Site icon Vistara News

Gold rate : ಬಂಗಾರದ ದರದಲ್ಲಿ 830 ರೂ. ಜಿಗಿತ, ಬೆಳ್ಳಿ 1,400 ರೂ. ದುಬಾರಿ, ಖರೀದಿದಾರರು ಗಮನಿಸಿ

gold rate in bangalore

ಬೆಂಗಳೂರು: ಬಂಗಾರದ ದರದಲ್ಲಿ ಭಾನುವಾರ 830 ರೂ. ಏರಿಕೆಯಾಗಿದ್ದು, ( Gold rate ) 24 ಕ್ಯಾರಟ್‌ನ ಪ್ರತಿ ಹತ್ತು ಗ್ರಾಮ್‌ ಚಿನ್ನದ ದರ 56,940 ರೂ.ಗೆ ವೃದ್ಧಿಸಿದೆ. 22 ಕ್ಯಾರಟ್‌ ಚಿನ್ನದ ದರದಲ್ಲಿ 750 ರೂ. ವೃದ್ಧಿಸಿದ್ದು, 52,200 ರೂ.ಗೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಬೆಳ್ಳಿ ದರ (silver price) 68,700 ರೂ.ಗೆ ಏರಿಕೆಯಾಗಿದೆ. ಅಂದರೆ 1400 ರೂ. ವೃದ್ಧಿಸಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್‌ (28 ಗ್ರಾಮ್)‌ ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1950 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Exit mobile version