ನವ ದೆಹಲಿ: ಭಾರತವು ಸುಮಾರು ಒಂದು ಡಜನ್‌ನಷ್ಟು ಸಣ್ಣ ರಾಷ್ಟ್ರಗಳ ಜತೆಗೆ ರೂಪಾಯಿಯಲ್ಲಿ (Rupee) ವ್ಯವಹರಿಸಲು ಮಾತುಕತೆ ಚುರುಕುಗೊಳಿಸಿದೆ. ಒಂದು ಕಡೆ ದ್ವಿಪಕ್ಷೀಯ ವ್ಯಾಪಾರಾಭಿವೃದ್ಧಿಯಾಗಲಿದೆ. ಮತ್ತೊಂದು ಕಡೆ ಡಾಲರ್ ಬದಲಿಗೆ ರೂಪಾಯಿಯ ಬಳಕೆಗೆ ಸಾಧ್ಯವಾಗಲಿದೆ. ರೂಪಾಯಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರೆನ್ಸಿಯಾಗಿ ಬಲಪಡಿಸಲು ಅನುಕೂಲವಾಗಲಿದೆ.
ಡಿಜಿಬೌಟಿ, ಜಿಂಬಾಬ್ವೆ, ಮಾಲಾವಿ, ಇಥಿಯೋಪಿಯಾ, ಕೀನ್ಯಾ, ನಮೀಬಿಯಾ, ಬಾಂಗ್ಲಾದೇಶದ ಜನತೆಗೆ ಮಾತುಕತೆ ನಡೆಯುತ್ತಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಗಳಲ್ಲಿ ಡಾಲರ್ ಅನ್ನು ಬೈಪಾಸ್ ಮಾಡಲು ಭಾರತ ಅಂಬೆಗಾಲಿಕ್ಕಿದೆ.
ಈ ದೇಶಗಳ ಜತೆಗೆ ಭಾರತದ ವಾಣಿಜ್ಯ ವಹಿವಾಟು ನಗಣ್ಯವಾಗಿದ್ದರೂ, ಕ್ರಮೇಣ ಮತ್ತಷ್ಟು ದೇಶಗಳು ರೂಪಾಯಿ ಜತೆ ವಹಿವಾಟು ನಡೆಸಲು ಒಪ್ಪಿಕೊಳ್ಳುವ ಸಾಧ್ಯತೆ ಇದೆ.