Site icon Vistara News

Income tax return filing : ವೆಬ್‌ಸೈಟ್‌ನಲ್ಲಿ ಐಟಿಆರ್‌ 1, 4 ಫಾರ್ಮ್‌ ಲಭ್ಯ, ರಿಟರ್ನ್‌ ಸಲ್ಲಿಕೆಗೆ ರೆಡಿಯಾಗಿದ್ದೀರಾ?

ITR FIle

ಆದಾಯ ತೆರಿಗೆ ಇಲಾಖೆ ಇಲಾಖೆಯು ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಅನುಕೂಲವಾಗಲು ಐಟಿಆರ್-‌1 ಮತ್ತು ಐಟಿಆರ್‌ 4 ಫಾರ್ಮ್ ಅನ್ನು ತನ್ನ ವೆಬ್‌ ಪೋರ್ಟಲ್‌ನಲ್ಲಿ‌ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿದೆ. (Income tax return filing) pre-filled mode ನಲ್ಲಿ ಈ ಫಾರ್ಮ್‌ಗಳು ಲಭ್ಯವಿದೆ.

ಆದಾಯ ತೆರಿಗೆ ಇಲಾಖೆಯ e-filing website ನಲ್ಲಿ pre-filled data ಸಹಿತ ಐಟಿಆರ್‌ ಫಾರ್ಮ್‌ಗಳು ಲಭ್ಯವಿದೆ. ಫಾರ್ಮ್‌ 16 ನಲ್ಲಿ ನಮೂದಾಗಿರುವಂತೆ ವೇತನ ಮೂಲದ ಆದಾಯ, ಉಳಿತಾಯ ಖಾತೆ ಮೂಲದ ಬಡ್ಡಿ ಆದಾಯ, ಫಿಕ್ಸೆಡ್‌ ಡೆಪಾಸಿಟ್‌ ಆದಾಯ ವಿವರ ಇತ್ಯಾದಿಗಳು pre-filled data ಆಗಿ ಇರಲಿದೆ. ಅಂದರೆ ಆಟೊಮ್ಯಾಟಿಕ್‌ ಆಗಿ ಈ ವಿವರಗಳು ಫಾರ್ಮ್‌ಮಲ್ಲಿ ಭರ್ತಿ ಆಗಿರಲಿದೆ.

ಆನ್‌ಲೈನ್‌ ಐಟಿಆರ್‌ ಫಾರ್ಮ್‌ಗಳಿಂದ ವೈಯಕ್ತಿಕ ಆದಾಯ ತೆರಿಗೆ ವಿವರ ಸಲ್ಲಿಕೆ (Income tax return) ಸುಲಭವಾಗಿದೆ. ಡೇಟಾಗಳನ್ನು ಕ್ರಾಸ್‌ ಚೆಕ್‌ ಮಾಡಿದರೆ ಸಾಕಾಗುತ್ತದೆ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಈ ವರ್ಷ ಫೆಬ್ರವರಿಯಲ್ಲಿ ಐಟಿಆರ್‌ ಫಾರ್ಮ್‌ಗಳನ್ನು ಅಧಿಸೂಚನೆಗೊಳಿಸಿತ್ತು.

ಕೊನೆ ದಿನ ಜುಲೈ 31:

2022-23ರ ಆರ್ಥಿಕ ವರ್ಷ (FY 2022-23) ಮತ್ತು 2023-24ರ ಮೌಲ್ಯ ಮಾಪನ ವರ್ಷದ (AY 2023-24) ಐಟಿ ರಿಟರ್ನ್‌ ಸಲ್ಲಿಸಲು 2023ರ ಜುಲೈ 31 ಕೊನೆಯ ದಿನಾಂಕವಾಗಿದೆ. ಸರ್ಕಾರ ಒಂದು ವೇಳೆ ಮುಂದೂಡಿದರೆ ಗಡುವು ಬದಲಾಗಬಹುದು. ಇಲ್ಲದಿದ್ದರೆ ಇದುವೇ ಅಂತಿಮ. 2022-23ರಲ್ಲಿ ನೀವು ಗಳಿಸಿದ ಆದಾಯಕ್ಕೆ ಇದು ಸಂಬಂಧಿಸಿದೆ.

ಐಟಿಆರ್‌-1 ಅರ್ಜಿಯು ಒಟ್ಟು ವಾರ್ಷಿಕ ಆದಾಯ 50 ಲಕ್ಷ ರೂ. ದಾಟದವರಿಗೆ ಅನ್ವಯವಾಗುತ್ತದೆ. ವೇತನ ಮೂಲದ ಆದಾಯ, ಒಂದು ಮನೆಯ ಪ್ರಾಪರ್ಟಿಯಿಂದ ಸಿಗುವ ಆದಾಯ, ಇತರ ಮೂಲಗಳ ಆದಾಯ ಇರುವವರು ಐಟಿಆರ್-‌1 ಬಳಸಬಹುದು. ಬಿಸಿನೆಸ್‌ ಮೂಲಕ ಆದಾಯ ಇರುವವರು ಐಟಿಆರ್-‌4 ಬಳಸಬೇಕಾಗುತ್ತದೆ.

ಈ ಹಿಂದೆ ನಾನಾ ಕಾರಣಗಳಿಗೆ ಐಟಿಆರ್‌ ಫೈಲಿಂಗ್‌ ಗಡುವನ್ನು ಸರ್ಕಾರ ವಿಸ್ತರಿಸಿತ್ತು. ಈ ಸಲ ಹಾಗೆ ವಿಸ್ತರಿಸುವ ಸಾಧ್ಯತೆ ಕಾಣಿಸುತ್ತಿಲ್ಲ.

ಐಟಿಆರ್‌ ಫೈಲಿಂಗ್‌ ಸೌಲಭ್ಯವು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲಭ್ಯವಿದೆ. incometax.gov.in

ಇದನ್ನೂ ಓದಿ: ವಿಸ್ತಾರ Money Guide | ಶೀಘ್ರದಲ್ಲಿ‌ ಎಲ್ಲರಿಗೂ ಏಕರೂಪದ ಐಟಿಆರ್‌ ಫಾರ್ಮ್ ?

Exit mobile version