Site icon Vistara News

Karnataka Bank | ಕರ್ಣಾಟಕ ಬ್ಯಾಂಕ್‌ ಶತಮಾನೋತ್ಸವದ ಲಾಂಛನ ಅನಾವರಣ

KBL

ಮಂಗಳೂರು: ದೇಶದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ (Karnataka Bank) 100ನೇ ವರ್ಷಕ್ಕೆ ಪದಾರ್ಣೆ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಶತಮಾನೋತ್ಸವದ ಲಾಂಛನವನ್ನು ಅನಾವರಣಗೊಳಿಸಿದೆ. ಸೆಲೆಬ್ರೇಟಿಂಗ್‌ ಹಂಡ್ರೆಡ್‌ ಇಯರ್ಸ್‌ ಆಫ್‌ ಟ್ರಸ್ಟ್‌ ( ವಿಶ್ವಾಸಾರ್ಹ ನಂಟಿನ ಶತ ಸಂಭ್ರಮ) ಎಂಬ ಘೋಷಾ ವಾಕ್ಯದೊಂದಿಗೆ ಲಾಂಛನ ಅನಾವರಣಗೊಂಡಿದೆ.

ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ಮಾತನಾಡಿದ ಬ್ಯಾಂಕಿನ ಸಿಇಒ ಮಹಾಬಲೇಶ್ವರ ಎಂ.ಎಸ್‌ ಅವರು, ಲಾಂಛನವು ಸ್ಪೂರ್ತಿದಾಯಕವಾಗಿದ್ದು, ಬ್ಯಾಂಕಿನ ಇತಿಹಾಸ ಮತ್ತು ಸುದೀರ್ಘ ಭವಿಷ್ಯವನ್ನು ಪ್ರತಿನಿಧಿಸಿದೆ. 1924ರಿಂದ ಇಲ್ಲಿವರೆಗಿನ ಬ್ಯಾಂಕಿನ ಇತಿಹಾಸದ ಭವ್ಯ ಯಾನದ ಪ್ರತೀಕದಂತಿದೆ. ಪ್ರಾದೇಶಿಕ ಅಸ್ಮಿತೆಯನ್ನು ಕಾಯ್ದುಕೊಂಡು ಜಾಗತೀಕರಣದತ್ತ ನೋಟ ಎಂಬ ತತ್ತ್ವವನ್ನು ಪ್ರತಿನಿಧಿಸುತ್ತದೆ. ನಂಬಿಕೆ, ವಿಶ್ವಾಸ, ಸಮಗ್ರತೆ ಮತ್ತು ಹಸಿರು ಪರಿಕ್ರಮಗಳಿಗೆ ಬ್ಯಾಂಕ್‌ ಹೆಸರುವಾಸಿಯಾಗಿರುವುದನ್ನು ಬಿಂಬಿಸಿದೆ. ಬ್ಯಾಂಕಿನ ಪರಿವರ್ತನಾ ಯಾತ್ರೆ ಕೆಬಿಎಲ್‌ ವಿಕಾಸ್‌ ಇದರ ಎರಡನೆಯ ಭಾಗವಾದ ಕೆಬಿಎಲ್‌ ನೆಕ್ಸ್ಟ್‌ನ ಡಿಜಿಟಲ್‌ ಉಪಕ್ರಮವನ್ನು ಕೂಡ ಲಾಂಛನದಲ್ಲಿ ಬಿಂಬಿಸಲಾಗಿದೆ ಎಂದು ವಿವರಿಸಿದರು.

Exit mobile version