Site icon Vistara News

Gold rate : ಚಿನ್ನ ಖರೀದಿಸುತ್ತಿದ್ದೀರಾ, ಕಳೆದ 2 ದಿನದಲ್ಲಿ 650 ರೂ. ಇಳಿಕೆಯ ಲಾಭ ನಿಮ್ಮದಾಗಿಸಿ

Gold rate

ಬೆಂಗಳೂರು: ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ (Gold rate) ಒಟ್ಟು 650 ರೂ. ಇಳಿಕೆಯಾಗಿದೆ. ಬಂಗಾರ ಖರೀದಿಸುವವರು ಇದರ ಲಾಭವನ್ನು ಪಡೆಯಬಹುದು. 24 ಕ್ಯಾರಟ್‌ ಬಂಗಾರದ ದರ ಬೆಂಗಳೂರಿನಲ್ಲಿ 60,760 ರೂ.ಗಳಾಗಿದ್ದು, ಶುಕ್ರವಾರ 160 ರೂ. ಇಳಿದಿದೆ. ಗುರುವಾರ 450 ರೂ. ಇಳಿದಿತ್ತು ಎಂಬುದನ್ನು ಗಮನಿಸಬಹುದು. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನದ ದರದಲ್ಲಿ 150 ರೂ. ತಗ್ಗಿದ್ದು, 55,700 ರೂ.ಗೆ ಇಳಿದಿದೆ. ಪ್ರತಿ ಕೆ.ಜಿ ಬೆಳ್ಳಿ ದರದಲ್ಲಿ 300 ರೂ. ಇಳಿದಿದ್ದು, 76,200 ರೂ.ಗೆ ತಗ್ಗಿದೆ.

ಭಾರತವು ಶೀಘ್ರದಲ್ಲಿಯೇ ಯುಎಇಯಿಂದ (Gold import) ರಿಯಾಯಿತಿ ಸುಂಕದಲ್ಲಿ 140 ಟನ್‌ ಬಂಗಾರವನ್ನು ಖರೀದಿಸಲು ಚಿಂತನೆ ನಡೆಸಿದೆ. ಆಮದು ಕೋಟಾ ವ್ಯವಸ್ಥೆಯ ಅಡಿಯಲ್ಲಿ (Tariff rate quota) ರಿಯಾಯಿತಿ ಸುಂಕದಲ್ಲಿ ಚಿನ್ನ ಆಮದಿಗೆ ಪ್ರಸ್ತಾಪಿಸಲಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಇದು ನಡೆಯುವ ನಿರೀಕ್ಷೆ ಇದೆ.

ಇದರಿಂದ ಸರ್ಕಾರಕ್ಕೆ ಕಂದಾಯ ನಷ್ಟವಾಗದಂತೆ ನೋಡಿಕೊಳ್ಳಲಾಗುವುದು. ಉತ್ಪಾದಕರು ಮತ್ತು ಜ್ಯುವೆಲರ್ಸ್‌ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಮದು ಕೋಟಾ ವ್ಯವಸ್ಥೆಯಲ್ಲಿ ಆಮದುದಾರರಿಗೆ ಅರ್ಹತೆಯ ನಿಯಮಗಳು ಸಡಿಲವಾಗಿರುತ್ತವೆ. ಭಾರತ ಮತ್ತು ಯುಎಇ ನಡುವಣ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ಇದು ಸಾಧ್ಯವಾಗಲಿದೆ (India-UAE Comprehensive Economic Partnership Agreement) 2023-24ರ ಆರ್ಥಿಕ ಸಾಲಿಗೆ ಇದು ಅನ್ವಯವಾಗಲಿದೆ.

ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್‌ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: Gold rate : ಚಿನ್ನದ ದರದಲ್ಲಿ 330 ರೂ. ಇಳಿಕೆ, ಪ್ರಮುಖ ನಗರಗಳಲ್ಲಿ ದರ ಎಷ್ಟು? ಇಲ್ಲಿದೆ ಡಿಟೇಲ್ಸ್

Exit mobile version