ನವ ದೆಹಲಿ: ಭಾರತ ಮತ್ತು ರಷ್ಯಾ ಡಾಲರ್ ಅನ್ನು ಬದಿಗೊತ್ತಿ ತಮ್ಮ ರುಪಾಯಿ-ರುಬೆಲ್ ಕರೆನ್ಸಿಯಲ್ಲಿ ವ್ಯವಹರಿಸಲು ನಿರ್ಧರಿಸಿದ ಬೆನ್ನಲ್ಲೇ, ಇದೀಗ ಭಾರತ ಮತ್ತು ಸೌದಿ ಅರೇಬಿಯಾ ಕೂಡ ಡಾಲರ್ ಅನ್ನು ಕೈಬಿಟ್ಟು, (Rupee-riyal trade) ರೂಪಾಯಿ-ರಿಯಾಲ್‌ನಲ್ಲಿ ವ್ಯವಹರಿಸುವ ಬಗ್ಗೆ ಚರ್ಚೆ ಆರಂಭಿಸಿವೆ.
ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಭಾಗವಾಗಿ ಈ ಬದಲಾವಣೆಗೆ ಚರ್ಚೆ ನಡೆಯುತ್ತಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಯುಪಿಐ, ರುಪೇ ಕಾರ್ಡ್ ಬಿಡುಗಡೆಗೆ ಕೂಡ ಮಾತುಕತೆ ನಡೆದಿದೆ.
ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತವು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ತನ್ನದೇ ಕರೆನ್ಸಿಯಲ್ಲಿ ಮಾಡಲು ಮುಂದಾಗಿದೆ. ಈ ಸಂಬಂಧ ನಾನಾ ದೇಶಗಳ ಜತೆಗೆ ಮಾತುಕತೆ ನಡೆಸುತ್ತಿದೆ.
ಸೌದಿ ಅರೇಬಿಯಾದ ವಾಣಿಜ್ಯ ಸಚಿವ ಮಜೀದ್ ಬಿನ್ ಅಬ್ದುಲ್ಲಾ ಅಲ್ ಕಸಾಬಿ ಜತೆ ಮಾತುಕತೆಯ ಬಳಿಕ ಪಿಯೂಷ್ ಗೋಯೆಲ್ ಈ ವಿಷಯ ತಿಳಿಸಿದ್ದಾರೆ.
ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದಾರೆ. ಈ ಸಂದರ್ಭ ರುಪಾಯಿ-ರಿಯಾಲ್ (ಸೌದಿ ಅರೇಬಿಯಾದ ಕರೆನ್ಸಿ) ವಿನಿಮಯದ ಬಗ್ಗೆ ಚರ್ಚೆ ನಡೆದಿದೆ.
2023ರ ಮಾರ್ಚ್ 31ಕ್ಕೆ ಅಂತ್ಯವಾದ ಸಾಲಿನಲ್ಲಿ ಸೌದಿ ಅರೇಬಿಯಾದಿಂದ ಭಾರತದ ಆಮದು 93% ಏರಿಕೆ ಆಗಿದೆ. 15.5 ಶತಕೋಟಿ ಡಾಲರ್ (1.22 ಲಕ್ಷ ಕೋಟಿ ರೂ.) ಸಭದಿ ಅರೇಬಿಯಾಕ್ಕೆ ಭಾರತದ ರಫ್ತು ಮೌಲ್ಯ 22% ಹೆಚ್ಚಳವಾಗಿದೆ. (3.5 ಶತಕೋಟಿ ಡಾಲರ್-27,650 ಕೋಟಿ ರೂ.)
ಇದನ್ನೂ ಓದಿ: ವಿಸ್ತಾರ Explainer | ಡಾಲರ್‌ಗೆ ಭಾರತ-ರಷ್ಯಾ ಡೋಂಟ್ ಕೇರ್, ಇನ್ಮುಂದೆ ರೂಪಾಯಿ-ರುಬೆಲ್ ದರ್ಬಾರ್!