Site icon Vistara News

Gold Price | ಚಿನ್ನದ ದರದಲ್ಲಿ 530 ರೂ. ಜಿಗಿತ, 55,630 ರೂ.ಗೆ ಏರಿಕೆ, ಬೆಳ್ಳಿಯ ದರದಲ್ಲಿ 1,000 ರೂ. ಹಚ್ಚಳ

gold bond

ಬೆಂಗಳೂರು: ಬಂಗಾರದ ದರದದಲ್ಲಿ ಮಂಗಳವಾರ 530 ರೂ. ಏರಿಕೆಯಾಗಿದೆ. (Gold Price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 55,630 ರೂ.ಗೆ ವೃದ್ಧಿಸಿದೆ.‌

22 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರದಲ್ಲಿ 500 ರೂ. ಏರಿಕೆಯಾಗಿದ್ದು, 51,000 ರೂ.ಗೆ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 1,000 ರೂ. ಹೆಚ್ಚಳವಾಗಿದ್ದು, 75,500 ರೂ.ಗೆ ವೃದ್ಧಿಸಿದೆ. ಪ್ಲಾಟಿನಮ್‌ನ ಪ್ರತಿ 10 ಗ್ರಾಮ್‌ ದರದಲ್ಲಿ 470 ರೂ. ಏರಿಕೆಯಾಗಿದ್ದು, 28,880 ರೂ.ಗೆ ಹೆಚ್ಚಳವಾಗಿದೆ.

ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ದಟ್ಟವಾಗಿರುವ ಈ ವರ್ಷ ಬಂಗಾರ ಮತ್ತು ಬೆಳ್ಳಿಯ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Exit mobile version