ಬೆಂಗಳೂರು: ಇನ್ಫೋಸಿಸ್‌ಗೆ ರಾಜೀನಾಮೆ ಸಲ್ಲಿಸಿದ್ದ ಅಧ್ಯಕ್ಷ ರವಿ ಕುಮಾರ್, ಇದೀಗ ಮತ್ತೊಂದು ಐಟಿ ಕಂಪನಿ ಕಾಗ್ನಿಜೆಂಟ್‌ಗೆ (Cognizant) ಸೇರ್ಪಡೆಯಾಗಲಿದ್ದಾರೆ.
ಕಾಗ್ನಿಜೆಂಟ್‌ನ ಅಮೆರಿಕ ಮಾರುಕಟ್ಟೆಯ ಮೇಲುಸ್ತುವಾರಿಯನ್ನು ರವಿ ಕುಮಾರ್ ವಹಿಸಿಕೊಳ್ಳಲಿದ್ದಾರೆ. ಕಾಗ್ನಿಜೆಂಟ್‌ನ ಹಿರಿಯ ಉದ್ಯೋಗಿ ಸೂರ್ಯ ಗುಮ್ಮಾಡಿ ಈ ತನಕ ಹಂಗಾಮಿಯಾಗಿ ಆ ಹುದ್ದೆಯಲ್ಲಿದ್ದರು.
ರವಿ ಕುಮಾರ್ ಅವರು ಕಾಗ್ನಿಜೆಂಟ್ ಅನ್ನು 2023 ಜನವರಿ 16ರಿಂದ ಸೇರ್ಪಡೆಯಾಗಲಿದ್ದಾರೆ. ಕಾಗ್ನಿಜೆಂಟ್ ಅಮೇರಿಕಾಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿಯು ಷೇರು ಪೇಟೆ ನಿಯಂತ್ರಕಕ್ಕೆ ಸಲ್ಲಿಸಿದ ವಿವರದಲ್ಲಿ ತಿಳಿಸಿದೆ.
ರವಿ ಕುಮಾರ್ ಅವರು ಐಟಿ ಕನ್ಸಲ್ಟಿಂಗ್, ಪ್ರೊಸೆಸ್ ಮತ್ತು ಟೆಕ್ನಾಲಜಿ ಟ್ರಾನ್ಸ್‌ಫಾರ್ಮೇಶನ್ ವಲಯದಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾರೆ. ಇನ್ಫೋಸಿಸ್‌ನಲ್ಲಿ ಅವರು ಸಿಇಒ ಸಲೀಲ್ ಪರೇಖ್, ಸಿಒಒ ಯುಬಿ ಪ್ರವೀಣ್ ರಾವ್ ಬಳಿಕ ಅತಿ ಹೆಚ್ಚು ವೇತನ ಪಡೆಯುವ ಉದ್ಯೋಗಿಯಾಗಿದ್ದರು.