Adani Group : ಹಿಂಡೆನ್‌ ಬರ್ಗ್‌ ಆರೋಪಗಳು ಭಾರತದ ಮೇಲಿನ ದಾಳಿ, ಸುಳ್ಳಿನ ಕಂತೆ, ಅದಾನಿ ತಿರುಗೇಟು, 413 ಪುಟಗಳ ರೆಸ್ಪಾನ್ಸ್ - Vistara News

ಪ್ರಮುಖ ಸುದ್ದಿ

Adani Group : ಹಿಂಡೆನ್‌ ಬರ್ಗ್‌ ಆರೋಪಗಳು ಭಾರತದ ಮೇಲಿನ ದಾಳಿ, ಸುಳ್ಳಿನ ಕಂತೆ, ಅದಾನಿ ತಿರುಗೇಟು, 413 ಪುಟಗಳ ರೆಸ್ಪಾನ್ಸ್

ನಿರೀಕ್ಷೆಯಂತೆ ಅದಾನಿ ಗ್ರೂಪ್‌, ತನ್ನ ವಿರುದ್ಧ ಹಿಂಡೆನ್‌ ಬರ್ಗ್‌ ಮಾಡಿರುವ ಗಂಭೀರ ಆರೋಪಗಳಿಗೆ ಸುದೀರ್ಘ ಉತ್ತರವನ್ನು ಕೊಟ್ಟಿದೆ. ಹಿಂಡೆನ್‌ ಬರ್ಗ್‌ ಮಾಡಿರುವ ಆರೋಪವನ್ನು ಭಾರತದ ಸಮಗ್ರತೆಯ, (Adani Group) ಮಹತ್ತ್ವಾಕಾಂಕ್ಷೆಯ ವಿರುದ್ಧದ ದಾಳಿ ಎಂದು ತೀವ್ರ ಖಂಡಿಸಿದೆ.

VISTARANEWS.COM


on

Adani stocks
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಅಮೆರಿಕದ ಹಿಂಡೆನ್‌ಬರ್ಗ್‌ ರಿಸರ್ಚ್‌ (Hindenburg Research) ತನ್ನ ವಿರುದ್ಧ ಮಾಡಿರುವ 88 ಆರೋಪಗಳಿಗೆ ಅದಾನಿ ಗ್ರೂಪ್‌, (Adani Group) 413 ಪುಟಗಳ ಸುದೀರ್ಘ ಪ್ರತಿಕ್ರಿಯೆಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಇದು ಭಾರತದ ಮೇಲಿನ ಪೂರ್ವನಿಯೋಜಿತ ದಾಳಿ ಎಂದು ತೀವ್ರವಾಗಿ ಖಂಡಿಸಿದೆ.‌ ಹಿಂಡೆನ್‌ಬರ್ಗ್‌ ಆರೋಪಗಳು ಸುಳ್ಳಿನ ಕಂತೆ ಬಿಟ್ಟರೆ ಬೇರೇನೂ ಅಲ್ಲ ಎಂದು ಅದಾನಿ ಸಮೂಹ 413 ಪುಟಗಳ ಪ್ರತಿಕ್ರಿಯೆಯಲ್ಲಿ ಪ್ರತಿಕ್ರಿಯಿಸಿದೆ. ಹಿಂಡೆನ್‌ ಬರ್ಗ್‌ ತನಗೆ ಆರ್ಥಿಕವಾಗಿ ಲಾಭ ಮಾಡಿಕೊಳ್ಳಲು ಈ ಕೃತ್ಯವೆಸಗಿದೆ.

ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌ ತನ್ನ ದುರ್ಲಾಭ, ಸ್ವಾರ್ಥಕ್ಕೆ ಮಾಡಿರುವ ಆರೋಪ: ಅದಾನಿ

ಹಿಂಡೆನ್‌ಬರ್ಗ್‌ ಜನವರಿ 24ರಂದು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್‌, ಇದು ಕೇವಲ ಭಾರತೀಯ ಕಂಪನಿಯೊಂದರ ಮೇಲಿನ ದಾಳಿಯಲ್ಲ, ದೇಶದ ಸ್ವಾತಂತ್ರ್ಯ, ಸಮಗ್ರತೆ, ಸಂಸ್ಥೆಗಳ ಗುಣಮಟ್ಟ, ಬೆಳವಣಿಗೆ ಮತ್ತು ಮಹತ್ತ್ವಾಕಾಂಕ್ಷೆಗಳಿಗೆ ವಿರುದ್ಧ ನಡೆದ ದಾಳಿ ಎಂದು ಅದಾನಿ ಗ್ರೂಪ್‌ ಹೇಳಿದೆ. ಶಾರ್ಟ್‌ ಸೆಲ್ಲರ್‌ ಆಗಿರುವ ಹಿಂಡೆನ್‌ಬರ್ಗ್‌ ಮಾರುಕಟ್ಟೆಯಲ್ಲಿ ಸುಳ್ಳಿನ ಕಂತೆಗಳನ್ನು ಹರಡಿ ದುರ್ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಇಂಥ ಕೆಲಸ ಮಾಡಿದೆ. ಆದರೆ ಇದರಿಂದ ಲೆಕ್ಕಕ್ಕೆ ಸಿಗದಷ್ಟು ಹೂಡಿಕೆದಾರರು ಬೆಲೆ ತೆರುವಂತಾಗಿದೆ ಎಂದು ಅದಾನಿ ಗ್ರೂಪ್‌ ಹೇಳಿದೆ.

ಆರೋಪ ಮಾಡಿರುವ ಕಾಲವನ್ನು ಪ್ರಶ್ನಿಸಿದ ಅದಾನಿ ಗ್ರೂಪ್:

adani group
adani group

ಅದಾನಿ ಎಂಟರ್‌ಪ್ರೈಸಸ್‌ ತನ್ನ ಎಫ್‌ಪಿಒ (ಮುಂದುವರಿದ ಷೇರು ಬಿಡುಗಡೆ) ಮಾಡುವ ಸಂದರ್ಭವನ್ನೇ ಕಾದು ನೋಡಿಕೊಂಡು ಹಿಂಡೆನ್‌ ಬರ್ಗ್‌ ತನ್ನ ಕಪೋಲಕಲ್ಪಿತ ವರದಿಯನ್ನು ಬಿಡುಗಡೆಗೊಳಿಸಿದೆ. ಇದುವೇ ದೊಡ್ಡ ಷಡ್ಯಂತ್ರವನ್ನು ಬಿಂಬಿಸಿದೆ. ಇದರೊಂದಿಗೆ ಹಿಂಡೆನ್‌ಬರ್ಗ್‌ ಸೆಕ್ಯುರಿಟೀಸ್‌ ಮತ್ತು ವಿದೇಶಿ ವಿನಿಮಯ ಕಾನೂನುಗಳನ್ನು ಉಲ್ಲಂಘಿಸಿದೆ. ಅದರ ವರದಿ ಯಾವುದೇ ಸ್ವತಂತ್ರ ವರದಿಯೂ ಅಲ್ಲ, ಆಳವಾಗಿ ಸಂಶೋಧನೆ ನಡೆಸಿ ಮಾಡಿದ್ದೂ ಅಲ್ಲ ಎಂದು ಅದಾನಿ ಗ್ರೂಪ್‌ ತರಾಟೆಗೆ ತೆಗೆದುಕೊಂಡಿದೆ.

ಹಿಂಡೆನ್‌ಬರ್ಗ್‌ ಮುಂದಿಟ್ಟಿರುವ 88 ಪ್ರಶ್ನೆಗಳ ಪೈಕಿ 65 ಪ್ರಶ್ನೆಗಳು ಅದಾನಿ ಸಮೂಹದ ಅಧೀನ ಕಂಪನಿಗಳಿಗೆ ಸೇರಿದ್ದು, ಜಂಟಿಯಾಗಿ ಉತ್ತರಿಸಲಾಗಿದೆ. ಉಳಿದ 23 ಪ್ರಶ್ನೆಗಳ ಪೈಕಿ 18 ಪ್ರಶ್ನೆಗಳು ಸಾರ್ವಜನಿಕ ಷೇರುದಾರರಿಗೆ ಸಂಬಂಧಿಸಿವೆ. ಉಳಿದ 5 ಪ್ರಶ್ನೆಗಳು ನಿರಾಧಾರವಾಗಿವೆ ಎಂದು ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

China Road: ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ಹಿಮಪ್ರದೇಶದ ಬಳಿಯೇ ಚೀನಾ ರಸ್ತೆ ನಿರ್ಮಿಸಿರುವ ಸ್ಯಾಟಲೈಟ್‌ ಫೋಟೊಗಳು ಲಭ್ಯವಾಗಿವೆ. ಕಳೆದ ವರ್ಷದ ಜೂನ್‌ ಹಾಗೂ ಆಗಸ್ಟ್‌ ಅವಧಿಯಲ್ಲಿ ಚೀನಾ ರಸ್ತೆ ನಿರ್ಮಾಣ ಆರಂಭಿಸಿದ್ದು, ಇದರ ಚಿತ್ರಗಳನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆ ಮಾಡಿದೆ. ಚೀನಾ ರಸ್ತೆ ನಿರ್ಮಿಸಿದ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತಿವೆ.

VISTARANEWS.COM


on

China Road
Koo

ನವದೆಹಲಿ: ಕಾಶ್ಮೀರದ ಲಡಾಕ್‌ ಬಳಿಯ ವಾಸ್ತವ ನಿಯಂತ್ರಣ ರೇಖೆ (LoC) ಬಳಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಾ ಈಗ ಮತ್ತೊಂದು ಉದ್ಧಟತನ ತೋರಿದೆ. ಹೌದು, ಪಾಕ್‌ ಆಕ್ರಮಿತ ಕಾಶ್ಮೀರದ (Pak Occupied Kashmir) ಬಳಿ ನೂತನವಾಗಿ ರಸ್ತೆ ನಿರ್ಮಿಸುವ (China Road) ಮೂಲಕ ಚೀನಾ ಗಡಿ ನಿಯಮಗಳನ್ನು ಗಾಳಿಗೆ ತೂರಿದೆ. ಇದು ಭಾರತದ ಜತೆ ಮತ್ತೊಂದು ಬಿಕ್ಕಟ್ಟು ಸೃಷ್ಟಿಸುವ ಹುನ್ನಾರ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಜೂನ್‌ ಹಾಗೂ ಆಗಸ್ಟ್‌ ಅವಧಿಯಲ್ಲಿ ಚೀನಾ ರಸ್ತೆ ನಿರ್ಮಾಣ ಆರಂಭಿಸಿದ್ದು, ಇದರ ಚಿತ್ರಗಳನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆ ಮಾಡಿದೆ. ಚೀನಾ ರಸ್ತೆ ನಿರ್ಮಿಸಿದ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತಿವೆ.

ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ಹಿಮಪ್ರದೇಶದ ಬಳಿಯೇ ಚೀನಾ ರಸ್ತೆ ನಿರ್ಮಿಸಿರುವ ಸ್ಯಾಟಲೈಟ್‌ ಫೋಟೊಗಳು ಲಭ್ಯವಾಗಿವೆ. 1963ರಲ್ಲಿ ಚೀನಾಗೆ ಬಿಟ್ಟುಕೊಟ್ಟಿರುವ, ಪಾಕ್‌ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದ ಶಾಕ್ಸ್‌ಗಾಮ್‌ ಕಣಿವೆಯಲ್ಲಿ ಚೀನಾ ರಸ್ತೆ ನಿರ್ಮಿಸಿದೆ. ಇದು ಭಾರತದ ಇಂದಿರಾ ಕೋಲ್ ಪ್ರದೇಶದಿಂದ ಕೇವಲ 50 ಕಿಲೋ ಮೀಟರ್‌ ದೂರದಲ್ಲಿರುವುದರಿಂದ ಆತಂಕ ಹೆಚ್ಚಾಗಿದೆ.

ಇಂದಿರಾ ಕೋಲ್‌ ಪ್ರದೇಶಕ್ಕೆ ಕಳೆದ ಮಾರ್ಚ್‌ನಿಂದ ಇದುವರೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಎರಡು ಬಾರಿ ಭೇಟಿ ನೀಡಿದ್ದರು. ಇದರಿಂದ ಕೇವಲ 50 ಕಿಲೋಮೀಟರ್‌ ದೂರದಲ್ಲಿ ಚೀನಾ ರಸ್ತೆ ನಿರ್ಮಿಸಿದ ಕಾರಣ ಮುಂದಿನ ದಿನಗಳಲ್ಲಿ ಭಾರತದ ಜತೆಗಿನ ಬಿಕ್ಕಟ್ಟನ್ನು ಉಲ್ಬಣಿಸುವ ಸಾಧ್ಯತೆ ಇದೆ. ಇದೇ ಸಂಚಿನಿಂದಾಗಿಯೇ ಚೀನಾ ರಸ್ತೆ ನಿರ್ಮಾಣ ಮಾಡಿದೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಏಕೆ ಆತಂಕಕಾರಿ?

ಸಿಯಾಚಿನ್‌ ಹಿಮಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸಿರುವುದು ಭಾರತಕ್ಕೆ ಹಲವು ರೀತಿಯಲ್ಲಿ ಆತಂಕ ಎನಿಸಿದೆ. ಗಡಿಯಲ್ಲಿ ರಸ್ತೆ ನಿರ್ಮಿಸಿದರೆ ಚೀನಾ ಸುಲಭವಾಗಿ ಮಿಲಿಟರಿ ಸಲಕರಣೆಗಳನ್ನು, ಸೈನಿಕರನ್ನು ಗಡಿಗೆ ನಿಯೋಜಿಸಬಹುದು. ಇದಾದ ಬಳಿಕ ಭಾರತದ ಜತೆ ತಗಾದೆ ತೆಗೆಯಲು ಚೀನಾಗೆ ಅನುಕೂಲವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಇದಕ್ಕೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

Continue Reading

ಅಂಕಣ

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

ರಾಜಮಾರ್ಗ ಅಂಕಣ: ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು.

VISTARANEWS.COM


on

Koo

ಈ ಕಥೆಯಲ್ಲಿ ಅದ್ಭುತ ಸಂದೇಶ ಇದೆ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಕಥೆಗೆ ಮೂಲ ಯಾವುದು ಎಂದು ಕೇಳಬೇಡಿ. ಆದರೆ ಅದರಲ್ಲಿ ಅದ್ಭುತ ಸಂದೇಶ ಇರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿದ್ದೇನೆ. ಇದು ಯಾವುದೋ ಒಂದು ವ್ಯಾಟ್ಸಪ್ ಗುಂಪಿನಲ್ಲಿ ಬಂದ ಲೇಖನ ಆಗಿದೆ.

ಹನುಮಂತನೂ ಒಂದು ರಾಮಾಯಣ ಬರೆದಿದ್ದ!

ವಾಲ್ಮೀಕಿ ರಾಮಾಯಣ ಬರೆದು ಮುಗಿಸಿದಾಗ ಅದನ್ನು ಓದಿದ ನಾರದನಿಗೆ ಅದು ಖುಷಿ ಕೊಡಲಿಲ್ಲ. ಆತ ಹೇಳಿದ್ದೇನೆಂದರೆ – ಇದು ಚೆನ್ನಾಗಿದೆ. ಆದರೆ ಹನುಮಂತ ಒಂದು ರಾಮಾಯಣ ಬರೆದಿದ್ದಾನೆ. ಅದಿನ್ನೂ ಚೆನ್ನಾಗಿದೆ!

ಈ ಮಾತು ಕೇಳದೆ ವಾಲ್ಮೀಕಿಗೆ ಸಮಾಧಾನ ಆಗಲಿಲ್ಲ. ಆತನು ತಕ್ಷಣ ನಾರದನನ್ನು ಕರೆದುಕೊಂಡು ಹನುಮಂತನನ್ನು ಹುಡುಕಿಕೊಂಡು ಹೊರಟನು. ಅಲ್ಲಿ ಹನುಮಂತನು ಧ್ಯಾನಮಗ್ನನಾಗಿ ಕುಳಿತು ಏಳು ಅಗಲವಾದ ಬಾಳೆಲೆಯ ಮೇಲೆ ಇಡೀ ರಾಮಾಯಣದ ಕಥೆಯನ್ನು ಚಂದವಾಗಿ ಬರೆದಿದ್ದನು. ಅದನ್ನು ಓದಿ ವಾಲ್ಮೀಕಿ ಜೋರಾಗಿ ಅಳಲು ಆರಂಭ ಮಾಡಿದನು. ಹನುಮಂತ “ಮಹರ್ಷಿ, ಯಾಕೆ ಅಳುತ್ತಿದ್ದೀರಿ? ನನ್ನ ರಾಮಾಯಣ ಚೆನ್ನಾಗಿಲ್ಲವೇ?” ಎಂದನು.

ಅದಕ್ಕೆ ವಾಲ್ಮೀಕಿ “ಹನುಮಾನ್, ನಿನ್ನ ರಾಮಾಯಣ ರಮ್ಯಾದ್ಭುತ ಆಗಿದೆ. ನಿನ್ನ ರಾಮಾಯಣ ಓದಿದ ನಂತರ ನನ್ನ ರಾಮಾಯಣ ಯಾರೂ ಓದುವುದಿಲ್ಲ!’ ಎಂದು ಮತ್ತೆ ಅಳಲು ಆರಂಭ ಮಾಡಿದನು. ಈ ಮಾತನ್ನು ಕೇಳಿದ ಹನುಮಾನ್ ತಾನು ರಾಮಾಯಣ ಬರೆದಿದ್ದ ಬಾಳೆಲೆಗಳನ್ನು ಅರ್ಧ ಕ್ಷಣದಲ್ಲಿ ಹರಿದು ಹಾಕಿದನು! ಅವನು ವಾಲ್ಮೀಕಿಗೆ ಹೇಳಿದ ಮಾತು ‘ಮಹರ್ಷಿ, ನೀವಿನ್ನು ಆತಂಕ ಮಾಡಬೇಡಿ. ಇನ್ನು ನನ್ನ ರಾಮಾಯಣ ಯಾರೂ ಓದುವುದಿಲ್ಲ!’

hanuman

ಹನುಮಾನ್ ಹೇಳಿದ ಜೀವನ ಸಂದೇಶ

‘ವಾಲ್ಮೀಕಿ ಮಹರ್ಷಿ. ನೀವು ರಾಮಾಯಣ ಬರೆದ ಉದ್ದೇಶ ನಿಮ್ಮನ್ನು ಜಗತ್ತು ನೆನಪಿಟ್ಟುಕೊಳ್ಳಬೇಕು ಎಂದು. ನನಗೆ ಆ ರೀತಿಯ ಆಸೆಗಳು ಇಲ್ಲ. ನಾನು ರಾಮಾಯಣ ಬರೆದ ಉದ್ದೇಶ ನನಗೆ ರಾಮ ನೆನಪಿದ್ದರೆ ಸಾಕು ಎಂದು! ರಾಮನ ಹೆಸರು ರಾಮನಿಗಿಂತ ದೊಡ್ಡದು. ರಾಮ ದೇವರು ನನ್ನ ಹೃದಯದಲ್ಲಿ ಸ್ಥಿರವಾಗಿದ್ದಾನೆ. ನನಗೆ ಇನ್ನು ಈ ರಾಮಾಯಣದ ಅಗತ್ಯ ಇಲ್ಲ!’

ಈಗ ವಾಲ್ಮೀಕಿ ಇನ್ನೂ ಜೋರಾಗಿ ಅಳಲು ತೊಡಗಿದನು. ಅವನ ಅಹಂಕಾರದ ಪೊರೆಯು ಕಳಚಿ ಹೋಗಿತ್ತು. ಆತನು ಒಂದಕ್ಷರವೂ ಮಾತಾಡದೆ ಹನುಮಂತನ ಪಾದಸ್ಪರ್ಶ ಮಾಡಿ ಹಿಂದೆ ಹೋದನು.

ಭರತ ವಾಕ್ಯ

ನಾವು ಮಾಡುವ ಎಲ್ಲಾ ಕೆಲಸಗಳ ಹಿಂದೆ ಒಂದಲ್ಲಾ ಒಂದು ಸ್ವಾರ್ಥ ಇರುತ್ತದೆ. ಕೆಲವರಿಗೆ ದುಡ್ಡಿನ ದಾಹ. ಕೆಲವರಿಗೆ ಕೀರ್ತಿಯ ಮೋಹ. ಇನ್ನೂ ಕೆಲವರಿಗೆ ಅಧಿಕಾರದ ಆಸೆ. ಇನ್ನೂ ಕೆಲವರಿಗೆ ಜನಪ್ರಿಯತೆಯ ಲೋಲುಪತೆ. ಅವುಗಳನ್ನು ಬಿಟ್ಟರೆ ನಾವೂ ಹನುಮಂತನ ಎತ್ತರಕ್ಕೆ ಏರಬಹುದು. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ದೇಶದ ಯುವಜನತೆಯ ಹೃದಯದ ಬಡಿತ ಅರ್ಜಿತ್ ಸಿಂಗ್, ನಿಮಗೆ ಹ್ಯಾಪಿ ಬರ್ತ್‌ಡೇ!

Continue Reading

ಪ್ರಮುಖ ಸುದ್ದಿ

Lok Sabha Election 2024: ಇಂದು ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

Lok Sabha Election 2024: ದಕ್ಷಿಣ ಕರ್ನಾಟಕದ ಉಡುಪಿ – ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು – ಕೊಡಗು, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ.

VISTARANEWS.COM


on

Lok Sabha Election
Koo

ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ (Voting) ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ನಾಗರೀಕರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ದಕ್ಷಿಣ ಕರ್ನಾಟಕದ ಉಡುಪಿ – ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು – ಕೊಡಗು, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ.

30 ಸಾವಿರದ 602 ಮತಗಟ್ಟೆ

14 ಕ್ಷೇತ್ರಗಳಲ್ಲಿ ಒಟ್ಟು 2 ಕೋಟಿ 88 ಲಕ್ಷದ 19 ಸಾವಿರದ 342 ಮತದಾರರಿದ್ದು, ಅದರಲ್ಲಿ ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರು 5,99,444 ಮಂದಿ ಇದ್ದಾರೆ. 1 ಕೋಟಿ 44 ಲಕ್ಷದ 28 ಸಾವಿರದ 99 ಪುರುಷ ಮತದಾರರಿದ್ದಾರೆ. ಹಾಗೆಯೇ 1 ಕೋಟಿ 43 ಲಕ್ಷದ 88 ಸಾವಿರದ 176 ಮಹಿಳೆಯರು ಮತದಾನದ ಮಾಡಲಿದ್ದಾರೆ. 3,067 ತೃತೀಯಲಿಂಗಿಗಳು ಇದ್ದಾರೆ. 30 ಸಾವಿರದ 602 ಮತಗಟ್ಟೆ ತೆರೆಯಲಾಗಿದ್ದು, 4 ಲಕ್ಷ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಇದ್ರ ಜೊತೆಗೆ 5,000 ಮೈಕ್ರೋ ಅಬ್ಸರ್ವರ್‌ಗಳ ನೇಮಕ ಮಾಡಲಾಗಿದ್ದು, 50,000 ಸಿವಿಲ್ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇನ್ನು 65 ಅರೆಸೇನಾ ಪಡೆ ತುಕಡಿ ಹಾಗೂ ಸಶಸ್ತ್ರ ಪೊಲೀಸ್ ಪಡೆಯೂ ಕಣ್ಗಾವಲು ಇರಿಸಲಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 14 ಲೋಕಸಭಾ ಕ್ಷೇತ್ರಗಳ ಪೈಕಿ ಕೋಲಾರ, ಚಾಮರಾಜನಗರ ಹಾಗೂ ಚಿತ್ರದುರ್ಗ ಎಸ್‌ಸಿ ಮೀಸಲು ಕ್ಷೇತ್ರಗಳಾಗಿವೆ.

ಬೆಂಗಳೂರು ಉತ್ತರ ಕ್ಷೇತ್ರ 2,911 ಮತಗಟ್ಟೆಗಳನ್ನು ಹೊಂದಿದ್ದು, ಇದು ಅತ್ಯಧಿಕ ಆಗಿದೆ. ಅದಲ್ಲದೇ ಈ ಕ್ಷೇತ್ರದಲ್ಲಿ 32.1 ಲಕ್ಷ ಮತದಾರರು ಇದ್ದಾರೆ. 10 ಕ್ಷೇತ್ರಗಳಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದು, ಎರಡು ಇವಿಎಂಗಳನ್ನು ಬಳಸಲಾಗುತ್ತಿದೆ. ಇನ್ನು, ಮತದಾನದ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗ ಅನೇಕ ಜಾಗೃತಿಗಳನ್ನು, ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದು, ಈ ಬಾರಿಯಾದರೂ ಮತದಾನದ ಪ್ರಮಾಣ ಹೆಚ್ಚಳ ಆಗುತ್ತಾ ನೋಡಬೇಕಿದೆ. 2019ರಲ್ಲಿ ಶೇ.68.8ರಷ್ಟು ಮತದಾನ ರಾಜ್ಯದಲ್ಲಿ ಆಗಿತ್ತು.

ವಿಶೇಷ ಚೇತನರಿಗೆ ಉಚಿತ ಬೈಕು, ಆಟೋ, ಟ್ಯಾಕ್ಸಿ ಸೇವೆ

ಏಪ್ರಿಲ್‌‌ 26ಕ್ಕೆ ಮತದಾನ ನಡೆಯುವ 14 ಕ್ಷೇತ್ರಗಳ ವ್ಯಾಪ್ತಿಗಳಲ್ಲೂ ಸರ್ಕಾರಿ ರಜೆ ಘೋಷಣೆಯಾಗಿದೆ. ಜೊತೆಗೆ ಬೆಂಗಳೂರಲ್ಲಿ ಮತದಾನ ಮುಗಿಸಿ ಊರಿನ ಕಡೆ ಹೊರಡೋರಿಗೆ ಅನುಕೂಲ ಆಗಲಿ ಅಂತ ನಮ್ಮ ಮೆಟ್ರೋ ರೈಲು ಸೇವೆ ರಾತ್ರಿ 12ರವರೆಗೂ ವಿಸ್ತರಣೆ ಮಾಡಿದ್ದಾರೆ. ಇನ್ನು ಮತದಾನಕ್ಕೆ ತೆರಳುವ ವಿಶೇಷ ಚೇತನರಿಗೆ ಉಚಿತ ಬೈಕು, ಆಟೋ, ಟ್ಯಾಕ್ಸಿ ಸೇವೆ ಜೊತೆಗೆ ಹಿರಿಯ ನಾಗರಿಕರಿಗೂ ರ್ಯಾಪಿಡೋದಿಂದ ಉಚಿತ ಟ್ಯಾಕ್ಸಿ ಸೇವೆ ಘೋಷಣೆಯಾಗಿದೆ. 2019ರ ಚುನಾವಣೆಯಲ್ಲಿ ರಾಜ್ಯದಲ್ಲಿ 68.81% ಮತದಾನ ಆಗಿತ್ತು.. ಈ ವರ್ಷ ಗರಿಷ್ಠ ಮತದಾನ ಮಾಡಿ ಅಂತ ಆಯೋಗ ಮನವಿ ಮಾಡಿದೆ.

ಇದನ್ನೂ ಓದಿ: Lok Sabha Election 2024: ಮುಸ್ಲಿಂ ಮೀಸಲಾತಿ ಬಗ್ಗೆ ಮೋದಿ ಹೇಳಿದ್ದು ಸುಳ್ಳು: ದಿನೇಶ್ ಗುಂಡೂರಾವ್

Continue Reading

ಭವಿಷ್ಯ

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷದ ಬಿದಿಗೆ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina bhavishya
Koo

ಚಂದ್ರನು ಶುಕ್ರವಾರವೂ ಧನಸ್ಸು ರಾಶಿಯಲ್ಲೆ ನೆಲಸಲಿದ್ದಾನೆ. ಇದರಿಂದಾಗಿ ವೃಷಭ, ಮಿಥುನ, ಕನ್ಯಾ, ವೃಶ್ಚಿಕ, ಮಕರ, ಕುಂಭ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರಿಗೆ ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೂರಬಹುದು ಮಾತಿನಲ್ಲಿ ಹಿಡಿತವಿರಲಿ. ವೃಷಭ ರಾಶಿಯವರು ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆಗೆ ಗಮನ ಹರಿಸಿ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಪ್ರಗತಿಯೊಂದಿಗೆ ಲಾಭ ಪಡೆಯುವಿರಿ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (26-04-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ.
ತಿಥಿ: ಬಿದಿಗೆ 07:45 ವಾರ: ಶುಕ್ರವಾರ
ನಕ್ಷತ್ರ: ಅನುರಾಧ 27:38 ಯೋಗ: ವರಿಯಾನ 28:18
ಕರಣ: ಗರಜ 07:45 ಅಮೃತಕಾಲ: ಮಧ್ಯಾಹ್ನ 04:43 ರಿಂದ 06:24
ದಿನದ ವಿಶೇಷ: ಕೋದಂಡರಾಮ ರಥೋತ್ಸವ

ಸೂರ್ಯೋದಯ : 06:01   ಸೂರ್ಯಾಸ್ತ : 06:34

ರಾಹುಕಾಲ : ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ
7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆಪ್ತರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವು ತರುವ ಸಾಧ್ಯತೆಗಳು ಹೆಚ್ಚು, ತಾಳ್ಮೆಯಿಂದ ಇರಿ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೂರಬಹುದು ಮಾತಿನಲ್ಲಿ ಹಿಡಿತವಿರಲಿ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ಆಹಾರ ಕ್ರಮದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆರೋಗ್ಯದ ಕಡೆಗೆ ಗಮನ ಹರಿಸಿ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಪ್ರಗತಿಯೊಂದಿಗೆ ಲಾಭ ಪಡೆಯುವಿರಿ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಯಾರಾದರೂ ನಿಮ್ಮ ಸಹಾಯ ಬೇಡಿ ಬರುವರು, ವಿಮರ್ಶಿಸಿ ಸಹಾಯ ಮಾಡಿ. ಆರ್ಥಿಕ ಪ್ರಗತಿ ದಿನದ ಮಟ್ಟಿಗೆ ಸಾಧಾರಣವಾಗಿರಲಿದೆ. ಯಾರಾದರೂ ನಿಮ್ಮ ಭಾವನೆಗಳನ್ನು ನಿರಾಸೆ ಮಾಡುವ ಸಾಧ್ಯತೆ ಇದೆ. ಅವರ ಮಾತನ್ನು ಲಕ್ಷಿಸದೆ ಕಾರ್ಯದಲ್ಲಿ ಮುನ್ನುಗ್ಗಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಹೊಸ ಭರವಸೆಯ ಆಶಾಭಾವನೆ ಮೂಡಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕಟಕ: ನಿಮ್ಮ ಆಸೆ-ಆಕಾಂಕ್ಷೆಗಳು ಯಶಸ್ಸನ್ನು ತಂದುಕೊಡಲಿವೆ. ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರಿಕೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕವಾಗಿ ಲಾಭ ಕಡಿಮೆ ಇರಲಿದೆ. ಹೊಸ ಆಲೋಚನೆಗಳು ನಿಮ್ಮನ್ನು ಸೃಜನಾತ್ಮಕವಾಗಿ ಏನಾದರೂ ಮಾಡಲು ಪ್ರಯತ್ನಿಸುವಂತೆ ಮಾಡುವಂತೆ ಪ್ರೇರೇಪಿಸುತ್ತದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ಕುಟುಂಬದ ಆಪ್ತರೊಂದಿಗೆ ಸಂತಸ ಹಂಚಿಕೊಳ್ಳವಿರಿ. ಹಣಕಾಸು ಪರಿಸ್ಥಿತಿ ಸಾಧಾರಣವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ದುಬಾರಿ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಹಾಸಿಗೆ ಇದ್ದಷ್ಟು ಕಾಲು ಚಾಚಿ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಪ್ರಭಾವಿ ಜನರ ಬೆಂಬಲ ಸಿಗಲಿದೆ. ಇದರಿಂದ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ. ಒಡಹುಟ್ಟಿದವರ ಸಹಕಾರ ಸಿಗಲಿದೆ. ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನು ಆಡಿ, ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣದಿಂದ ಲಾಭ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ಭಾವನಾ ಜೀವಿಗಳಾದ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರ ಇರಿ. ಅಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ, ಕ್ಷೇತ್ರ ದರ್ಶನ ಪಡೆದು ಮಾನಸಿಕ ನೆಮ್ಮದಿ ತಂದುಕೊಳ್ಳುವುದು ಅವಶ್ಯಕ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಮಕರ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಕೆಲಸ ಕಾರ್ಯಗಳಲ್ಲಿ ಬಳಸಿಕೊಂಡರೆ ಇನ್ನೂ ಹೆಚ್ಚು ಆಕರ್ಷಕ ವ್ಯಕ್ತಿತ್ವ ವಿಕಸನ ಆಗುತ್ತದೆ. ಆರೋಗ್ಯ ಉತ್ತಮವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕುಂಭ: ಅತಿಥಿಗಳ ಆಗಮನ ಸಂತಸ ತರುವುದು. ಆತ್ಮವಿಶ್ವಾಸದ ಹೊಸ ಭರವಸೆ ಮೂಡಲಿದೆ. ಹೂಡಿಕೆಯ ಲಾಭ ಇಂದು ಉಪಯೋಗಕ್ಕೆ ಬರುವುದು. ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದು ಕೊಡಲಿದೆ. ಆರೋಗ್ಯ, ಉದ್ಯೋಗದಲ್ಲಿ ಉತ್ತಮ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮೀನ: ಅತಿರೇಕದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಕೋಪಗೊಳ್ಳುವಂತೆ ಉದ್ರೇಕವಾಗುವ ವಿಷಯಗಳಿಂದ ದೂರ ಇರಿ. ತಾಳ್ಮೆಯಿಂದ ವರ್ತಿಸಿ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Pune Police 60 Hours Operation; Drugs worth more than Rs 1300 crore seized
ಕ್ರೈಂ27 mins ago

Physical Abuse: ಹಿಟಾಚಿ ಕೆಳಗೇ 7 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಪಿಶಾಚಿ

Lok Sabha Election 2024 sandalwood celebs where do cast their votes
ರಾಜಕೀಯ29 mins ago

Lok Sabha Election 2024: ಸ್ಯಾಂಡಲ್‌ವುಡ್‌ ತಾರೆಯರು ಎಲ್ಲೆಲ್ಲಿ ವೋಟ್‌ ಹಾಕ್ತಾರೆ?

China Road
ದೇಶ39 mins ago

China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

Lok sabha election 2024
ದೇಶ1 hour ago

Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

Crime Scene
ಕ್ರೈಂ1 hour ago

UDR Case: ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು

lok sabha election 2024 sudha murthy voting
Live News2 hours ago

Lok Sabha Election 2024: ಲೋಕಸಭೆ ಚುನಾವಣೆ 2024 ಮತದಾನ Live News

ಅಂಕಣ2 hours ago

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Eating Bread
ಆಹಾರ/ಅಡುಗೆ2 hours ago

Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

Lok Sabha Election
ಪ್ರಮುಖ ಸುದ್ದಿ2 hours ago

Lok Sabha Election 2024: ಇಂದು ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

Karnataka Weather Forecast
ಮಳೆ3 hours ago

Karnataka Weather : ಮಳೆಯಾಟ ಬಂದ್‌; 12 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಟ್ಯಾಕ್‌, ಯೆಲ್ಲೋ ಅಲರ್ಟ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ4 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ17 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ17 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ20 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202422 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು4 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ4 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು4 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

ಟ್ರೆಂಡಿಂಗ್‌