ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ (ಆಗಸ್ಟ್ 6) ಬಂಗಾರದ ದರ (Gold Rate Today) 200 ರೂಪಾಯಿ ಏರಿಕೆಯಾಗಿದೆ. 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 60,160 ರೂ. ಇದೆ. ಶನಿವಾರ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 59,950 ರೂ. ಇತ್ತು. ಇದರೊಂದಿಗೆ ಒಂದು ದಿನದಲ್ಲಿ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 210 ರೂಪಾಯಿ ಏರಿಕೆಯಾದಂತಾಗಿದೆ.
ಹಾಗೆಯೇ, 22 ಕ್ಯಾರಟ್‌ನ 10 ಗ್ರಾಂ ಚಿನ್ನದ ದರದಲ್ಲೂ 200 ರೂ. ಏರಿಕೆಯಾಗಿದೆ. ಶನಿವಾರ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು 54,950 ರೂ. ಇತ್ತು. ಆದರಿದು ಭಾನುವಾರ 55,150 ರೂ. ಆಗಿದೆ. ಶನಿವಾರ ಕೂಡ ಬಂಗಾರದ ಬೆಲೆಯು 22 ಕ್ಯಾರಟ್‌ಗೆ 200 ರೂ., 24 ಕ್ಯಾರಟ್‌ಗೆ 210 ರೂ. ಏರಿಕೆಯಾಗಿತ್ತು. ಶುಕ್ರವಾರ ಮಾತ್ರ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ಯಾವ ನಗರದಲ್ಲಿ ಚಿನ್ನದ ಬೆಲೆ ಇಂದು ಎಷ್ಟಿದೆ?
ನಗರ | 22 ಕ್ಯಾರಟ್ | 24 ಕ್ಯಾರಟ್ |
ದಿಲ್ಲಿ | 55,300 | 60,310 |
ಮುಂಬಯಿ | 55,150 | 60,160 |
ಬೆಂಗಳೂರು | 55,150 | 60,160 |
ಹೈದರಾಬಾದ್ | 55,150 | 60,160 |
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 160 ರೂ. ಏರಿಕೆ, ಬೆಳ್ಳಿ ದರ ಯಥಾಸ್ಥಿತಿ
ಜ್ಯುವೆಲ್ಲರಿ ರಫ್ತು
ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-19 ಬರುವುದಕ್ಕೆ ಮುನ್ನ ೧೨.೪ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.