ಬೆಂಗಳೂರು: ಬಂಗಾರದ ದರದಲ್ಲಿ ಕಳೆದ 5 ದಿನಗಳಲ್ಲಿ 1,140 ರೂ.ಗಳ ಏರಿಕೆದಾಖಲಾಗಿದೆ.
ಬೆಂಗಳೂರಿನಲ್ಲಿ ಮೇ 23 ರಂದು 100 ರೂ. ಏರಿಕೆಯಾಗಿತ್ತು ಮೇ 19ರಿಂದ ಮೇ 23ರ ತನಕ 5 ದಿನಗಳಲ್ಲಿ ಒಟ್ಟು 1,140ರೂ. ಹೆಚ್ಚಳವಾಗಿತ್ತು. ಮಂಗಳವಾರ (ಮೇ 24) 24 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರ 51,430 ರೂ.ಗೆ ಏರಿಕೆಯಾಗಿತ್ತು. (100 ರೂ. ಏರಿಕೆ). 22 ಕ್ಯಾರಟ್ ಚಿನ್ನದ ದರ 47,150 ರೂ.ಗೆ ವೃದ್ಧಿಸಿತ್ತು.
ಬೆಳ್ಳಿಯ ದರದಲ್ಲಿ ಕೆ.ಜಿಗೆ 600 ರೂ. ಹೆಚ್ಚಳವಾಗಿದ್ದು, 66,500 ರೂ.ಗೆ ವೃದ್ಧಿಸಿದೆ. 10 ಗ್ರಾಮ್ ಪ್ಲಾಟಿನಮ್ ದರದಲ್ಲಿ 150 ರೂ. ಏರಿಕೆಯಾಗಿದ್ದು, 24,030 ರೂ.ಗೆ ವೃದ್ಧಿಸಿದೆ.
ಚಿನ್ನ, ಬೆಳ್ಳಿ, ಪ್ಲಾಟಿನಮ್ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳ ದರಗಳಲ್ಲಿನ ಏರಿಳಿತಗಳನ್ನು ಅವಲಂಬಿಸಿರುತ್ತದೆ. ಡಾಲರ್ ಎದುರು ರೂಪಾಯಿಯ ಮೌಲ್ಯ ಕೂಡ ಪ್ರಭಾವ ಬೀರುತ್ತದೆ. ಭಾರತ ತನ್ನ ಬೇಡಿಕೆಯ ಬಹುಪಾಲು ಬಂಗಾರವನ್ನು ಆಮದು ಮಾಡಿಕೊಳ್ಳುತ್ತದೆ.