ನವ ದೆಹಲಿ: ಚಾಟ್ ಜಿಪಿಟಿ (Chat GPT) ತಂತ್ರಜ್ಞಾನದ ಕ್ರಾಂತಿಯ ಪರಿಣಾಮ ಹಲವಾರು ಉದ್ಯೋಗಾವಕಾಶಗಳು ಕಣ್ಮರೆಯಾಗಲಿವೆ ಎಂದು ಅಮೆರಿಕ ಮೂಲದ ಓಪನ್ ಎಐ (OpenAI) ಮತ್ತು ಇತರ ಸಂಸ್ಥೆಗಳು ನಡೆಸಿದ ಅಧ್ಯಯನ ವರದಿ ತಿಳಿಸಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಆಧಾರದಲ್ಲಿ ಮಶೀನ್ ಲರ್ನಿಂಗ್ ಮಾಡೆಲ್ ಆಗಿರುವ ಚಾಟ್ ಜಿಪಿಟಿಯ ಪರಿಣಾಮ ಅಮೆರಿಕದ ಎಕಾನಮಿಯಲ್ಲಿ ಹಲವು ಉದ್ಯೋಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಭಾಷೆಗಳನ್ನು ಆಧರಿಸಿದ ಹಲವು ಉದ್ಯೋಗಗಳಿಗೆ ಚಾಟ್ ಜಿಪಿಟಿಯಿಂದ ಕುತ್ತಾಗಲಿದೆ ಎಂದು ತಿಳಿಸಿದೆ.
ಕಡಿಮೆ ಸಂಬಳಕ್ಕಿಂತ ಹೆಚ್ಚು ವೇತನ ಇರುವ ಉದ್ಯೋಗಗಳು ಜಿಪಿಟಿ ತಂತ್ರಜ್ಞಾನ ಬಳಕೆಯಲ್ಲಿ ಪರ್ಯವಸಾನವಾಗಲಿದೆ. ಆದರೆ ಕ್ರಿಟಿಕಲ್ ಥಿಂಕಿಂಗ್ ಕೌಶಲ ಬಯಸುವ ಉದ್ಯೋಗಗಳಿಗೆ ತೊಂದರೆ ಆಗದು. ವೆಬ್ ಮತ್ತು ಡಿಜಿಟಲ್ ಇಂಟರ್‌ಫೇಸ್ ಡಿಸೈನರ್ಸ್, ಬ್ಲಾಕ್‌ಚೈನ್ ಎಂಜಿನಿಯರ್ಸ್, ತೆರಿಗೆ ಸಲಹೆಗಾರರು, ಲೇಖಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಚಾಟ್ ಜಿಪಿಟಿ ತಂತ್ರಜ್ಞಾನ ಪ್ರಭಾವ ಬೀರಲಿರುವ ಉದ್ಯೋಗಗಳ ಪಟ್ಟಿ ಇಂತಿದೆ:
ಅನುವಾದಕರು ಮತ್ತು ಇಂಟರ್‌ಪ್ರೆಟರ್ಸ್ , ಸರ್ವೇ ಸಂಶೋಧಕರು, ಕವಿಗಳು, ಕ್ರಿಯೇಟಿವ್ ಲೇಖಕರು, ಆನಿಮಲ್ ಸೈಂಟಿಸ್ಟ್, ಸಾರ್ವಜನಿಕ ಸಂಪರ್ಕ ತಜ್ಞರು, ಗಣಿತಜ್ಞರು, ತೆರಿಗೆ ಸಲಹೆಗಾರರು, ವೆಬ್ ಮತ್ತು ಡಿಜಿಟಲ್ ಇಂಟರ್‌ಫೇಸ್ ಡಿಸೈನರ್ಸ್, ಕರೆಸ್ಪಾಂಡೆನ್ಸ್ ಕ್ಲರ್ಕ್, ಬ್ಲಾಕ್‌ಚೈನ್ ಎಂಜಿನಿಯರ್ಸ್, ಕೋರ್ಟ್ ರಿಪೋರ್ಟರ್, ಅಕೌಂಟೆಂಟ್ಸ್, ಆಡಿಟರ್ಸ್, ವಾರ್ತಾ ವಿಶ್ಲೇಷಕರು, ವರದಿಗಾರರು, ಪತ್ರಕರ್ತರು, ಕಾನೂನು ಸಲಹೆಗಾರರು, ಆಡಳಿತಾತ್ಮಕ ಸಹಾಯಕರು, ಕ್ಲಿನಿಕಲ್ ಡೇಟಾ ಮ್ಯಾನೇಜರ್, ಹವಾಮಾನ ಬದಲಾವಣೆ ವಿಶ್ಲೇಷಕರು, ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ಸ್, ಗ್ರಾಫಿಕ್ ಡಿಸೈನರ್ಸ್, ಇನ್ವೆಸ್ಟ್‌ಮೆಂಟ್ ಫಂಡ್ ಮ್ಯಾನೇಜರ್ಸ್, ಇನ್ಷೂರೆನ್ಸ್ ಅಪ್ರೈಸರ್ಸ್.