ನವ ದೆಹಲಿ: ಖಾಸಗಿ ವಲಯದ ಕಾರ್ಪೊರೇಟ್ ಕಂಪನಿಗಳು (Private sector) ದೇಶದಲ್ಲಿ ತಮ್ಮ ಹೂಡಿಕೆಯನ್ನು ಶೀಘ್ರದಲ್ಲಿಯೇ ಗಣನೀಯವಾಗಿ ಏರಿಸಲು ಉದ್ದೇಶಿಸಿವೆ. ಕೇಂದ್ರ ಸರ್ಕಾರವು ಮೂಲಸೌಕರ್ಯ ವಲಯಕ್ಕೆ ಮಾಡುತ್ತಿರುವ ವೆಚ್ಚ, ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಗಳ ಪರಿಣಾಮ ಖಾಸಗಿ ವಲಯದ ಕಂಪನಿಗಳು ತಮ್ಮ ಹೂಡಿಕೆಯನ್ನು ಮುಂಬರುವ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ನಿರ್ಧರಿಸಿವೆ.
ಖಾಸಗಿ ಕಂಪನಿಗಳು ಮತ್ತು ಬ್ಯಾಂಕ್‌ಗಳ ಬ್ಯಾಲೆನ್ಸ್‌ಶೀಟ್ ಆರೋಗ್ಯ ಸುಧಾರಿಸಿರುವುದು ಕೂಡ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಫಿಚ್ ರೇಟಿಂಗ್ಸ್ ವರದಿ ತಿಳಿಸಿದೆ.
ಯಾವೆಲ್ಲ ಕಂಪನಿಗಳಿಂದ ಹೂಡಿಕೆ?
ರಿಲಯನ್ಸ್ ಇಂಡಸ್ಟ್ರೀಸ್ ಭಾರಿ ಮತ್ತು ಸಾಧಾರಣ ಗಾತ್ರದ ಹೂಡಿಕೆಯನ್ನು ನಾನಾ ವಲಯಗಳಲ್ಲಿ ಹೂಡಿಕೆ ಮಾಡಲಿದೆ. ತೈಲ, ರಾಸಾಯನಿಕ, ಹಸಿರು ಇಂಧನ, ಡಿಜಿಟಲ್ ಸೇವೆ ವಲಯದಲ್ಲಿ ಹೂಡಿಕೆ ಮಾಡಲಿದೆ ಎಂದು ವರದಿ ತಿಳಿಸಿದೆ.
ಭಾರ್ತಿ ಏರ್‌ಟೆಲ್ ಕೂಡ ದೂರಸಂಪರ್ಕ ವಲಯದಲ್ಲಿ ಭಾರಿ ಹೂಡಿಕೆಗೆ ನಿರ್ಧರಿಸಿದೆ. ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಅಲ್ಟ್ರಾ ಟೆಕ್ ಸಿಮೆಂಟ್ ಕೂಡ ಹೂಡಿಕೆ ಮಾಡಲಿದೆ. ಪ್ರಮುಖ ಕಂಪನಿಗಳು 6.11 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿವೆ. ಲೋಹ, ವಿದ್ಯುತ್, ಟೆಲಿಕಾಂ, ಬಂದರು, ಆಟೊಮೊಬೈಲ್, ಸಿಮೆಂಟ್ ವಲಯದಲ್ಲಿ ಹೂಡಿಕೆ ಆಗಲಿದೆ.
ಕಂಪನಿಗಳಿಂದ ಹೂಡಿಕೆ ವೆಚ್ಚದ ಯೋಜನೆಗಳು ಇಂತಿವೆ.
ಕಂಪನಿ | ಹೂಡಿಕೆ (ಕೋಟಿ ರೂ.ಗಳಲ್ಲಿ) |
ರಿಲಯನ್ಸ್ ಇಂಡಸ್ಟ್ರೀಸ್ | 2,15,448 |
ಅದಾನಿ ಎಂಟರ್‌ಪ್ರೈಸಸ್ | 18,226 |
ಟಾಟಾ ಸ್ಟೀಲ್ | 32,300 |
ಜೆಎಸ್‌ಡಬ್ಲ್ಯು | 31,700 |
ಹಿಂಡಾಲ್ಕೊ ಇಂಡಸ್ಟ್ರೀಸ್ | 30,300 |
ವೇದಾಂತ ಲಿಮಿಟೆಡ್ | 26,200 |
ಜಿಂದಾಲ್ ಸ್ಟೀಲ್ & ಪವರ್ | 12,600 |
ಭಾರ್ತಿ ಏರ್‌ಟೆಲ್ | 79,800 |
ವೊಡಾಫೋನ್ ಐಡಿಯಾ | 16,800 |
ಅದಾನಿ ಟ್ರಾನ್ಸ್‌ಮಿಶನ್ | 9,500 |
ಟಾಟಾ ಪವರ್ | 16,000 |
ಅಂಬುಜಾ ಸಿಮೆಂಟ್ | 5,400 |
ಅಲ್ಟ್ರಾಟೆಕ್ ಸಿಮೆಂಟ್ | 15,700 |
ದಾಲ್ಮಿಯಾ ಭಾರತ್ | 6,400 |
ಶ್ರೀ ಸಿಮೆಂಟ್ | 5,200 |
ಟಾಟಾ ಮೋಟಾರ್ಸ್ | 48,500 |
ಎಂ&ಎಂ | 14,000 |
ಮಾರುತಿ ಸುಜುಕಿ | 13,500 |
ಅದಾನಿ ಪೋರ್ಟ್ಸ್&ಸೆಜ್ | 14,300 |
ಒಟ್ಟು | 6,11,874 |
ಖಾಸಗಿ ಕಂಪನಿಗಳ ಹೂಡಿಕೆ ಹೆಚ್ಚಳಕ್ಕೆ ಕಾರಣವೇನು?
ವ್ಯವಸ್ಥೆಯಲ್ಲಿ ರಚನಾತ್ಮಕ ಬೇಡಿಕೆಯಲ್ಲಿ ಹೆಚ್ಚಳ
ಮೂಲಸೌಕರ್ಯ ವಲಯಕ್ಕೆ ಖರ್ಚು ಹೆಚ್ಚಳ
ಕೇಂದ್ರ ಸರ್ಕಾರದ ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆ
ಕಾರ್ಪೊರೇಟ್ ಕಂಪನಿ, ಬ್ಯಾಂಕ್ ಬ್ಯಾಲೆನ್ಸ್‌ಶೀಟ್ ಸುಸ್ಥಿತಿ
ಉತ್ಪಾದನಾ ಚಟುವಟಿಕೆ ಚುರುಕಾಗಿರುವುದು
ಸಂಭವನೀಯ ರಿಸ್ಕ್: ಸರಕುಗಳ ದರ ಏರಿಕೆ, ಜಾಗತಿಕ ದುರ್ಬಲ ಆರ್ಥಿಕ ಬೆಳಣಿಗೆ, ಬಡ್ಡಿ ದರ ಏರಿಕೆ