ಆದಾಯ ತೆರಿಗೆ ರಿಟರ್ನ್( ITR) ಸಲ್ಲಿಕೆಯಲ್ಲಿ ನೀವು ನಿಮ್ಮ ಆದಾಯ, ತೆರಿಗೆ ಕಡಿತ, ನಿರ್ದಿಷ್ಟು ಆರ್ಥಿಕ ವರ್ಷದಲ್ಲಿ ಸಲ್ಲಿಸಿದ ತೆರಿಗೆಗಳ ವಿವರಗಳನ್ನು ದಾಖಲಿಸುತ್ತೀರಿ. ಐಟಿಆರ್ ಸಲ್ಲಿಸುವ ಪ್ರಕ್ರಿಯೆಯನ್ನು ಇನ್‌ಕಮ್ ಟ್ಯಾಕ್ಸ್ ಫೈಲಿಂಗ್ (Income Tax filing) ಎನ್ನುತ್ತಾರೆ.
ಐಟಿಆರ್ ಫೈಲಿಂಗ್ ಮಾಡುವ ಉದ್ದೇಶ ಏನೆಂದರೆ, ನೀವು ಎಷ್ಟು ತೆರಿಗೆ ಕಟ್ಟಬೇಕಿದೆ ಎಂಬುದನ್ನು ತಿಳಿಯುವುದು. ಯಾವುದೇ ಹೆಚ್ಚುವರಿ ತೆರಿಗೆ ಪಾವತಿಸಬೇಕಿದ್ದರೆ ಕೊಡಬಹುದು. ಜತೆಗೆ ಅಗತ್ಯಕ್ಕಿಂತ ಹೆಚ್ಚು ತೆರಿಗೆ ಕಟ್ಟಿದ್ದರೆ ಅದನ್ನು ಹಿಂತೆಗೆದುಕೊಳ್ಳಲು ಕ್ಲೇಮ್ ಮಾಡಿಕೊಳ್ಳಬಹುದು.
ನಿಮ್ಮ ವಾರ್ಷಿಕ ಆದಾಯ 2.5 ಲಕ್ಷ ರೂ.ಗಿಂತ ಮೇಲಿದ್ದರೆ ಅಥವಾ ನೀವು ನಿರ್ದಿಷ್ಟ ವರ್ಗದ ಮೂಲದಿಂದ ಆದಾಯ ಹೊಂದಿದ್ದರೆ ಐಟಿಆರ್ ಸಲ್ಲಿಸಬೇಕಾಗುತ್ತದೆ. ವಿದೇಶಿ ಮೂಲದ ಆದಾಯ ಅಥವಾ ಕ್ಯಾಪಿಟಲ್ ಗೇನ್ಸ್ ಇದ್ದರೆ ಐಟಿಆರ್ ಫೈಲಿಂಗ್ ಮಾಡಬೇಕು.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಪಾಸಣೆ ಮತ್ತು ಜಪ್ತಿಗೆ ಗುರಿಯಾದವರು ಪರಿಷ್ಕ್ರತ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬಹುದು. ಐಟಿ ಇಲಾಖೆಯು 2023-24 ಸಾಲಿಗೆ ITR-1 ಅನ್ನು ಪರಿಷ್ಕರಿಸಿದ್ದರೂ, 6 ಐಟಿಆರ್ ಅರ್ಜಿಗಳಲ್ಲಿ ಅಂಥ ಬದಲಾವಣೆ ಮಾಡಿಲ್ಲ. ವೈಯಕ್ತಿಕ ತೆರಿಗೆದಾರರು, ವೃತ್ತಿಪರರು, ಬಿಸಿನೆಸ್‌ಗಳಲ್ಲಿ ತೊಡಗಿಸಿಕೊಂಡವರು ಇವುಗಳನ್ನು ಬಳಸಬಹುದು.
ಈ ಸಲ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) ಫೆಬ್ರವರಿ 10ರಂದು ಐಟಿಆರ್ ಫಾರ್ಮ್‌ಗಳ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಐಟಿಆರ್ ಫಾರ್ಮ್ 1-6, ITR-V (verification form), ITR acknowledgement form ಬಗ್ಗೆ ಅಧಿಸೂಚನೆ ಹೊರಡಿಸಿದೆ. ಸಿಬಿಡಿಟಿಯು 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವವರಿಗೆ ಸ್ವಯಂ ಪ್ರೇರಣೆಯಿಂದ ರಿಟರ್ನ್ ಸಲ್ಲಿಸಲು ಐಟಿಆರ್-1ರಲ್ಲಿ ಸೆಕ್ಷನ್ 139(1) ಅಡಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ.
ಯಾರು ಐಟಿಆರ್ 1 ಸಹಜ್ ಬಳಸಬಹುದು?
ಐಟಿಆರ್ ಫಾರ್ಮ್ 1 (ಸಹಜ್) ಮತ್ತು ಐಟಿಆರ್ ಫಾರ್ಮ್ 4 (ಸುಗುಣ್) ಸರಳವಾದ ಫಾರ್ಮ್‌ಗಳಾಗಿದ್ದು, ಸಣ್ಣ ಮತ್ತು ಮಧ್ಯಮ ತೆರಿಗೆದಾರರ ಅಗತ್ಯವನ್ನು ಪೂರೈಸುತ್ತದೆ. ಸಹಜ್ ಅನ್ನು ವಾರ್ಷಿಕ 50 ಲಕ್ಷ ರೂ. ತನಕ ಆದಾಯ ಇರುವವರು ಮತ್ತು ಸಂಬಳ, ಒಂದು ವಸತಿ ಪ್ರಾಪರ್ಟಿ, ಇತರ ಮೂಲಗಳ ಆದಾಯ (ಬಡ್ಡಿ ಇತ್ಯಾದಿ), 5 ಸಾವಿರ ರೂ. ತನಕ ಕೃಷಿ ಮೂಲದ ಆದಾಯ ಇದ್ದರೆ ಐಟಿಆರ್ 1 ಸಹಜ್‌ನಲ್ಲಿ ನಮೂದಿಸಿ ಫೈಲ್ ಮಾಡಬಹುದು.
ಸುಗಮ್ ಅರ್ಜಿಯನ್ನು ವೈಯಕ್ತಿಕ ತೆರಿಗೆದಾರರು, ಹಿಂದೂ ಅವಿಭಜಿತ ಕುಟುಂಬಗಳು (Hindu Undivided Families) ಮತ್ತು ಎಲ್‌ಎಲ್‌ಪಿ ಹೊರತುಪಡಿಸಿದ ಕಂಪನಿಗಳು ಬಳಸಬಹುದು. ಒಟ್ಟು ಆದಾಯ 50 ಲಕ್ಷ ರೂ. ಒಳಗಿರಬೇಕು.
ITR -1 (ಸಹಜ್) ಅಡಿಯಲ್ಲಿ ಫೈಲಿಂಗ್‌ಗೆ ಯಾವ ದಾಖಲೆಗಳು ಅಗತ್ಯ?
ಹೌಸ್ ರೆಂಟ್ ರಿಸಿಪ್ಟ್, ಹೂಡಿಕೆ ಪೇಮೆಂಟ್ ಪ್ರೀಮಿಯಂ ರಿಸಿಪ್ಟ್ ಅನ್ವಯವಾಗುವುದಿದ್ದರೆ, ಫಾರ್ಮ್ 16 ಅಗತ್ಯವಾಗುತ್ತದೆ. ಐಟಿಆರ್‌ಗಳು annexure-less forms ಆಗಿದ್ದು, ಹೂಡಿಕೆಯ ಪ್ರೂಫ್, ಟಿಡಿಎಸ್ ಸರ್ಟಿಫಿಕೇಟ್‌ಗಳನ್ನು ಅಟ್ಯಾಚ್ ಮಾಡುವ ಅಗತ್ಯ ಇರುವುದಿಲ್ಲ. ಆದರೆ ನೀವು ಈ ದಾಖಲೆಗಳನ್ನು ಇಟ್ಟುಕೊಳ್ಳುವುದು ಸೂಕ್ತ. ತೆರಿಗೆ ಅಧಿಕಾರಿಗಳು ಯಾವುದಾದರೂ ತಪಾಸಣೆಯ ವೇಳೆ ಅಗತ್ಯ ಬಿದ್ದರೆ ನೀಡಲು ಸಹಾಯಕ.
ITR- 1 ( ಸಹಜ್) ಅನ್ನು ಆನ್‌ಲೈನ್ ಮೂಲಕ ಫೈಲ್ ಮಾಡುವುದು ಹೇಗೆ?
ಆದಾಯ ತೆರಿಗೆ ಇಲಾಖೆಯ e-Filing ಪೋರ್ಟಲ್‌ನಲ್ಲಿ ನೋಂದಾಯಿತ ಬಳಕೆದಾರರು ಪ್ರಿ-ಫೈಲಿಂಗ್ ಮತ್ತು ಐಟಿಆರ್-1 ಫೈಲಿಂಗ್ ಮಾಡಲು ಸಾಧ್ಯ.
ಆನ್‌ಲೈನ್‌ನಲ್ಲಿ ಐಟಿಆರ್ ಸಲ್ಲಿಕೆಯ ವಿಧಾನ ಇಂತಿದೆ:
- e-filing portal ನಲ್ಲಿ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
- ಡ್ಯಾಶ್ ಬೋರ್ಡ್‌ನಲ್ಲಿ e-file ಕ್ಲಿಕ್ಕಿಸಿ > Income tax returns >file income tax return
- ಅಸೆಸ್‌ಮೆಂಟ್ ವರ್ಷ ಮತ್ತು ಮೋಡ್ ಆಫ್ ಫೈಲಿಂಗ್ ಆನ್‌ಲೈನ್ ಎಂದು ಆಯ್ಕೆ ಮಾಡಿ ಕ್ಲಿಕ್ಕಿಸಿ
- ಈಗಾಗಲೇ ರಿಟರ್ನ್ ಫೈಲ್ ಮಾಡಿದ್ದರೆ submission ಬಾಕಿ ಇದ್ದರೆ resume filing ಕ್ಲಿಕ್ ಮಾಡಿ.
- continue ಕ್ಲಿಕ್ಕಿಸಿ
- ITR ನಲ್ಲಿ ಎರಡು ಆಯ್ಕೆಗಳನ್ನು ಮಾಡಬಹುದು.
- lets get started ಕ್ಲಿಕ್ಕಿಸಿ.
- ಚೆಕ್ ಬಾಕ್ಸ್‌ಗಳನ್ನು ಆಯ್ಕೆ ಮಾಡಿ
- ಪ್ರಿ-ಫಿಲ್ಡ್ ಡೇಟಾಗಳನ್ನು ಪರಿಶೀಲಿಸಿ, ಅಗತ್ಯ ಬಿದ್ದರ ಎಡಿಟ್ ಮಾಡಿ
- ಆದಾಯ ಮತ್ತು ಡಿಡಕ್ಷನ್ ವಿವರಗಳನ್ನು ನಮೂದಿಸಿ
- ತೆರಿಗೆ ರೆಮಿಟೆನ್ಸ್ ಸಲುವಾಗಿ ಪೇ ನೌ ಮೇಲೆ ಕ್ಲಿಕ್ಕಿಸಿ.
- ಪೇಮೆಂಟ್ ಆದ ಬಳಿಕ ಇ-ಫೈಲಿಂಗ್ ಪೋರ್ಟಲ್ ಮೆಸೇಜ್ ಡಿಸ್ ಪ್ಲೇ ಆಗುತ್ತದೆ.
- preview return ಕ್ಲಿಕ್ಕಿಸಿ
- ಡಿಕ್ಲರೇಶನ್ ಚೆಕ್ ಬಾಕ್ಸ್ ಆಯ್ಕೆ ಮಾಡಿ. ಪ್ರೊಸೀಡ್ ಟು ಪ್ರಿವ್ಯೂ ಕ್ಲಿಕ್ಕಿಸಿ
- proceed to validation ಕ್ಲಿಕ್ಕಿಸಿ
- ವ್ಯಾಲಿಡೇಟ್ ಬಳಿಕ proceed to verification ಕ್ಲಿಕ್ಕಿಸಿ
- continue ಆಯ್ಕೆ ಮಾಡಿ
- e-verify page ಸೆಲೆಕ್ಟ್ ಮಾಡಿ. e-verify ಬೇಕಿದ್ದರೆ continue ಕ್ಲಿಕ್ಕಿಸಿ.
2022-23 ರ ಐಟಿಆರ್ ಸಲ್ಲಿಕೆಗೆ ಕೊನೆಯ ದಿನ 2023 ಜುಲೈ 31.