ನವದೆಹಲಿ: ಉದಯೋನ್ಮುಖ ಉದ್ಯಮಿಗಳಿಗೆ (budding entrepreneurs) ನೆರವು ಒದಗಿಸಲು, ನವೋದ್ಯಮಗಳಿಗೆ ಬೇಕಾದ ಪೂರಕ ವ್ಯವಸ್ಥೆಗಳನ್ನು (Startup Ecosystem) ಅಭಿವೃದ್ಧಿಪಡಿಸುವಲ್ಲಿ ಕರ್ನಾಟಕ (Karnataka) ಮತ್ತು ಗುಜರಾತ್ (Gujarat) ‘ಅತ್ಯುತ್ತಮ ಪ್ರದರ್ಶನ’ (Best Performers) ತೋರಿದ ರಾಜ್ಯಗಳಾಗಿವೆ ಎಂದು ಕೇಂದ್ರ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ ಹೇಳಿದೆ(Central Government). ಪ್ರತಿ ವರ್ಷವೂ ಈ ಶ್ರೇಯಾಂಕವನ್ನು ಇಲಾಖೆಯು ನೀಡುತ್ತದೆ. ಇದಕ್ಕಾಗಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡಿರುವ ಉದ್ಯಮಕ್ಕೆ ನೆರವಾಗುವ ಪರಿಸರ ವ್ಯವಸ್ಥೆಗಳನ್ನು ಪರಿಶೀಲಿಸಿ, ಶ್ರೇಯಾಂಕವನ್ನು ನೀಡುತ್ತದೆ.
ಅತ್ಯುತ್ತಮ ಪ್ರದರ್ಶನಕಾರರು, ಉನ್ನತ ಪ್ರದರ್ಶನಕಾರರು, ನಾಯಕರು, ಮಹತ್ವಾಕಾಂಕ್ಷಿ ನಾಯಕರು ಮತ್ತು ಉದಯೋನ್ಮುಖ ಆರಂಭಿಕ ಪರಿಸರ ವ್ಯವಸ್ಥೆಗಳು… ಹೀಗೆ ಐದು ವಿಭಾಗಗಳಲ್ಲಿ ಈ ರಾಜ್ಯಗಳನ್ನು ಪರಿಗಣಿಸಲಾಗಿದೆ. ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶವನ್ನು ಸಹ ಅತ್ಯುತ್ತಮ ಪ್ರದರ್ಶನ ತೋರಿದ ರಾಜ್ಯಗಳು ಎಂದು ಗುರುತಿಸಲಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಜನಸಂಖ್ಯೆಯ ಗಾತ್ರದ ಆಧಾರದ ಮೇಲೆ ಸ್ಥೂಲವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. 1 ಕೋಟಿಗಿಂತ ಹೆಚ್ಚು ಮತ್ತು 1 ಕೋಟಿಗಿಂತ ಕಡಿಮೆ ಇರುವ ರಾಜ್ಯಗಳು ಎಂದು ವರ್ಗಿಕರಿಸಲಾಗಿದೆ. ಗುಜರಾತ್ ಸತತವಾಗಿ ನಾಲ್ಕನೇ ಬಾರಿಗೆ ಅತ್ಯುತ್ತಮ ಪ್ರದರ್ಶನ ನೀಡಿದರೆ, ಕರ್ನಾಟಕ ಸತತ ಎರಡನೇ ವರ್ಷವೂ ಈ ವಿಭಾಗದಲ್ಲಿ ಸ್ಥಾನ ಪಡೆದಿದೆ.
ಈ ಕ್ರಮವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತಮ್ಮ ಆರಂಭಿಕ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಪರಸ್ಪರರ ಉತ್ತಮ ಅಭ್ಯಾಸಗಳಿಂದ ಕಲಿಯಲು ಬೆಂಬಲಿಸುವ ಗುರಿಯನ್ನು ಹೊಂದಿದೆ. ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಅರುಣಾಚಲ ಪ್ರದೇಶ ಮತ್ತು ಮೇಘಾಲಯವನ್ನು ಅತ್ಯುತ್ತಮ ಪ್ರದರ್ಶನ ತೋರಿದ ರಾಜ್ಯಗಳೆಂದು ವರ್ಗಿಕರಿಸಲಾಗಿದೆ. ಅದೇ ರೀತಿ ಎಂಟು ರಾಜ್ಯಗಳನ್ನು ‘ನಾಯಕ’ ಎಂದು ವರ್ಗೀಕರಿಸಲಾಗಿದೆ ಮತ್ತು ಅದರಲ್ಲಿ ಆಂಧ್ರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ತ್ರಿಪುರ ಸೇರಿವೆ.
ಕೈಗಾರಿಕಾ ಬೆಂಬಲ, ನಾವೀನ್ಯತೆಯನ್ನು ಬೆಳೆಸುವುದು, ಮಾರುಕಟ್ಟೆ ಲಭ್ಯತೆ, ಧನ ಸಹಾಯ ಬೆಂಬಲ ಸೇರಿದಂತೆ ಒಟ್ಟು 25 ಅಂಶಗಳನ್ನು ಈ ಶ್ರೇಯಾಂಕ ನೀಡಲು ಪರಿಗಣಿಸಲಾಗಿದೆ ಎಂದು ಸ್ಟೇಟ್ಸ್ ಸ್ಟಾರ್ಟ್-ಅಪ್ 2022 ರ್ಯಾಂಕಿಂಗ್ ಬಿಡುಗಡೆ ಮಾಡಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Startup policy | ಬೆಂಗಳೂರಿನಿಂದಾಚೆಗೂ ಟೆಕ್ ಕ್ರಾಂತಿ, 2027ರ ವೇಳೆಗೆ 25,000 ಸ್ಟಾರ್ಟಪ್‌ಗಳನ್ನು ಬೆಳೆಸುವ ಗುರಿ