Site icon Vistara News

Online gaming| ಆನ್‌ಲೈನ್‌ ಗೇಮ್‌ ವರ್ಗೀಕರಣಕ್ಕೆ ಸರ್ಕಾರದ ನಿಯೋಜಿತ ಸಮಿತಿ ಶಿಫಾರಸು

online gaming

ನವ ದೆಹಲಿ: ಸರ್ಕಾರ ಆನ್‌ಲೈನ್‌ ಗೇಮಿಂಗ್‌ ವಲಯವನ್ನು ನಿಯಂತ್ರಿಸಬೇಕು. ಆನ್‌ಲೈನ್‌ ಜೂಜು ಮತ್ತು ನಿಷೇಧಿತ ಮಾದರಿಗಳನ್ನು ತಡೆಯಬೇಕು. ಜತಗೆ ಕೌಶಲ ಆಧಾರಿತ ಆನ್‌ಲೈನ್‌ ಗೇಮಿಂಗ್‌ (Online gaming) ಅನ್ನು ವರ್ಗೀಕರಿಸಿ, ಅವುಗಳಿಗೆ ಉತ್ತೇಜನ ನೀಡಬೇಕು ಎಂದು ಸರ್ಕಾರಿ ನಿಯೋಜಿತ ಸಮಿತಿ ಶಿಫಾರಸು ಮಾಡಿದೆ.

ದೇಶದಲ್ಲಿ ಆನ್‌ಲೈನ್‌ ಗೇಮಿಂಗ್‌ ವಲಯವನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ವರದಿ ಸಲ್ಲಿಸಲು ಸಮಿತಿಯನ್ನು ರಚಿಸಿತ್ತು. ಭಾರತದ ಗೇಮಿಂಗ್‌ ಸ್ಟಾರ್ಟಪ್‌ಗಳಾದ ಡ್ರೀಮ್‌ 11 ಮತ್ತು ಮೊಬೈಲ್‌ ಪ್ರೀಮಿಯರ್‌ ಲೀಗ್‌ನಲ್ಲಿ ಟೈಗರ್‌ ಗ್ಲೋಬಲ್‌ ಮತ್ತು ಸಿಕೋಯಿಯಾ ಕ್ಯಾಪಿಟಲ್‌ ಇತ್ಯಾದಿ ಕಂಪನಿಗಳಿಂದ ವಿದೇಶಿ ಹೂಡಿಕೆ ನಡೆದಿದೆ.

ಭಾರತದಲ್ಲಿ ಮೊಬೈಲ್‌ ಗೇಮಿಂಗ್‌ ಉದ್ದಿಮೆಯು 2025ರ ವೇಳೆಗೆ 500 ಕೋಟಿ ಡಾಲರ್‌ (39,500 ಕೋಟಿ ರೂ.) ವಹಿವಾಟು ನಡೆಸುವ ವಲಯವಾಗಿ ಬೆಳೆಯುವ ನಿರೀಕ್ಷೆ ಇದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಆನ್‌ಲೈನ್‌ ಗೇಮಿಂಗ್‌ ನಿಯಂತ್ರಣಕ್ಕೆ ಹೊಸ ನಿಯಂತ್ರಕ ವ್ಯವಸ್ಥೆಯನ್ನು ಅಳವಡಿಸುವುದು ಸೂಕ್ತ. ಕೌಶಲ ಆಧಾರಿತ ಆನ್‌ಲೈನ್‌ ಗೇಮ್‌ಗಳನ್ನು ವರ್ಗೀಕರಿಸಬೇಕು ಹಾಗೂ ಅವುಗಳನ್ನು ಉತ್ತೇಜಿಸಬೇಕು ಎಂದು 108 ಪುಟಗಳ ವರದಿಯಲ್ಲಿ ಸಲಹೆ ನೀಡಲಾಗಿದೆ.

Exit mobile version