Site icon Vistara News

Income Tax AIS App : ಮೊಬೈಲ್‌ನಲ್ಲೇ ಟಿಡಿಎಸ್‌ ಮತ್ತಿತರ ಮಾಹಿತಿ ಉಚಿತವಾಗಿ ತಿಳಿಯಲು ತೆರಿಗೆ ಇಲಾಖೆಯ ಆ್ಯಪ್

tax

ಆದಾಯ ತೆರಿಗೆ ಇಲಾಖೆಯು (Income Tax Department) ಕಳೆದ ಮಾರ್ಚ್‌ನಲ್ಲಿ AIS for Taxpayer ಎಂಬ ಮೊಬೈಲ್‌ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ತೆರಿಗೆದಾರರಿಗೆ ತಮ್ಮ Annual Information Statement (AIS) ಅಥವಾ Taxpayer Information Summary (TIS) ಬಗ್ಗೆ ಮಾಹಿತಿಯನ್ನು ಉಚಿತವಾಗಿ ತಿಳಿದುಕೊಳ್ಳಲು ಇದು ಸಹಕಾರಿ. (Income Tax AIS App) ಗೂಗಲ್‌ ಪ್ಲೇ ಮತ್ತು ಆ್ಯಪ್ ಸ್ಟೋರ್‌ನಲ್ಲಿ ನೀವು ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಈ ಆ್ಯಪ್ ತೆರಿಗೆದಾರರಿಗೆ AIS/TIS ಬಗ್ಗೆ ಸಮಗ್ರ ವಿವರಗಳನ್ನು ನೀಡುತ್ತದೆ. ತೆರಿಗೆದಾರನಿಗೆ ಸಂಬಂಧಿಸಿ ನಾನಾ ಮೂಲಗಳಿಂದ ಸಂಗ್ರಹಿಸಿ ಡಿಟೇಲ್ಸ್‌ಗಳನ್ನು ನೀಡುತ್ತದೆ. ತೆರಿಗೆದಾರರು ಈ ಮೊಬೈಲ್‌ ಆ್ಯಪ್ ಮೂಲಕ ಟಿಡಿಎಸ್‌, ಟಿಸಿಎಸ್‌, ಬಡ್ಡಿ ದರ, ಡಿವಿಡೆಂಡ್‌, ಶೇರು ವರ್ಗಾವಣೆ ವಿವರಗಳು, ತೆರಿಗೆ ಪಾವತಿ, ಆದಾಯ ತೆರಿಗೆ ರಿಫಂಡ್‌, ಜಿಎಸ್‌ಟಿ ಡೇಟಾ, ಫಾರಿನ್‌ ರೆಮಿಟೆನ್ಸ್‌ ಇತ್ಯಾದಿಗಳ ವಿವರ ಪಡೆಯಬಹುದು.

AIS For Taxpayer App ಡೌನ್‌ಲೋಡ್‌ :

ಈ ಮೊಬೈಲ್‌ ಆ್ಯಪ್ ಅನ್ನು ಬಳಸಿಕೊಳ್ಳಲು ತೆರಿಗೆದಾರರು ಡೌನ್‌ಲೋಡ್‌ ಮಾಡಿದ ಬಳಿಕ ಆ್ಯಪ್‌ನಲ್ಲಿ ಪ್ಯಾನ್‌ ಸಂಖ್ಯೆ, OTP ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಳಿಕ 4 ಅಂಕಿಗಳ PIN ಅನ್ನು ಕ್ರಿಯೇಟ್‌ ಮಾಡಬೇಕು.

AIS for Taxpayer App ನಲ್ಲಿ ನೋಂದಣಿ ಪ್ರಕ್ರಿಯೆ ಹೀಗೆ ಮಾಡಿಕೊಳ್ಳಿ:

ಗೂಗಲ್‌ ಪ್ಲೇ ಅಥವಾ ಆ್ಯಪ್ ಸ್ಟೋರ್‌ನಲ್ಲಿ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿದ ಬಳಿಕ PAN ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಮೊಬೈಲ್‌ಗೆ ಮತ್ತು ಇ-ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ನೋಂದಾಯಿತ ಇ-ಮೇಲ್‌ಗೆ OTP ಬಂದ ಬಳಿಕ ದೃಢೀಕರಿಸಿ.

4 ಅಂಕಿಗಳ ಡಿಜಿಟ್‌ PIN ಸೃಷ್ಟಿಸಿ

ಬಳಿಕ Annual Information Statement (AIS) ಮೇಲೆ ಕ್ಲಿಕ್ಕಿಸಿ. ಅದು ನೀವು 4 ಡಿಜಿಟ್‌ PIN ಹಾಕಿದ ಬಳಿಕ ಡಿಸ್‌ ಪ್ಲೇ ಆಗುತ್ತದೆ.

AIS ಮೇಲೆ ಕ್ಲಿಕ್‌ ಮಾಡಿದ ಬಳಿಕ Financial year ಆಯ್ಕೆ ಮಾಡಿಕೊಳ್ಳಿ. ವಿವರಗಳನ್ನು ತಿಳಿಯಿರಿ.

FY ಸಿಲೆಕ್ಟ್‌ ಮಾಡಿದ ಬಳಿಕ Taxpayer Information System ಮತ್ತು AIS ವೀಕ್ಷಿಸಿ.

TIS ಮೇಲೆ ಕ್ಲಿಕ್ಕಿಸಿದ ಬಳಿಕ ನಿಮ್ಮ ವೇತನ ವಿವರ, ಮ್ಯೂಚುವಲ್‌ ಫಂಡ್‌ ವಿವರಗಳನ್ನು ತಿಳಿದುಕೊಳ್ಳಬಹುದು.

AIS ಮೇಲೆ ಕ್ಲಿಕ್ಕಿಸಿ TDS/TCS ಮಾಹಿತಿ, SFT ಮಾಹಿತಿ, ತೆರಿಗೆ ಪಾವತಿ, ಡಿಮಾಂಡ್‌ & ರಿಫಂಡ್‌, ಇತರ ಮಾಹಿತಿಗಳನ್ನು ಪಡೆಯಬಹುದು.

Annual Information Statement ಅನ್ನು ವೆಬ್‌ ಪೋರ್ಟಲ್‌ನಲ್ಲಿ ವೀಕ್ಷಿಸುವುದು ಹೇಗೆ?

https://www.incometax.gov.in/ ವೆಬ್‌ ಪೋರ್ಟಲ್‌ಗೆ ಲಾಗಿನ್‌ ಆಗಿ. Annual Information Statement (AIS) ಗೆ ಲಾಗಿನ್‌ ಆಗಿ.

AIS tab ಮೇಲೆ ಕ್ಲಿಕ್ಕಿಸಿ, FY ಆಯ್ಕೆ ಮಾಡಿರಿ. AIS Title ಮೇಲೆ ಕ್ಲಿಕ್ಕಿಸಿ Annual information statement ವೀಕ್ಷಿಸಿ. Annual Information Statement ಎಂದರೆ ಫಾರ್ಮ್‌ 26AS ನಲ್ಲಿ ಸಿಗುವ ತೆರಿಗೆದಾರರ ಸಮಗ್ರ ವಿವರಗಳು.

ಇದನ್ನೂ ಓದಿ: Income tax return filing : ವೆಬ್‌ಸೈಟ್‌ನಲ್ಲಿ ಐಟಿಆರ್‌ 1, 4 ಫಾರ್ಮ್‌ ಲಭ್ಯ, ರಿಟರ್ನ್‌ ಸಲ್ಲಿಕೆಗೆ ರೆಡಿಯಾಗಿದ್ದೀರಾ?

Exit mobile version