳವಾಗಿದ್ದು, 74,700 ರೂ.ಗೆ ವೃದ್ಧಿಸಿದೆ. ಪ್ಲಾಟಿನಮ್‌ನ ಪ್ರತಿ 10 ಗ್ರಾಮ್ ದರದಲ್ಲಿ 60 ರೂ. ಏರಿಕೆಯಾಗಿದ್ದು, 27,190 ರೂ.ಗೆ ಹೆಚ್ಚಳವಾಗಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ದಟ್ಟವಾಗಿರುವ ಈ ವರ್ಷ ಬಂಗಾರ ಮತ್ತು ಬೆಳ್ಳಿಯ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.