ಬೆಂಗಳೂರು: ಬಂಗಾರದ ದರದದಲ್ಲಿ ಸೋಮ ವಾರ 330 ರೂ. ಏರಿಕೆಯಾಗಿದೆ. (Gold Price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 56340 ರೂ.ಗೆ ವೃದ್ಧಿಸಿದೆ.
22 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರದಲ್ಲಿ 300 ರೂ. ಏರಿಕೆಯಾಗಿದ್ದು, 51,650 ರೂ.ಗೆ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 500 ರೂ. ಹೆಚ್ಚಳವಾಗಿದ್ದು, 74,900 ರೂ.ಗೆ ವೃದ್ಧಿಸಿದೆ. ಪ್ಲಾಟಿನಮ್‌ನ ಪ್ರತಿ 10 ಗ್ರಾಮ್ ದರದಲ್ಲಿ 30 ರೂ. ಇಳಿಕೆಯಾಗಿದ್ದು, 28,800 ರೂ.ಗೆ ಇಳಿಕೆಯಾಗಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ದಟ್ಟವಾಗಿರುವ ಈ ವರ್ಷ ಬಂಗಾರ ಮತ್ತು ಬೆಳ್ಳಿಯ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.