Site icon Vistara News

LIC IPO: ಎಲ್‌ಐಸಿಯ ಕೋಟ್ಯಂತರ ಷೇರುಗಳ ವಿತರಣೆಯನ್ನು ಹೇಗೆ ಮಾಡಿದರು ಗೊತ್ತೇ?

ಬೆಂಗಳೂರು: ಎಲ್‌ಐಸಿಯ ಬಹು ನಿರೀಕ್ಷಿತ ಐಪಿಒ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಇದೀಗ ಷೇರು ಮಂಜೂರಾತಿ ಕೂಡ ಅಂತಿಮವಾಗಿದೆ. ಬಿಡ್‌ ಸಲ್ಲಿಸಿದವರಲ್ಲಿ ಬಹುತೇಕ ಮಂದಿಗೆ ಷೇರು ಲಭಿಸಿದೆ. ಕೆಲವರಿಗೆ ಐಪಿಒದಲ್ಲಿ ಷೇರು ಸಿಗದ ಬೇಸರ ಕೂಡ ಇದೆ. ಹಾಗಾದರೆ ಎಲ್‌ಐಸಿಯ ಕೋಟ್ಯಂತರ ಷೇರುಗಳನ್ನು ಬಿಡ್‌ ಸಲ್ಲಿಸಿದವರಿಗೆ ಯಾವ ಲೆಕ್ಕಾಚಾರದಲ್ಲಿ ವಿತರಿಸಲಾಯಿತು?

ಮೂರನೇ ಒಂದರಷ್ಟು ಷೇರು ವಿತರಣೆ
ಷೇರು ಮಾರುಕಟ್ಟೆಯ ತಜ್ಞರ ಪ್ರಕಾರ, ಎಲ್‌ಐಸಿ ಐಪಿಒದಲ್ಲಿ ಬಿಡ್‌ದಾರರಿಗೆ ಮೂರನೇ ಒಂದರಷ್ಟು ಷೇರುಗಳನ್ನು ವಿತರಿಸಲಾಗಿದೆ. ಅಂದರೆ ಮೂರು ಷೇರುಗಳಿಗೆ ಬಿಡ್‌ ಸಲ್ಲಿಸಿದವರಿಗೆ ಒಂದು ಷೇರು ಸಿಕ್ಕಿದೆ ಎನ್ನುತ್ತಾರೆ ಬೆಂಗಳೂರು ಮೂಲದ ಷೇರು ತಜ್ಞರಾದ ನರಸಿಂಹ ಕುಮಾರ್‌ ಅವರು.

ದೀರ್ಘಕಾಲೀನ ಹೂಡಿಕೆಗೆ ಸೂಕ್ತ
ಲಾಭದಾಯಕವಾಗಬಲ್ಲುದು. ಎಲ್‌ ಐಸಿಯ ಬೆಳವಣಿಗೆ ಬಗ್ಗೆಯೂ ವಿಶ್ವಾಸ ಇಡಬಹುದು. ಅಂದರೆ ೫-೬ ವರ್ಷಗಳ ಕಾಲ ಹೂಡಿಕೆ ಇಟ್ಟುಕೊಂಡರೆ ಉತ್ತಮ ಪ್ರತಿಫಲ ಸಿಗಬಹುದು. ಇದು ಅಲ್ಪಕಾಲೀನ ಹೂಡಿಕೆಗೆ ಸೂಕ್ತವಲ್ಲ ಎನ್ನುತ್ತಾರೆ ಅವರು.

ಎಲ್‌ಐಸಿ ಐಪಿಒದಲ್ಲಿ ಪಾಲಿಸಿದಾರರು ಮತ್ತು ರಿಟೇಲ್‌ ಹೂಡಿಕೆದಾರರು ಗರಿಷ್ಠ 2 ಲಕ್ಷ ರೂ. ತನಕ ಹೂಡಿಕೆ ಮಾಡಲು ಅವಕಾಶ ಇತ್ತು. ಪ್ರತಿ 1 ಲಾಟ್‌ನಲ್ಲಿ 15ಷೇರುಗಳಿದ್ದವು. ಒಬ್ಬ ಬಿಡ್‌ದಾರ 14ಲಾಟ್‌ಗಳನ್ನು ಕೊಳ್ಳಬಹುದಿತ್ತು. ಪ್ರತಿ ಷೇರಿನ ಬಿಡ್‌ ದರದ ಶ್ರೇಣಿ 902-949 ರೂ. ಇತ್ತು. ಒಟ್ಟಾರೆಯಾಗಿ ಮೂರು ಪಟ್ಟು ಬಿಡ್‌ ಸಲ್ಲಿಕೆಯಾಗಿತ್ತು. ಬಿಡ್‌ ಸಲ್ಲಿಸಿ ಷೇರು ಸಿಗದವರಿಗೆ ಅವರು ಕಟ್ಟದ ಹಣವನ್ನು ಬ್ಯಾಂಕ್‌ಗಳು ಹಿಂತಿರುಗಿಸಿವೆ. ಒಟ್ಟು 22.1 ಕೋಟಿ ಷೇರುಗಳನ್ನು ಸರಕಾರ ಬಿಡುಗಡೆಗೊಳಿಸಿತ್ತು.

Exit mobile version