ಮೂಲಸೌಕರ್ಯ ವಲಯದ ಫಂಡ್ ಕೆಟಗರಿಯು ಕಳೆದ ಮೂರು ವರ್ಷಗಳಲ್ಲಿ ಹೂಡಿಕೆದಾರರಿಗೆ 35.49% ಆದಾಯವನ್ನು ನೀಡಿದೆ. (Infrastructure fund) ಈ ಕೆಟಗರಿಯು ಕಳೆದ ಐದು ವರ್ಷಗಳಲ್ಲಿ 15.61% ವರಮಾನವನ್ನು ಕೊಟ್ಟಿದೆ.
ಟಾಪ್ ಫಂಡ್‌ಗಳಿಂದ ವಾರ್ಷಿಕ 40% ಆದಾಯ: ನಿಪ್ಪೋನ್ ಇಂಡಿಯಾ ಪವರ್ & ಇನ್‌ಫ್ರಾ ಫಂಡ್ & ಎಚ್‌ಡಿಎಫ್‌ಸಿ ಇನ್‌ಫ್ರಾಸ್ಟ್ರಕ್ಚರ್ ಫಂಡ್ ಒಂದು ವರ್ಷದಲ್ಲಿ ಅನುಕ್ರಮವಾಗಿ 42.53% ಮತ್ತು 41.08% ಆದಾಯ ನೀಡಿದೆ.
ಏಳು ಫಂಡ್‌ಗಳಲ್ಲಿ 30% ಕ್ಕೂ ಹೆಚ್ಚು ಆದಾಯ ಗಳಿಕೆ: ಮ್ಯೂಚುವಲ್ ಫಂಡ್‌ಗಳಲ್ಲಿ ಈ ಏಳು ಸ್ಕೀಮ್‌ಗಳು ಹೂಡಿಕೆದಾರರಿಗೆ 30%ಕ್ಕೂ ಹೆಚ್ಚು ಆದಾಯವನ್ನು ನೀಡಿದೆ. ಅವೆಂದರೆ ಆದಿತ್ಯ ಬಿರ್ಲಾ ಸನ್ ಲೈಫ್ ಇನ್‌ಫ್ರಾಸ್ಟ್ರಕ್ಚರ್ ಫಂಡ್, ಐಸಿಐಸಿಐ ಪ್ರುಡೆನ್ಷಿಯಲ್ ಇನ್‌ಫ್ರಾಸ್ಟ್ರಕ್ಚರ್ ಫಂಡ್, ಬಂಧನ್ ಇನ್‌ಫ್ರಾಸ್ಟ್ರಕ್ಚರ್ ಫಂಡ್, ಎಚ್‌ಎಸ್‌ಬಿಸಿ ಇನ್‌ಫ್ರಾಸ್ಟ್ರಕ್ಚರ್ ಫಂಡ್, ಡಿಎಸ್‌ಪಿ ಇಂಡಿಯಾ ಟಿ.ಐ.ಜಿ.ಇ.ಆರ್ ಫಂಡ್, ಫ್ರಾಂಕ್ಲಿನ್ ಬಿಲ್ಡ್ ಇಂಡಿಯಾ ಫಂಡ್, ಕೋಟಕ್ ಇನ್ ಫ್ರಾ & ಇಕೊ ರಿಫಾರ್ಮ್ ಫಂಡ್ ಕಳೆದ ಒಂದು ವರ್ಷದಲ್ಲಿ 30% ಕ್ಕೂ ಹೆಚ್ಚು ಆದಾಯ ನೀಡಿದೆ.
ಟಾಪ್ ಫಂಡ್‌ಗಳಿಂದ 40% ಆದಾಯ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ವಾಂಟ್ ಇನ್‌ಫ್ರಾಸ್ಟ್ರಕ್ಚರ್ ಫಂಡ್, ಐಸಿಐಸಿಐ ಪ್ರು ಇನ್‌ಫ್ರಾಸ್ಟ್ರಕ್ಚರ್ ಫಂಡ್, ಎಚ್‌ಡಿಎಫ್‌ಸಿ ಇನ್‌ಫ್ರಾಸ್ಟ್ರಕ್ಚರ್ ಫಂಡ್ ಮತ್ತು ಎಚ್‌ಡಿಎಫ್‌ಸಿ ಇನ್‌ಫ್ರಾಸ್ಟ್ರಕ್ಚರ್ ಫಂಡ್ 40%ಕ್ಕೂ ಹೆಚ್ಚು ಆದಾಯ ನೀಡಿದೆ.
ನೀವು ಈಗ ಹೂಡಿಕೆ ಮಾಡಬಹುದೇ?: ಹೈ ರಿಸ್ಕ್ ಟಾಲರೆನ್ಸ್ ಕೆಟಗರಿಯಲ್ಲಿ ಹೂಡಿಕೆ ಮಾಡಲು ಬಯಸುವವರು ಇನ್‌ಫ್ರಾಸ್ಟ್ರಕ್ಚರ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ದೀರ್ಘಕಾಲೀನ ಹೂಡಿಕೆಗೆ ಇದನ್ನು ಆಯ್ಕೆ ಮಾಡಿಕೊಳ್ಳಬಹುದು.
ಕೇಂದ್ರ ಸರ್ಕಾರ 2023-24ರಲ್ಲಿ ಮೂಲಸೌಕರ್ಯ ವಲಯಕ್ಕೆ ಬಜೆಟ್ ಅನುದಾನವನ್ನು ಗಣನೀಯವಾಗಿ ಇರಿಸಿರುವುದರಿಂದ ಇನ್‌ಫ್ರಾಸ್ಟ್ರಕ್ಚರ್ ಫಂಡ್‌ಗಳಿಗೆ ಉತ್ತಮ ಭವಿಷ್ಯ ಇದೆ ಎನ್ನುತ್ತಾರೆ ತಜ್ಞರು. ಪ್ರಸ್ತುತ 17 ಮ್ಯೂಚುವಲ್ ಫಂಡ್ ಯೋಜನೆಗಳು ಮೂಲಸೌಕರ್ಯ ಕೆಟಗರಿಯಲ್ಲಿ ಹೂಡಿವೆ.
ಏನಿದು ಇನ್‌ಫ್ರಾಸ್ಟ್ರಕ್ಚರ್ ಮ್ಯೂಚುವಲ್ ಫಂಡ್? ಮೂಲ ಸೌಕರ್ಯ ವಲಯದಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳನ್ನು ಇನ್‌ಫ್ರಾಸ್ಟ್ರಕ್ಚರ್ ಮ್ಯೂಚುವಲ್ ಫಂಡ್‌ಗಳೆನ್ನುತ್ತೇವೆ. ಇಂಧನ, ವಿದ್ಯುತ್, ಲೋಹ, ರಿಯಾಲ್ಟಿ ವಲಯದ ಕಂಪನಿಗಳು ಇದರಲ್ಲಿವೆ. ಉದಾಹರಣೆಗೆ ಆದಿತ್ಯ ಬಿರ್ಲಾ ಸನ್ ಲೈಫ್ ಇನ್‌ಫ್ರಾಸ್ಟ್ರಕ್ಚರ್ ಫಂಡ್, ಲಾರ್ಸನ್ & ಟೂಬ್ರೊ, ಭಾರ್ತಿ ಏರ್‌ಟೆಲ್, ಅಲ್ಟ್ರಾ ಟೆಕ್ ಸಿಮೆಂಟ್, ಆರ್‌ಎಚ್‌ಐ ಮ್ಯಾಗ್ನೇಸ್ಟಿಯಾ ಇಂಡಿಯಾ, ಎಸ್‌ಬಿಐ, ಪಾಲಿಕ್ಯಾಬ್, ಎನ್‌ಸಿಸಿ ಲಿಮಿಟೆಡ್ ಇತ್ಯಾದಿ ಕಂಪನಿಗಳ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದೆ.
ಕಳೆದ ಜುಲೈನಲ್ಲಿ ಮ್ಯೂಚುವಲ್ ಫಂಡ್ ಯೋಜನೆಗಳಿಗೆ 15,242 ಕೋಟಿ ರೂ. ಸಿಪ್ ಹೂಡಿಕೆ ಹರಿದು ಬಂದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ದೇಶದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವುದನ್ನು ಇದು ಬಿಂಬಿಸಿದೆ.