ಬೆಂಗಳೂರು: ಚಿನ್ನದ ದರದಲ್ಲಿ ಶುಕ್ರವಾರ ೨೭೦ ರೂ. ಏರಿಕೆಯಾಗಿದ್ದು ಬೆಂಗಳೂರಿನಲ್ಲಿ (Gold price) ೨೪ ಕ್ಯಾರಟ್ನ ಪ್ರತಿ ೧೦ ಗ್ರಾಮ್ ಬಂಗಾರದ ದರ ೫೧,೬೦೦ ರೂ.ಗೆ ಏರಿಕೆಯಾಗಿದೆ. ಗುರುವಾರ ಕೂಡ ೨೭೦ ರೂ. ವೃದ್ಧಿಸಿತ್ತು.
ಆಭರಣ ಚಿನ್ನ ಅಥವಾ ೨೨ ಕ್ಯಾರಟ್ ಬಂಗಾರದ ದರದಲ್ಲಿ ೨೫೦ ರೂ. ಏರಿಕೆಯಾಗಿದ್ದು, ೪೭,೫೫೦ ರೂ.ಗೆ ವೃದ್ಧಿಸಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ ೨೦೦ ರೂ. ಏರಿಕೆಯಾಗಿದ್ದು, ೬೧,೧೦೦ ರೂ.ಗೆ ಏರಿಕೆಯಾಗಿದೆ. ಪ್ಲಾಟಿನಮ್ ದರದಲ್ಲಿ ೪೦ ರೂ. ಹೆಚ್ಚಳವಾಗಿದ್ದು, ೧೦ ಗ್ರಾಮ್ ದರ ೨೨,೪೮೦ ರೂ.ಗೆ ಜಿಗಿದಿದೆ.
ಅಂತಾರಾಷ್ಟ್ರೀಯ ದರ ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಬಂಗಾರದ ದರದಲ್ಲಿ ಏರಿಳಿತವಾಗುತ್ತದೆ.