Site icon Vistara News

SBI Shares : ಅಜ್ಜ ಹೂಡಿಕೆ ಮಾಡಿದ್ದು 500, ಮೊಮ್ಮಗನಿಗೆ ಸಿಕ್ಕಿದ್ದು 3.75 ಲಕ್ಷ ರೂಪಾಯಿ; ಇದುವೇ ಷೇರು ಪೇಟೆ ಮ್ಯಾಜಿಕ್​!

SBI Shares

ದೆಹಲಿ: ಚಂಡೀಗಢದ ವೈದ್ಯರೊಬ್ಬರು ತಮ್ಮ ಅಜ್ಜ ಮಾಡಿದ ಕೆಲವು ಹಳೆಯ ಹೂಡಿಕೆ ನೋಡಿ ಸಿಕ್ಕಾಪಟ್ಟೆ ಆಶ್ಚರ್ಯಗೊಂಡಿದ್ದಾರೆ. ಡಾ. ತನ್ಮಯ್ ಮೋತಿವಾಲಾ ಅವರು ತಮ್ಮ ಕುಟುಂಬದ ಆಸ್ತಿ ಪತ್ರಗಳನ್ನು ನೋಡುತ್ತಿರುವಾಗ ಸ್ಟೇಟ್ ಬ್ಯಾಂಕ್  ಆಫ್ ಇಂಡಿಯಾದ ಷೇರು ಪ್ರಮಾಣಪತ್ರವೊಂದು ಸಿಕ್ಕಿದೆ. 1994 ರಲ್ಲಿ ಅವರ ಅಜ್ಜ ರೂ 500 ಮೌಲ್ಯದ ಎಸ್‌ ಬಿಐ ಷೇರುಗಳನ್ನು (SBI Shares) ಖರೀದಿಸಿರುವುದು ತಿಳಿದುಬಂದಿದೆ. ಆದರೆ, ಅವರ ಅಜ್ಜ ಅದನ್ನು ಎಂದಿಗೂ ಮಾರಾಟ ಮಾಡದೇ ಮರೆತೇ ಬಿಟ್ಟಿದ್ದರಂತೆ.

ಆರಂಭಿಕ ಹೂಡಿಕೆ ಈಗಿನ ಮೊತ್ತಕ್ಕೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ. ಎಸ್‌ ಬಿಐ ಷೇರುಗಳು ಈಗ ರೂ. 3.75 ಲಕ್ಷ ಮೌಲ್ಯದ್ದಾಗಿದೆ ಎಂದು ಡಾ. ತನ್ಮಯ್ ಬಹಿರಂಗಪಡಿಸಿದ್ದಾರೆ, ಮೂರು ದಶಕಗಳಲ್ಲಿ ಅವರಿಗೆ 750x ಆದಾಯವನ್ನು ನೀಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ, ಡಾ ಮೋತಿವಾಲಾ, ”ನನ್ನ ಅಜ್ಜ-ಅಜ್ಜಿ 1994 ರಲ್ಲಿ 500 ರೂ. ಮೌಲ್ಯದ ಎಸ್ ಬಿ ಐ ಷೇರುಗಳನ್ನು ಖರೀದಿ ಮಾಡಿ ಅದನ್ನು ಮರೆತುಬಿಟ್ಟಿದ್ದರು. ಅವರು ಅದನ್ನು ಏಕೆ ಖರೀದಿಸಿದರು ಮತ್ತು ಇಟ್ಟುಕೊಂಡಿದ್ದರು ಎಂಬುದು ತಿಳಿದಿಲ್ಲ. ಕುಟುಂಬದ ಆಸ್ತಿ ಪತ್ರಗಳನ್ನು ನೋಡುವಾಗ ನನಗೆ ಇಂತಹ ಕೆಲವು  ಪತ್ರಗಳು ಸಿಕ್ಕಿವೆ.” ಎಂದು ಹೇಳಿದ್ದಾರೆ.

ಹಾಗೇ ತಮ್ಮ ಕುಟುಂಬ ಸ್ಟಾಕ್ ಪ್ರಮಾಣಪತ್ರಗಳನ್ನು ಡಿಮ್ಯಾಟ್ ಆಗಿ ಬದಲಾಯಿಸುವುದಕ್ಕೆ ನಾವು ಸಲಹೆಗಾರರ ಸಹಾಯವನ್ನು ಪಡೆದುಕೊಂಡಿದ್ದೇವೆ. ಏಕೆಂದರೆ ಈ ಪ್ರಕ್ರಿಯೆಯು ತುಂಬಾ ಕಠಿಣ ಮತ್ತು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. (ಹೆಸರು, ವಿಳಾಸ, ಸಹಿ ಹೊಂದಾಣಿಕೆ ಇತ್ಯಾದಿಗಳಲ್ಲಿ ಕಾಗುಣಿತ ತಪ್ಪುಗಳು ಇರಬಹುದು.

ಇದನ್ನೂ ಓದಿ: Viral News : ಟಾಯ್ಲೆಟ್​ಗೆ ಹೋಗುವ ಅರ್ಜೆಂಟಲ್ಲಿ ಸ್ಪೈಡರ್​ ಮ್ಯಾನ್ ಆದ ರೈಲು ಪ್ರಯಾಣಿಕ!

ತನಗೆ ನಗದಿನ ಅಗತ್ಯವಿಲ್ಲದ ಕಾರಣ ಪ್ರಸ್ತುತ ಈ ಷೇರುಗಳನ್ನು ಹಾಗೇ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ. ಇವರ ಪೋಸ್ಟ್  ವೈರಲ್ ಆಗುತ್ತಿದ್ದಂತೆ, ಇನ್ನಷ್ಟು ಮಂದಿ ಇದೇ ರೀತಿಯ ಕಥೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಒಬ್ಬರು, ”ಇದು ನಿಜವಾದ ಹೂಡಿಕೆ. ನಮ್ಮ ಹಿರಿಯರಿಂದ ಕಲಿಯಬೇಕು’ ಎಂದಿದ್ದಾರೆ.

ಮತ್ತೊಬ್ಬರು ಹೀಗೆ ಬರೆದಿದ್ದಾರೆ, ”ನನ್ನ ಅಜ್ಜ ಎಸ್‌ಬಿಐನ 500 ಷೇರುಗಳನ್ನು ಹೊಂದಿದ್ದರು, ಅವರು ಉದ್ಯೋಗಿಯಾಗಿದ್ದರು, ನನ್ನ ತಂದೆಯ ಮರಣದ ನಂತರ, ನಾನು ಈ ಬಾಂಡ್‌ಗಳನ್ನು ಪಡೆದುಕೊಂಡೆ, ನಂತರ ಹತ್ತಿರದ ಷೇರು ಬ್ರೋಕರ್‌ ಗೆ ಹೋಗಿ ಕೆಲವು ಕಾರ್ಯವಿಧಾನದ ನಂತರ, ನಾವು ಅದನ್ನು ಮಾರಾಟ ಮಾಡಲು ಸಾಧ್ಯವಾಯಿತು, ನಾನು ಈಕ್ವಿಟಿಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದೇನೆ ಎಂದಿದ್ದಾರೆ.

Exit mobile version