ಬೆಂಗಳೂರು: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ 660 ಇಳಿಕೆಯಾಗಿದೆ. ಶುಕ್ರ ವಾರ ಪ್ರತಿ 10 ಗ್ರಾಮ್‌ನ ದರ 57,320 ರೂ.ನಷ್ಟಿತ್ತು. (24 ಕ್ಯಾರಟ್) . 22 ಕ್ಯಾರಟ್ ಅಥವಾ ಆಭರಣ ಚಿನ್ನದ ದರ ೫೨,550 ರೂ.ನಷ್ಟಿತ್ತು. (Gold rate )
ಬೆಳ್ಳಿಯ ದರದಲ್ಲಿ 400 ರೂ. ಇಳಿಕೆಯಾಗಿದ್ದು, ಪ್ರತಿ ಕೆಜಿಗೆ ೭4,600 ರೂ.ಗೆ ತಗ್ಗಿದೆ. ಪ್ಲಾಟಿನಮ್ ದರದಲ್ಲಿ 740 ರೂ. ಇಳಿಕೆಯಾಗಿದ್ದು, 27,420 ರೂ.ನಷ್ಟಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.