Site icon Vistara News

Gold price | ಬಂಗಾರದ ದರ 50,000 ರೂ.ಗಳತ್ತ ಏರುಗತಿ, 6 ದಿನಗಳಲ್ಲಿ 1,070 ರೂ. ಹೆಚ್ಚಳ

gold bond

ಬೆಂಗಳೂರು: ಬಂಗಾರದ ದರ 50,000 ರೂ.ಗಳ ಗಡಿಯತ್ತ ದಾಪುಗಾಲಿಡುತ್ತಿದೆ. ಕಳೆದ ಆರು ದಿನಗಳಲ್ಲಿ 1,070 ರೂ. (Gold price ) ಏರಿಕೆಯಾಗಿದೆ.

ಪ್ರತಿ ಹತ್ತು ಗ್ರಾಮ್‌ನ 24 ಕ್ಯಾರಟ್‌ ಚಿನ್ನದ ದರ 49,500 ರೂ.ಗೆ ತಲುಪಿದೆ. ಸೋಮವಾರ ದರ ಯಥಾಸ್ಥಿತಿಯಲ್ಲಿದ್ದರೂ, ಕಳೆದ ಆರು ದಿನಗಳಲ್ಲಿ ಏರಿಕೆ ದಾಖಲಿಸಿದೆ. 22 ಕ್ಯಾರಟ್‌ ಅಥವಾ ಆಭರಣ ಚಿನ್ನದ ದರ 54,000 ರೂ.ನಷ್ಟಿತ್ತು. ಒಂದು ಕೆ.ಜಿ ಬೆಳ್ಳಿಯ ದರ 71,600 ರೂ. ಇತ್ತು. ಬೆಳ್ಳಿಯ ದರದಲ್ಲಿ ಕೂಡ ಕಳೆದ ಆರು ದಿನಗಳಲ್ಲಿ 3,600 ರೂ. ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಇತ್ತೀಚೆಗೆ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಕೆಯನ್ನು ಮಂದಗತಿಗೊಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಂಗಾರದತ್ತ ಹೂಡಿಕೆದಾರರು ಆಕರ್ಷಿತರಾಗಿದ್ದಾರೆ. ಇದು ದರ ಏರಿಕೆಗೆ ಕಾರಣವಾಗಿದೆ. ವಿದೇಶಿ ದರಗಳು ದೇಶಿ ಮಾರುಕಟ್ಟೆ ಮೇಲೆಯೂ ಪ್ರಭಾವ ಬೀರುತ್ತವೆ. ಏಕೆಂದರೆ ಭಾರತ ಚಿನ್ನದ ಬೇಡಿಕೆ ನೀಗಿಸಲು ಆಮದನ್ನು ನೆಚ್ಚಿಕೊಂಡಿದೆ.

Exit mobile version