Site icon Vistara News

Highest Salary Paying Companies: ಎಂಜಿನಿಯರ್‌ಗಳಿಗೆ ಅತೀ ಹೆಚ್ಚು ಸಂಬಳ ಕೊಡುವ ಕಂಪನಿಗಳ ಪಟ್ಟಿ ಇಲ್ಲಿದೆ

Highest Paying Companies

ಗೂಗಲ್ (Google), ಅಮೆಜಾನ್ (amazon), ಮೈಕ್ರೋ ಸಾಫ್ಟ್ (microsoft) ಸೇರಿದಂತೆ ವಿಶ್ವ ಪ್ರಸಿದ್ಧ ಕಂಪನಿಗಳ ಸ್ಯಾಲರಿ ಪ್ಯಾಕೇಜ್ (Highest Salary Paying Companies) ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಕುರಿತು ಇದೀಗ ಎಕ್ಸ್ ನಲ್ಲಿ (x) ಮಾಹಿತಿ ವೈರಲ್ (viral) ಆಗಿದ್ದು, ವಿಶ್ವ ಪ್ರಸಿದ್ಧ ಕಂಪನಿಗಳ ಎಂಜಿನಿಯರ್ ಗಳು ವಾರ್ಷಿಕ ಸರಾಸರಿ 26 ಸಾವಿರ ರೂ.ನಿಂದ 66 ಲಕ್ಷ ರೂ. ವರೆಗೆ ಸಂಬಳ ಪಡೆಯುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಗೂಗಲ್ ನಲ್ಲಿ ಅತ್ಯಧಿಕ ಪಾವತಿ ಮಾಡಲಾಗುತ್ತಿದ್ದು, ಇಲ್ಲಿನ ಎಂಜಿನಿಯರ್ ಗಳು ವಾರ್ಷಿಕವಾಗಿ 66 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. ಇದು ಅತ್ಯಂತ ಜನಪ್ರಿಯವಾದ ಕಂಪನಿಗಳಲ್ಲಿ ಅತ್ಯಧಿಕವಾಗಿದೆ. ಬಳಿಕ ಗೊಜೆಕ್, ಮೈಕ್ರೋಸಾಫ್ಟ್, ಝೀಟಾ, ಅಡೋಬ್ ಮತ್ತು ಸೇಲ್ಸ್‌ಫೋರ್ಸ್‌ನಲ್ಲಿ ಎಂಜಿನಿಯರ್‌ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ. ಇದರಲ್ಲಿ ಕ್ರಮವಾಗಿ 59.7 ಲಕ್ಷ, 58.5 ಲಕ್ಷ, 58 ಲಕ್ಷ, 56.3 ಲಕ್ಷ, ಮತ್ತು 56.1 ಲಕ್ಷ ಸಂಬಳ ಪಡೆಯುವ ಎಂಜಿನಿಯರ್ ಗಳು ಇದ್ದಾರೆ.

ಬಳಿಕದ ಸ್ಥಾನದಲ್ಲಿ ವಿಎಂ ವೇರ್, ಶೇರ್ ಚಾಟ್, ಗೋಲ್ಡ್ ಮನ್, ಪೇ ಪಾಲ್, ಮಿಂತ್ರಾ, ವಾಲ್ ಮಾರ್ಟ್, ಸರ್ವಿಸ್ ನೌ, ಫ್ಲಿಪ್ ಕಾರ್ಟ್, ರಝೋರ್ ಪೇ, ಒರಾಕಲ್, ಅಮೆಜಾನ್ ಕೂಡ ಸೇರಿದೆ. ಇದರಲ್ಲಿ ಬಹುತೇಕ ಎಂಜಿನಿಯರ್‌ಗಳ ಸಂಬಳ 51.4 ಲಕ್ಷ ರೂ. ವರೆಗೆ ಇದೆ. ಟೆಕೀವ್ನ್, ಸಿಸ್ಕೊ, ಪೇ ಟಿಎಂ, ಕ್ವ್ಯಾಲ್ ಕಾಮ್, ಸ್ಯಾಪ್, ಓಯೋ ಕಂಪೆನಿಗಳ ಎಂಜಿನಯರ್ ಗಳಿಗೆ 5೦ ಲಕ್ಷ ರೂ.ವರೆಗೆ ವಾರ್ಷಿಕ ಪಾವತಿ ಮಾಡಲಾಗುತ್ತದೆ.


ಉಳಿದಂತೆ ಐಬಿಎಂ, ಸ್ಯಾಮ್ ಸಂಗ್, ಅಕ್ವೆವೆಂಚರ್, ಕಾಗ್ನಿಜೆಂಟ್, ಇನ್ಫೋಸಿಸ್, ಕ್ಯಾಂಪ್ಗೆಮಿನಿ, ಟಿಸಿಎಸ್ ಕಂಪೆನಿಗಳಲ್ಲಿ ಎಂಜಿನಿಯರ್ ಗಳಿಗೆ ಗರಿಷ್ಠ ವಾರ್ಷಿಕ ಪಾವತಿ 30 ಲಕ್ಷ ರೂ.ವರೆಗೆ ನೀಡಲಾಗುತ್ತದೆ.

ಇದನ್ನೂ ಓದಿ: LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

ಹೆಚ್ಚು ಮತ್ತು ಕಡಿಮೆ ಪಾವತಿಸುವ ಕಂಪನಿಗಳ ಮಾಹಿತಿ ಸಂಗ್ರಹಕ್ಕಾಗಿ ಒಟ್ಟು 25,000 ಮಂದಿಯ ಸಂಬಳವನ್ನು ವಿಶ್ಲೇಷಿಸಲಾಗಿದೆ ಎಂದು ಎಕ್ಸ್ ಬಳಕೆದಾರರು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಸಂಬಳ ಪಾವತಿಯ ಬಗ್ಗೆ ಪಾರದರ್ಶಕತೆ ಬಹಳ ಮುಖ್ಯ ಎಂದಿರುವ ಅವರು ಇದರಲ್ಲಿ ಮೂಲ ವೇತನದಲ್ಲಿ ಕೊಂಚ ವ್ಯತ್ಯಾಸವಿರಬಹುದು ಎಂದು ತಿಳಿಸಿದ್ದಾರೆ.

Exit mobile version