Site icon Vistara News

GST on restaurant service | ರೆಸ್ಟೋರೆಂಟ್ ಸೇವೆಗೆ 5% ಜಿಎಸ್‌ಟಿ:‌ ಜಿಎಸ್‌ಟಿ ಪ್ರಾಧಿಕಾರ ತೀರ್ಪು

restaurent

ನವ ದೆಹಲಿ: ರೆಸ್ಟೋರೆಂಟ್‌ ಸೇವೆಗೆ 5% ಜಿಎಸ್‌ಟಿ ಅನ್ವಯವಾಗಲಿದೆ ಎಂದು (GST Authority for Advance Rulings) ಜಿಎಸ್‌ಟಿ ಆಥಾರಿಟಿ ಫಾರ್‌ ಅಡ್ವಾನ್ಸ್‌ ರೂಲಿಂಗ್ಸ್‌ನ (AAR) ಗುಜರಾತ್‌ ಘಟಕ ತೀರ್ಪು ನೀಡಿದೆ.

ರೆಸ್ಟೋರೆಂಟ್‌ಗಳಲ್ಲಿ ಒಳಗೆಯೇ ಆಹಾರ ಸೇವೆ ಅಥವಾ ಮನೆ ಬಾಗಿಲಿಗೇ ತರಿಸಿಕೊಂಡರೂ, ( ಡೋರ್‌ ಸ್ಟೆಪ್‌ ಡೆಲಿವರಿ) 5% ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಎಎಆರ್‌ ತಿಳಿಸಿದೆ.

ರಿದ್ಧಿ ಎಂಟರ್‌ಪ್ರೈಸಸ್‌ನ (ಅರ್ಜಿದಾರ) ಗ್ರಾಹಕರು ಈ ರೆಸ್ಟೋರೆಂಟ್‌ನಲ್ಲಿ ಆಹಾರ ಮತ್ತು ಪಾನೀಯಗಳನ್ನು ಅಲ್ಲಿಯೇ ಪಡೆದರೂ ಅಥವಾ ಮನೆ ಬಾಗಿಲಿಗೆ ತರಿಸಿಕೊಂಡರೂ, ಅದಕ್ಕೆ ರೆಸ್ಟೋರೆಂಟ್‌ ಸೇವೆ ಎಂದೇ ಪರಿಗಣನೆಯಾಗಲಿದ್ದು, 5% ಜಿಎಸ್‌ಟಿ ಅನ್ವಯವಾಗುತ್ತದೆ. ಇದಕ್ಕೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಇರುವುದಿಲ್ಲ ಎಂದಿದೆ.

ಹೀಗಿದ್ದರೂ, ರೆಸ್ಟೋರೆಂಟ್‌ನ ಕೌಂಟರ್‌ಗಳಲ್ಲಿ ಮೊದಲೇ ಸಿದ್ಧಪಡಿಸಿರುವ (readily available) ಆಹಾರ ಮತ್ತು ಪಾನೀಯಗಳಿದ್ದರೆ, ಉದಾಹರಣೆಗೆ ಚಾಕೊಲೇಟ್‌, ಚಿಪ್ಸ್‌ ಅಥವಾ ಬಾಟಲಿಯಲ್ಲಿನ ಪಾನೀಯಗಳು ಇದ್ದರೆ, ಅವುಗಳು ರೆಸ್ಟೋರೆಂಟ್‌ ಸೇವೆ ವ್ಯಾಪ್ತಿಗೆ ಬರುವುದಿಲ್ಲ. ಅವುಗಳಿಗೆ ಈ 5% ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ. ಈ ಮೂಲಕ ರೆಸ್ಟೋರೆಂಟ್‌ ಸೇವೆ ಎಂದರೆ ಯಾವುದೆಲ್ಲ ಬರುತ್ತದೆ ಎಂಬುದರ ಬಗ್ಗೆ ಈ ಹಿಂದೆ ಇದ್ದ ಗೊಂದಲಗಳಿಗೆ ತೆರೆ ಎಳೆದಿದೆ.

Exit mobile version