Site icon Vistara News

Gold price | ಅಮೆರಿಕದಲ್ಲಿ ಬಡ್ಡಿ ದರ ಏರಿಕೆ, ಬಂಗಾರದ ದರದಲ್ಲಿ 160 ರೂ. ಇಳಿಕೆ, ಬೆಳ್ಳಿ 500 ರೂ. ಅಗ್ಗ

gold bond

ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿ 10 ಗ್ರಾಮ್‌ ಚಿನ್ನದ ದರದಲ್ಲಿ (24 ಕ್ಯಾರಟ್)‌ 160 ರೂ.ಗಳ ಇಳಿಕೆಯಾಗಿದೆ. ಶುಕ್ರವಾರ ದರ 51,000 ರೂ.ನಷ್ಟಿತ್ತು. (Gold price) ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಚಿನ್ನದ ದರ 10 ಗ್ರಾಮ್‌ಗೆ 46,750 ರೂ.ನಷ್ಟಿತ್ತು.

ಬೆಳ್ಳಿಯ ಪ್ರತಿ ಕೆ.ಜಿ ದರ 64,000 ರೂ.ಗಳಾಗಿದ್ದು, 500 ರೂ. ಇಳಿಕೆಯಾಗಿದೆ. ಪ್ಲಾಟಿನಮ್‌ನ ಪ್ರತಿ 10 ಗ್ರಾಮ್‌ ದರವು 24,740 ರೂ.ಗೆ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ದರವನ್ನು ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ದೇಶೀಯ ದರಗಳು ಬದಲಾಗುತ್ತಿರುತ್ತವೆ. ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಏರಿಸಿದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಇಳಿಮುಖವಾಗಿದೆ. ಡಾಲರ್‌ ಪ್ರಾಬಲ್ಯ ಕೂಡ ಪ್ರಭಾವ ಬೀರಿದೆ.

Exit mobile version