ಹೊಸದಿಲ್ಲಿ: ಎಲ್ ಐಸಿಯ ಐಪಿಒ ಪ್ರಕ್ರಿಯೆಗಳನ್ನು ತಡೆಯಬೇಕು ಮತ್ತು ಷೇರು ಮಂಜೂರಾತಿಯನ್ನು ನಿಲ್ಲಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಐಪಿಒಗೆ ಪೂರಕವಾಗಿ ಎಲ್ ಐಸಿ ಕಾಯಿದೆಯಲ್ಲಿ ತಿದ್ದುಪಡಿ ತರಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರಿಗೆ ಸುಪ್ರೀಂಕೋಟ್ ನೋಟಿಸ್ ಜಾರಿಗೊಳಿಸಿದೆ.
ಐಪಿಒ ಈಗಾಗಲೇ ನಡೆಯುತ್ತಿರುವ ಪ್ರಕ್ರಿಯೆಯಾಗಿದ್ದು, ಅಲ್ಲಿ ಈಗಾಗಲೇ ಭಾರಿ ಪ್ರಮಾಣದ ಹೂಡಿಕೆಯಾಗಿದೆ. ಈ ಹಂತದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವುದು ಸಮಂಜಸವಲ್ಲ ಎಂದು ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು.
ಮೇ 4ರಂದು ಆರಂಭವಾಗಿರುವ ಎಲ್ ಐಸಿ ಐಪಿಒ ಮೇ 9ರಂದು ಮುಕ್ತಾಯವಾಗಿದೆ. ಮೇ 12ರಂದು ಷೇರು ಮಂಜೂರಾತಿಯಾಗುತ್ತಿದೆ. ಮೇ 17ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗಲಿದೆ.