ಬೆಂಗಳೂರು: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು 880 ರೂ. ಏರಿಕೆಯಾಗಿದೆ. ಪ್ರತಿ 10 ಗ್ರಾಮ್‌ಗೆ 54,870 ರೂ.ಗೆ (24 ಕ್ಯಾರಟ್) ವೃದ್ಧಿಸಿದೆ. 22 ಕ್ಯಾರಟ್ ಅಥವಾ ಆಭರಣ ಚಿನ್ನದ ದರದಲ್ಲಿ ೧೫೦ ರೂ. ಏರಿದ್ದು, 50,300 ರೂ.ಗೆ (Gold price ) ಹೆಚ್ಚಳವಾಗಿದೆ.
ಬೆಳ್ಳಿಯ ದರದಲ್ಲಿ ಯಥಾಸ್ಥಿತಿಯಲ್ಲಿದ್ದು, ಪ್ರತಿ ಕೆಜಿಗೆ 74,700 ರೂ.ಗಳಾಗಿದೆ. ಪ್ಲಾಟಿನಮ್ ದರದಲ್ಲಿ 10 ಗ್ರಾಮ್‌ಗೆ 30 ರೂ. ಇಳಿಕೆಯಾಗಿದ್ದು, 26,600 ರೂ.ಗೆ ತಗ್ಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.