Site icon Vistara News

Adani Group: ಹಿಂಡೆನ್‌ಬರ್ಗ್‌ ಅನೈತಿಕ ಶಾರ್ಟ್‌ಸೆಲ್ಲರ್‌, ಷೇರು ಅವ್ಯವಹಾರದಿಂದ ದುರ್ಲಾಭ ಗಳಿಸಿದೆ: ಅದಾನಿ ಕಿಡಿ

Hindenburg an unethical short-seller, profited from stock trading: Adani

Hindenburg an unethical short-seller, profited from stock trading: Adani

ನವ ದೆಹಲಿ: ಅಮೆರಿಕದ ಹಿಂಡೆನ್‌ಬರ್ಗ್‌ ತನ್ನ ವಿರುದ್ಧ ಮಾಡಿರುವ 106 ಪುಟಗಳ ಆರೋಪಗಳಿಗೆ, ೮೮ ಪ್ರಶ್ನೆಗಳಿಗೆ ಪ್ರತಿಯಾಗಿ ಅದಾನಿ ಗ್ರೂಪ್‌ (Adani Group) 413 ಪುಟಗಳ ಸುದೀರ್ಘ ಉತ್ತರವನ್ನು ಭಾನುವಾರ ಬಿಡುಗಡೆಗೊಳಿಸಿದೆ. ಹಿಂಡೆನ್‌ಬರ್ಗ್‌ ಅನೈತಿಕ ಶಾರ್ಟ್‌ ಸೆಲ್ಲರ್‌ (unethical short seller) ಆಗಿದ್ದು, ಷೇರು ಅವ್ಯವಹಾರದಿಂದ ದುರ್ಲಾಭ ಗಳಿಸಿದೆ ಎಂದು ತಿರುಗೇಟು ಕೊಟ್ಟಿದೆ. ಹಿಂಡೆನ್‌ಬರ್ಗ್‌ನ ಎಲ್ಲ 88 ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ.

ಸತ್ಯ ಏನೆಂದರೆ ಹಿಂಡೆನ್‌ಬರ್ಗ್‌ ಒಂದು ಅನೈತಿಕ ಶಾರ್ಟ್‌ ಸೆಲ್ಲರ್.‌ ಶಾರ್ಟ್‌ ಸೆಲ್ಲರ್‌ ಎಂದರೆ ಮಾರುಕಟ್ಟೆಯಲ್ಲಿ ಷೇರುಗಳ ದರ ಗಣನೀಯ ಇಳಿಕೆಯಾದಾಗ ಲಾಭ ಮಾಡಿಕೊಳ್ಳುವವರು. ಆದರೆ ಹಿಂಡೆನ್‌ಬರ್ಗ್‌ ಸುಳ್ಳು ಆರೋಪಗಳ ಕಂತೆಯನ್ನು ಸೃಷ್ಟಿಸಿ, ಮಾರುಕಟ್ಟೆಯಲ್ಲಿ ಷೇರು ದರ ಕುಸಿಯುವಂತೆ ಮಾಡಿಸಿ ತನ್ನ ಬೇಳೆ ಬೇಯಿಸಿಕೊಂಡಿದೆ. ದುರ್ಲಾಭ ಗಳಿಸಿದೆ. ಪೂರ್ವನಿಯೋಜಿತವಾಗಿ ಈ ಭ್ರಷ್ಟಾಚಾರವನ್ನು ಹಿಂಡೆನ್‌ಬರ್ಗ್‌ ನಡೆಸಿದೆ. ಈ ಸುಳ್ಳಿನ ಕಂತೆ ಕಾಳ್ಗಿಚ್ಚಿನಂತೆ ಹರಡಿತು, ಹೂಡಿಕೆದಾರರ ಸಂಪತ್ತಿಗೆ ಭಾರಿ ಹಾನಿ ಸಂಭವಿಸಿತು. ಹೀಗಾಗಿ ಇದು ಕೇವಲ ನಿರ್ದಿಷ್ಟ ಕಂಪನಿಯ ಮೇಲಿನ ದಾಳಿಯಲ್ಲ, ಭಾರತದ ಮೇಲೆ ನಡೆಸಿದ ದಾಳಿ ಎಂದು ಅದಾನಿ ಗ್ರೂಪ್‌ ಹೇಳಿದೆ.

ಹಿಂಡೆನ್‌ಬರ್ಗ್‌ ಅದಾನಿ ಗ್ರೂಪ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಬಳಿಕ ಎರಡೇ ದಿನಗಳಲ್ಲಿ ಅದಾನಿ ಕಂಪನಿಗಳ ಷೇರು ದರಗಳಲ್ಲಿ 20% ತನಕ ಕುಸಿತ ಕಂಡು ಬಂದಿತ್ತು. ಮಾರುಕಟ್ಟೆ ಮೌಲ್ಯದಲ್ಲಿ 4 ಲಕ್ಷ ಕೋಟಿ ರೂ. ನಷ್ಟವಾಗಿತ್ತು.

ಇದನ್ನೂ ಓದಿ: Adani Group : ಹಿಂಡೆನ್‌ ಬರ್ಗ್‌ ಆರೋಪಗಳು ಭಾರತದ ಮೇಲಿನ ದಾಳಿ, ಸುಳ್ಳಿನ ಕಂತೆ, ಅದಾನಿ ತಿರುಗೇಟು, 413 ಪುಟಗಳ ರೆಸ್ಪಾನ್ಸ್

Exit mobile version