Site icon Vistara News

EPF Interest Credit : 98% ಕಂಪನಿಗಳ ಖಾತೆಗೆ ಇತ್ತೀಚಿನ ಪಿಎಫ್‌ ಬಡ್ಡಿ ಜಮೆ

After RBI EPFO also blocks Paytm Payments Bank

ನವ ದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ (Employees provident fund) ಸಂಸ್ಥೆಯು ತನ್ನ ಸದಸ್ಯತ್ವ ಪಡೆದಿರುವ 98% ಕಂಪನಿಗಳಿಗೆ 2023ರ ಮಾರ್ಚ್‌ 6 ತನಕದ ಇತ್ತೀಚಿನ ಬಡ್ಡಿ ದರವನ್ನು ಜಮೆ ಮಾಡಿದೆ ಎಂದು ಸಂಸತ್ತಿಗೆ ಸೋಮವಾರ ತಿಳಿಸಲಾಯಿತು. 2021-22ರ ಇಪಿಎಫ್‌ ಬಡ್ಡಿದರ (8.1%) ಜಮೆಯಾಗಿಲ್ಲ ಎಂದು ( EPF Interest Credit ) ಹಲವಾರು ಸದಸ್ಯರು ದೂರಿದ್ದರು.

ಬಡ್ಡಿ ದರ ವಿತರಣೆ ಪ್ರಕ್ರಿಯೆ ನಿಯಮಿತವಾಗಿ ನಡೆಯುತ್ತಿರುತ್ತದೆ. ಸಾಫ್ಟ್‌ವೇರ್‌ ವ್ಯವಸ್ಥೆ ಅಭಿವೃದ್ಧಿಯಾಗಿರುವುದರಿಂದ, ಬಡ್ಡಿ ಜಮೆ ಪ್ರಕ್ರಿಯೆ ಚುರುಕಾಗಿದ್ದು, 98% ಸದಸ್ಯತ್ವ ಕಂಪನಿಗಳಲ್ಲಿನ ಉದ್ಯೋಗಿಗಳ ಖಾತೆಗೆ ಬಡ್ಡಿ ಜಮೆಯಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಸಹಾಯಕ ಸಚಿವ ರಾಮೇಶ್ವರ್‌ ತೇಲಿ ಅವರು ಲೋಕಸಭೆಗೆ ತಿಳಿಸಿದ್ದಾರೆ. ಬಡ್ಡಿ ದರ ಜಮೆಯು ಸಮಗ್ರ ಪ್ರಕ್ರಿಯೆಯಾಗಿದ್ದು, ಪ್ರತಿ ಸದಸ್ಯರ ಖಾತೆಗಳ ವೈಯಕ್ತಿಕ ವರ್ಗಾವಣೆಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದರು. 2021-22 ರಿಂದ ನೂತನ ಟಿಡಿಎಸ್‌ (ಮೂಲದಲ್ಲಿಯೇ ತೆರಿಗೆ ಕಡಿತ) ಪ್ರಕ್ರಿಯೆ ಆರಂಭವಾಗಿರುವುದರಿಂದ ಅಕೌಂಟಿಂಗ್‌ ಪ್ರಕ್ರಿಯೆಗಳು ಪರಿಷ್ಕರಣೆಯಾಗಿವೆ ಎಂದು ಅವರು ತಿಳಿಸಿದರು.

ಇಪಿಎಫ್‌ಒ ತನ್ನ ಸದಸ್ಯರ 3.6 ಕೋಟಿ ಕ್ಲೇಮ್‌ಗಳನ್ನು ಇತ್ತೀಚಿನ ಬಡ್ಡಿ ದರದೊಂದಿಗೆ ಪರಿಷ್ಕರಿಸಿ ಇತ್ಯರ್ಥಪಡಿಸಿದೆ ಎಂದು ತಿಳಿಸಿದರು. ಮಾರ್ಚ್‌ 27-28ರಂದು ಇಪಿಎಫ್‌ ಬೋರ್ಡ್‌ ಮೀಟಿಂಗ್‌ ನಡೆಯಲಿದೆ. ಈ ಸಭೆಯಲ್ಲಿ 2022-23ರ ಸಾಲಿನ ಇಪಿಎಫ್‌ಒ ಬಡ್ಡಿ ದರ ನಿಗದಿಯಾಗುವ ಸಾಧ್ಯತೆ ಇದೆ. 2021-22ರಲ್ಲಿ ಇಪಿಎಫ್ ಬಡ್ಡಿ ದರ 8.1% ಕ್ಕೆ ನಿಗದಿಯಾಗಿತ್ತು.

Exit mobile version