ನವ ದೆಹಲಿ: ಅದಾನಿ ಕಂಪನಿಗಳ ವಿರುದ್ಧ ಶಾರ್ಟ್ ಸೆಲ್ಲಿಂಗ್ ಮಾಡಿದ್ದ ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಇದೀಗ ಸಾಮಾಜಿಕ ಜಾಲ ತಾಣ ದಿಗ್ಗಜ ಟ್ವಿಟರ್‌ನ ಸಂಸ್ಥಾಪಕ ಜಾಕ್ ಡೋರ್ಸೆ ಅವರ ಪೇಮೆಂಟ್ ಕಂಪನಿಯಾದ ಬ್ಲಾಕ್ ವಿರುದ್ಧ ಟಾರ್ಗೆಟ್ ಮಾಡಿದೆ. ಜಾಕ್ ಡೋರ್ಸೆ ಅವರ ಬ್ಲಾಕ್ ಕಂಪನಿಯಲ್ಲಿ ( Hindenburg) ಹಲವಾರು ಅವ್ಯವಹಾರಗಳು ನಡೆದಿವೆ. ಈ ಬಗ್ಗೆ 2 ವರ್ಷಗಳ ತನಿಖೆ ನಡೆಸಿರುವುದಾಗಿ ಹಿಂಡೆನ್‌ಬರ್ಗ್ ವರದಿ ತಿಳಿಸಿದೆ.
ಬ್ಲಾಕ್ ಕಂಪನಿಯು ತನ್ನ ಬಳಕೆದಾರರ ಅಂಕಿ ಅಂಶಗಳನ್ನು ತಪ್ಪಾಗಿ ಬಿಂಬಿಸಿದೆ ಎಂದು ಹಿಂಡೆನ್ ಬರ್ಗ್ ಆರೋಪಿಸಿದೆ. ಬ್ಲಾಕ್‌ನಲ್ಲಿ ಇರುವ ಖಾತೆಗಳಲ್ಲಿ 40-70% ನಕಲಿಯಾಗಿವೆ ಎಂದೂ ದೂರಿದೆ. ಬ್ಲಾಕ್‌ನ ಮಾಜಿ ಉದ್ಯೋಗಿಗಳನ್ನೂ, ಇಂಡಸ್ಟ್ರಿಯ ಪರಿಣಿತರನ್ನೂ ಸಂದರ್ಶಿಸಲಾಗಿದ್ದು, ಕಂಪನಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಹಿಂಡೆನ್‌ಬರ್ಗ್ ವರದಿ ಆರೋಪಿಸಿದೆ. ಬಳಿಕ ಬ್ಲಾಕ್‌ನ ಷೇರು ದರ 18% ಕುಸಿದಿದೆ.
ಜಾಕ್ ಡೋರ್ಸೆ ಒಡೆತನದ ಬ್ಲಾಕ್ ಕಂಪನಿಯು ಮೊಬೈಲ್ ಪೇಮೆಂಟ್ ಕಂಪನಿಯಾಗಿದ್ದು, ಕೋವಿಡ್ ಬಿಕ್ಕಟ್ಟಿನ ಸಂದರ್ಭ 18 ತಿಂಗಳುಗಳಲ್ಲಿ ಇದರ ಷೇರು ದರದಲ್ಲಿ 639% ಏರಿಕೆಯಾಗಿತ್ತು.