ನವ ದೆಹಲಿ: ಕಳೆದ ಫೆಬ್ರವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ 1,49,577 ಕೋಟಿ ರೂ.ಗೆ ಏರಿಕೆಯಾಗಿದೆ. ವಾರ್ಷಿಕ ಆಧಾರದಲ್ಲಿ 12% ಏರಿಕೆಯಾಗಿದೆ. ಇದರೊಂದಿಗೆ ಕಳೆದ 12 ತಿಂಗಳುಗಳಲ್ಲಿ ಸತತವಾಗಿ 1.4 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹ ಆದಂತಾಗಿದೆ (GST Collection) ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ಬುಧವಾರ ತಿಳಿಸಿದೆ. 2022ರ ಫೆಬ್ರವರಿಯಲ್ಲಿ ಜಿಎಸ್‌ಟಿ ಆದಾಯ 1,33,026 ಕೋಟಿ ರೂ.ಗಳಾಗಿತ್ತು.
ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ 27,662 ಕೋಟಿ ರೂ, ಎಸ್‌ಜಿಎಸ್ ಟಿ 34,915 ಕೋಟಿ ರೂ, ಐಜಿಎಸ್‌ಟಿ 75,069 ಕೋಟಿ ರೂ. ಆಗಿದೆ. ಸೆಸ್ 11,931 ಕೋಟಿ ರೂ. ಸಂಗ್ರಹವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಪ್ರಕಾರ 2022-23ರಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ 12% ಏರಿಕೆ ನಿರೀಕ್ಷಿಸಲಾಗಿದೆ.