ಬೆಂಗಳೂರು: ಆನ್ಲೈನ್ ಶಿಕ್ಷಣ ಸಂಸ್ಥೆ ಬೈಜೂಸ್ (Byjus) ಮತ್ತೆ 1000 ಉದ್ಯೋಗಿಗಳನ್ನು ವಜಾಗೊಳಿಸಿದೆ. (layoffs) ಸ್ಟ್ರಾಟಜಿ, ತಂತ್ರಜ್ಞಾನ, ಪ್ರಾಡಕ್ಟ್ ವಿಭಾಗದ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವು ಉಪಾಧ್ಯಕ್ಷರು 1 ಕೋಟಿ ರೂ. ವೇತನ ಪಡೆಯುತ್ತಿದ್ದರು. ಅವರು ಈಗ ಕೆಲಸ ಕಳೆದುಕೊಂಡಿದ್ದಾರೆ. ಬೈಜೂಸ್ ಕಳೆದ ವರ್ಷ ಉದ್ಯೋಗ ಕಡಿತವನ್ನು ಆರಂಭಿಸಿತ್ತು.
ಹೊಸ ಗ್ರಾಹಕರ ಸಂಖ್ಯೆ ಕುಸಿದಿರುವ ಹಿನ್ನೆಲೆಯಲ್ಲಿ ಬೈಜೂಸ್ ತನ್ನ ವೆಚ್ಚ ನಿಯಂತ್ರಣದ ಭಾಗವಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 2022ರ ಅಕ್ಟೋಬರ್ನಲ್ಲಿ 2,500 ಉದ್ಯೋಗಿಗಳನ್ನು ವಜಾಗೊಳಿಸಿತ್ತು.