Site icon Vistara News

GST Cess rate : ಪಾನ್‌ ಮಸಾಲಾ, ತಂಬಾಕು ಉತ್ಪನ್ನದ ರಿಟೇಲ್‌ ದರ ಆಧರಿಸಿದ ಜಿಎಸ್‌ಟಿ ಜಾರಿ

gst

gst

ನವ ದೆಹಲಿ: ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳು, ಪಾನ್‌ ಮಸಾಲಾ ಮತ್ತು ಗುಟ್ಕಾದ ಮೇಲಿನ ತೆರಿಗೆ ಲೆಕ್ಕಾಚಾರ ವಿಧಾನದಲ್ಲಿ ಕೇಂದ್ರ ಸರ್ಕಾರ ಹೊಸ ಬದಲಾವಣೆಯನ್ನು ಏಪ್ರಿಲ್‌ 1ರಿಂದ ಜಾರಿಗೊಳಿಸಿದೆ. ಇವುಗಳ ರಿಟೇಲ್‌ ದರವನ್ನು (retail price) ಆಧರಿಸಿ ತೆರಿಗೆ ನಿಗದಿಯಾಗಲಿದೆ. ಈ ಹಿಂದೆ ಉತ್ಪನ್ನದ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತಿತ್ತು. (Ad Valorem) ಹಳೆಯ ಪದ್ಧತಿಯನ್ನು ಕೈ ಬಿಡಲಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಹಣಕಾಸು ವಿಧೇಯಕದಲ್ಲಿ (finance bill) ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯಿದೆ 2017ಕ್ಕೆ ತಿದ್ದುಪಡಿ ತಂದಿದೆ. ಮಾರ್ಚ್‌ 31ರಂದು ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ಪಾನ್‌ ಮಸಾಲಾ ಪ್ಯಾಕೇಟ್‌ನ ರಿಟೇಲ್‌ ದರದ 0.32 ಪಟ್ಟು ಹೆಚ್ಚಿನ ಜಿಎಸ್‌ಟಿ ಸೆಸ್ ಇರಲಿದೆ. ಸಿಗರೇಟ್‌ನ ರಿಟೇಲ್‌ ದರದ 0.69 ಪಟ್ಟು ಹೆಚ್ಚಿನ ಸೆಸ್‌ ಅನ್ವಯವಾಗಲಿದೆ.

ಹಣಕಾಸು ವಿಧೇಯಕವು ರಿಟೇಲ್‌ ಸೇಲ್‌ ದರ (retail sale price) ಬಗ್ಗೆ ವ್ಯಾಖ್ಯಾನವನ್ನು ನೀಡಿದ್ದು, ಎಲ್ಲ ತೆರಿಗೆ, ಸಾರಿಗೆ ಶುಲ್ಕ, ಜಾಹೀರಾತು ವೆಚ್ಚ ಇತ್ಯಾದಿಗಳನ್ನು ರಿಟೇಲ್‌ ಸೇಲ್‌ ದರ ಒಳಗೊಂಡಿರುತ್ತದೆ. ಒಡಿಶಾದ ಹಣಕಾಸು ಮಂತ್ರಿ ನೀರಂಜನ್‌ ಪಜಾರಿ ನೇತೃತ್ವದ ಸಚಿವರುಗಳ ಮಟ್ಟದ ಸಮಿತಿಯ ಶಿಫಾರಸಿನ ಮೇರೆಗೆ ಪಾನ್‌ ಮಸಾಲಾ, ಗುಟ್ಕಾ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ನೀತಿಯನ್ನು ಪರಿಷ್ಕರಿಸಲಾಗಿದೆ. ತೆರಿಗೆ ಸೋರಿಕೆಯನ್ನು ತಡೆಯಲು ಈ ಹೊಸ ವಿಧಾನ ಸಹಕಾರಿಯಾಗಲಿದೆ ಎಂದು ವರದಿಯಾಗಿದೆ.

ಕಳೆದ ಫೆಬ್ರವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪಾನ್‌ ಮಸಾಲಾ, ಗುಟ್ಕಾ ಬಿಸಿನೆಸ್‌ನಲ್ಲಿ ತೆರಿಗೆ ಸೋರಿಕೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತ ವರದಿಯನ್ನು ಅನುಮೋದಿಸಲಾಗಿತ್ತು.

Exit mobile version