ನವ ದೆಹಲಿ: ಜಾಗತಿಕ ಬ್ಯಾಂಕಿಂಗ್ ಸಂಸ್ಥೆ ಗೋಲ್ಡ್‌ಮನ್ ಸ್ಯಾಕ್ಸ್ ಭಾರತದ 2022ನೇ ಇಡೀ ವರ್ಷದ ಜಿಡಿಪಿ ಮುನ್ನೋಟವನ್ನು 7.6% ರಿಂದ 7%ಕ್ಕೆ (GDP) ಕಡಿತಗೊಳಿಸಿದೆ.
ಏಪ್ರಿಲ್-ಜೂನ್ ತ್ರೈಮಾಸಿಕದ ಜಿಡಿಪಿ ಅಂಕಿ ಅಂಶಗಳು ಬುಧವಾರ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಗೋಲ್ಡ್‌ಮನ್ ಸ್ಯಾಕ್ಸ್ ತನ್ನ ಮುನ್ನೋಟದಲ್ಲಿ ಜಿಡಿಪಿ ಬೆಳವಣಿಗೆಯನ್ನು ಕಡಿತಗೊಳಿಸಿದೆ. ಏಪ್ರಿಲ್-ಜೂನ್ ತ್ರೈಮಾಸಿಕದ ಜಿಡಿಪಿ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಇಲ್ಲದಿರುವುದರಿಂದ ಮುನ್ನೋಟವನ್ನು ಕಡಿತಗೊಳಿಸಿರುವುದಾಗಿ ತಿಳಿಸಿದೆ.
ಭಾರತದಲ್ಲಿ ಬೇಡಿಕೆ ನಿರೀಕ್ಷೆಗೆ ತಕ್ಕಂತೆ ಮರುಕಳಿಸಿದ್ದರೂ, ಭಾರಿ ಪ್ರಮಾಣದಲ್ಲಿ ದಾಸ್ತಾನು ಸಂಗ್ರಹವಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಗೋಲ್ಡ್‌ಮನ್ ಸ್ಯಾಕ್ಸ್‌ನ ಆರ್ಥಿಕ ತಜ್ಞ ಶಂತನು ಸೇನಗುಪ್ತಾ ತಿಳಿಸಿದ್ದಾರೆ.
2022ರ ಇಡೀ ವರ್ಷದ ಜಿಡಿಪಿ ಮುನ್ನೋಟವನ್ನು 7.6%ರಿಂದ 7% ಕ್ಕೆ ಇಳಿಸಿರುವ ಗೋಲ್ಡ್‌ಮನ್ ಸ್ಯಾಕ್ಸ್, 2022-23 ರ ಸಾಲಿನ ಜಿಡಿಪಿ ಮುನ್ನೋಟವನ್ನು 7.2%ಕ್ಕೆ ಸ್ವಲ್ಪ ಇಳಿಸಿದೆ.
ಇದನ್ನೂ ಓದಿ: GDP | ಏಪ್ರಿಲ್-ಜೂನ್ ಅವಧಿಯ ಜಿಡಿಪಿ ಬೆಳವಣಿಗೆ 13.5%ಕ್ಕೆ ಏರಿಕೆ