Site icon Vistara News

Gold price | ಚಿನ್ನದ ದರ ಎರಡು ದಿನಗಳಲ್ಲಿ 810 ರೂ. ಇಳಿಕೆ, ಖರೀದಿಗೆ ಸಕಾಲ

gold

ಬೆಂಗಳೂರು: ಚಿನ್ನದ ದರದಲ್ಲಿ ಗುರುವಾರ ೫೪೦ ರೂ. ಇಳಿಕೆಯಾಗಿದ್ದು ಬೆಂಗಳೂರಿನಲ್ಲಿ (Gold price) ೨೪ ಕ್ಯಾರಟ್‌ನ ಪ್ರತಿ ೧೦ ಗ್ರಾಮ್‌ ಬಂಗಾರದ ದರ ೫೧,೩೨೦ ರೂ.ಗೆ ಏರಿಕೆಯಾಗಿದೆ. ಬುಧವಾರ ಕೂಡ ೨೭೦ ರೂ. ಇಳಿಕೆಯಾಗಿತ್ತು. ಹಳದಿ ಲೋಹದ ದರ ಕಳೆದ ಎರಡು ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ತಗ್ಗಿದೆ. ಬೆಳ್ಳಿಯ ದರ ಕೂಡ ಕೆಲವು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ಈಗ ಕೆಳ ಮಟ್ಟದಲ್ಲಿದೆ.

ಆಭರಣ ಚಿನ್ನ ಅಥವಾ ೨೨ ಕ್ಯಾರಟ್‌ ಬಂಗಾರದ ದರದಲ್ಲಿ ೫೦೦ ರೂ. ಇಳಿಕೆಯಾಗಿದ್ದು, ೪೬,೫೫೦ ರೂ.ಗೆ ವೃದ್ಧಿಸಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ ೭೨೦ ರೂ. ಏರಿಕೆಯಾಗಿದ್ದು, ೫೮,೦೦೦ ರೂ.ಗೆ ಏರಿಕೆಯಾಗಿದೆ. ಪ್ಲಾಟಿನಮ್‌ ದರದಲ್ಲಿ ೧೫೦ ರೂ. ಹೆಚ್ಚಳವಾಗಿದ್ದು, ೧೦ ಗ್ರಾಮ್‌ ದರ ೨೧,೫೬೦ ರೂ.ಗೆ ಜಿಗಿದಿದೆ.

ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಮತ್ತಷ್ಟು ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ವರ್ಣ ದರ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ದರ ಮತ್ತು ಡಾಲರ್‌ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಬಂಗಾರದ ದರದಲ್ಲಿ ಏರಿಳಿತವಾಗುತ್ತದೆ. ಚಿನ್ನದ ದರ ಇಳಿಕೆ ತಾತ್ಕಾಲಿಕವಾಗಿದ್ದು, ಮುಂಬರುವ ದಿನಗಳಲ್ಲಿ ದರ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

Exit mobile version