ಬೆಂಗಳೂರು: ಬಂಗಾರದ ದರದಲ್ಲಿ 270 ರೂ. ಏರಿಕೆಯಾಗಿದ್ದು, ಪ್ರತಿ 10 ಗ್ರಾಮ್ಗೆ 50,940 ರೂ. (Gold price) ಹೆಚ್ಚಳವಾಗಿದೆ.
ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರದಲ್ಲಿ 250 ರೂ. ಹೆಚ್ಚಳವಾಗಿದ್ದು, 46,700 ರೂ.ಗೆ ಹೆಚ್ಚಳವಾಗಿದೆ. ಬೆಳ್ಳಿಯ ದರದಲ್ಲಿ 200 ರೂ. ಏರಿಕೆಯಾಗಿದ್ದು, ಕೆ.ಜಿಗೆ 58,200 ರೂ.ಗೆ ವೃದ್ಧಿಸಿದೆ.
ಕಳೆದ ಕೆಲ ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಬಂಗಾರದ ದರ ಇದೀಗ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಗಳು ದೇಶಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ. ಆಗಸ್ಟ್ ೧, ೨೦೨೨ಕ್ಕೆ ಬೆಂಗಳೂರಿನಲ್ಲಿ ೨೪ ಕ್ಯಾರಟ್ ಚಿನ್ನದ ದರ ೫೧,೪೩೦ ರೂ. ಇತ್ತು. ಆಗಸ್ಟ್ ೩೧ಕ್ಕೆ ೫೧,೩೨೦ ರೂ.ಗೆ ಇಳಿದಿತ್ತು.