Site icon Vistara News

IMF Report : ಭಾರತ 2023ರಲ್ಲಿ ಪ್ರಬಲ ಆರ್ಥಿಕತೆಯಾಗಲಿದೆ: ಐಎಂಎಫ್‌ ಭವಿಷ್ಯ

India debt rising constantly Says IMF report

ನವ ದೆಹಲಿ: ಭಾರತ ಮತ್ತು ಚೀನಾ 2023ರಲ್ಲಿ ಪ್ರಬಲ ಆರ್ಥಿಕತೆಗಳಾಗಿ ನಿರ್ಣಾಯಕ ಪಾತ್ರ ವಹಿಸಲಿದೆ. ಜಾಗತಿಕ ಬೆಳವಣಿಗೆಯಲ್ಲಿ 50% ಪಾಲನ್ನು ವಹಿಸಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ (IMF) ತನ್ನ ವರದಿಯಲ್ಲಿ ತಿಳಿಸಿದೆ. ಅಮೆರಿಕ ಮತ್ತು ಯುರೋಪ್‌ ಕೇವಲ 10ರಲ್ಲಿ ಒಂದು ಭಾಗವನ್ನು ಮಾತ್ರ ವಹಿಸಲಿವೆ ಎಂದಿರುವುದು ಗಮನಾರ್ಹ.

ಐಎಂಎಫ್‌ ಮುನ್ನೋಟದ ಪ್ರಕಾರ 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ 2.9%ಕ್ಕೆ ಇಳಿಕೆಯಾಗಲಿದೆ. 2022ರಲ್ಲಿ ಇದು 3.4%ರಷ್ಟು ಇತ್ತು. ಇದು 2024ರಲ್ಲಿ 3.1%ಕ್ಕೆ ಪ್ರಗತಿ ದಾಖಲಿಸಲಿದೆ ಎಂದು ಐಎಂಎಫ್‌ ವರದಿ ತಿಳಿಸಿದೆ.

ಐಎಂಎಫ್‌ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ ಪ್ರಸಕ್ತ ಸಾಲಿಗೆ (2022-23) ೬.೮%, 2023-24ರಲ್ಲಿ 6.1% ಇರಬಹುದು ಎಂದು ಅಂದಾಜಿಸಿದೆ. ಚೀನಾದ ಆರ್ಥಿಕ ಬೆಳವಣಿಗೆ 2023-24ರಲ್ಲಿ 5.2% ಇರಬಹುದು ಎಂದು ನಿರೀಕ್ಷಿಸಿದೆ. ಚೀನಾ ಸಂಪೂರ್ಣವಾಗಿ ಚೇತರಿಸುವುದರೊಂದಿಗೆ ಜಾಗತಿಕ ಆರ್ಥಿಕತೆಯೂ ಹಳಿಗೆ ಮರಳಲಿದೆ ಎಂದು ಐಎಂಎಫ್‌ ತಿಳಿಸಿದೆ.

Exit mobile version