Site icon Vistara News

‌YouTube : ಯೂಟ್ಯೂಬ್‌ ನೂತನ ಸಿಇಒ ಆಗಿ ಭಾರತೀಯ ಮೂಲದ ನೀಲ್‌ ಮೋಹನ್‌ ನೇಮಕ

Neal Mohan

Neal Mohan

ವಾಷಿಂಗ್ಟನ್:‌ ವಿಶ್ವದ ಅತಿ ದೊಡ್ಡ ಆನ್‌ಲೈನ್ ವಿಡಿಯೊ‌ ಪ್ಲಾಟ್‌ಫಾರ್ಮ್‌ ಆಗಿರುವ ಯೂಟ್ಯೂಬ್‌ ಕಂಪನಿಯ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ (CEO) ಭಾರತೀಯ ಮೂಲದ ನೀಲ್‌ ಮೋಹನ್‌ ನೇಮಕಗೊಂಡಿದ್ದಾರೆ. (Neal Mohan) ಹಾಲಿ ಸಿಇಒ ಸುಸಾನ್ ವೊಜುಸ್ಕಿ (54) ಅವರು ರಾಜೀನಾಮೆ ನೀಡಿದ್ದು, ಕುಟುಂಬ, ಆರೋಗ್ಯ, ವೈಯಕ್ತಿಕ ಅಭಿರುಚಿಯ ಕೆಲಸಗಳಿಗೋಸ್ಕರ ಯೂಟ್ಯೂಬ್‌ನ ಉನ್ನತ ಹುದ್ದೆಯಿಂದ ನಿರ್ಗಮಿಸುತ್ತಿರುವುದಾಗಿ ತಿಳಿಸಿದ್ದಾರೆ. ವೊಜುಸ್ಕಿ (‌ Wojcicki) ಅವರು ಗೂಗಲ್‌ನ ಆರಂಭಿಕ ಹಂತದಲ್ಲಿನ ಉದ್ಯೋಗಿಯಾಗಿದ್ದು, ಸುಮಾರು 25 ವರ್ಷ ಸೇವೆ ಸಲ್ಲಿಸಿದ್ದರು.

ಯೂಟ್ಯೂಬ್‌ನಿಂದ ನಿರ್ಗಮಿಸುತ್ತಿರುವ ಹಾಲಿ ಸಿಇಒ ಸುಸಾನ್‌ ವುಜುಸ್ಕಿ ಹಾಗೂ ನೂತನ ಸಿಇಒ ನೀಲ್‌ ಮೋಹನ್

ಯಾರಿವರು ನೀಲ್‌ ಮೋಹನ್?

ಯೂಟ್ಯೂಬ್‌ನ ನೂತನ ಸಿಇಒ ಆಗಿ ನೇಮಕಗೊಂಡಿರುವ ನೀಲ್‌ ಮೋಹನ್‌ ಅವರು ಕಂಪನಿಯ ಮುಖ್ಯ ಪ್ರಾಡಕ್ಟ್‌ ಅಧಿಕಾರಿಯಾಗಿ (Chief product officer) ನೇಮಕವಾಗಿದ್ದಾರೆ. 2015ರಿಂದ ಅವರು ಯೂಟ್ಯೂಬ್‌ನಲ್ಲಿ ಈ ಹುದ್ದೆಯಲ್ಲಿದ್ದರು. 2008ರಲ್ಲಿ ಅವರು ಗೂಗಲ್‌ಗೆ ಸೇರಿದ್ದರು.

ನೀಲ್‌ ಮೋಹನ್‌ ಅವರು ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕ್‌ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದರು. ಯೂಟ್ಯೂಬ್‌ನ ಶಾರ್ಟ್ಸ್‌, ಮ್ಯೂಸಿಕ್‌ ಮತ್ತು ಸಬ್‌ಸ್ಕ್ರಿಪ್ಷನ್‌ ವ್ಯವಸ್ಥೆಯನ್ನು ಬಲಪಡಿಸಿದವರು. ಈ ಹಿಂದೆ ಮೈಕ್ರೊಸಾಫ್ಟ್‌ನಲ್ಲಿ ಕೆಲಸ ಮಾಡಿದ್ದರು.

ನೂತನ ಸಿಇಒ ಆಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಸುಸಾನ್‌ ವುಜುಸ್ಕಿ ಅವರಿಗೆ ಧನ್ಯವಾದ ತಿಳಿಸಿರುವ ನೀಲ್‌ ಮೋಹನ್‌, ಯೂಟ್ಯೂಬ್‌ ಅನ್ನು ಕ್ರಿಯೇಟರ್ಸ್‌ ಮತ್ತು ವ್ಯೂವರ್ಸ್‌ಗೆ ವಿಶೇಷ ವೇದಿಕೆಯಾಗಿ ಕಲ್ಪಿಸುವಲ್ಲಿ ವುಜುಸ್ಕಿ ಅವರ ಕೊಡುಗೆ ಅನನ್ಯ ಎಂದು ಹೇಳಿದ್ದಾರೆ.

Exit mobile version