Site icon Vistara News

LIC IPO: ಪ್ರತಿ ಷೇರಿಗೆ 949 ರೂ.ಗಳಂತೆ 20,560 ಕೋಟಿ ರೂ. ಸಂಗ್ರಹಿಸಿದ ಎಲ್‌ಐಸಿ

ಮುಂಬಯಿ: ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಮೆಗಾ ಐಪಿಒದ ಬಳಿಕ ಪ್ರತಿ ಷೇರಿಗೆ 949 ರೂ.ಗಳನ್ನು ಅಂತಿಮಪಡಿಸಿದೆ. ಮೇ 17 ರಂದು ಎಲ್‌ಐಸಿಯ ಷೇರು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ನೋಂದಣಿಯಾಗಲಿದೆ. ಬಳಿಕ ಷೇರು ಮಾರುಕಟ್ಟೆಯಲ್ಲಿ ಕೊಡು-ಕೊಳ್ಳುವಿಕೆ ವಹಿವಾಟು ನಡೆಯಲಿದೆ. ಸೆಕೆಂಡರಿ ಮಾರುಕಟ್ಟೆಯಲ್ಲಿ ಎಲ್‌ ಐಸಿಯ ದರ ಯಾವ ಮಟ್ಟದಲ್ಲಿ ನಿಲ್ಲಲಿದೆ ಎಂಬ ಕುತೂಹಲ ಈಗ ಮೂಡಿದೆ.

LIC IPO: ಎಲ್‌ಐಸಿಯ ಕೋಟ್ಯಂತರ ಷೇರುಗಳ ವಿತರಣೆಯನ್ನು ಹೇಗೆ ಮಾಡಿದರು ಗೊತ್ತೇ?

ಐಪಿಒದಲ್ಲಿ ಪ್ರತಿ ಷೇರಿನ ಬಿಡ್‌ ದರದ ಶ್ರೇಣಿ 902-949 ರೂ.ಗಳಾಗಿತ್ತು. ಸ್ಥಳೀಯ ಹೂಡಿಕೆದಾರರು, ಪಾಲಿಸಿದಾರರು ಉತ್ಸಾಹದಲ್ಲಿ ಬಿಡ್‌ ಸಲ್ಲಿಸಿದ್ದರು. ಕೊನೆಯ ದಿನ ವಿದೇಶಿ ಸಾಂಸ್ಥಿಕ ಹೂಡಿಕೆದಾರರೂ ಭಾಗವಹಿಸಿದ್ದರಿಂದ ಎಲ್‌ಐಸಿ ಐಪಿಒ ಯಶಸ್ವಿಯಾಗಿದೆ.

ಎಲ್‌ಐಸಿ ಈ ಐಪಿಒ ಮೂಲಕ 205.6 ಶತಕೋಟಿ ರೂ. ( 20,560 ಕೋಟಿ ರೂ.) ಸಂಗ್ರಹಿಸಿದೆ. ಎಲ್‌ ಐಸಿಯ ಪಾಲಿಸಿದಾರರಿಗೆ ಪ್ರತಿ ಷೇರಿಗೆ 60 ರೂ. ಹಾಗೂ ರಿಟೇಲ್‌ ಹೂಡಿಕೆದಾರರಿಗೆ 45 ರೂ. ರಿಯಾಯಿತಿ ಲಭಿಸಿದೆ.

ಇದನ್ನೂ ಓದಿ | LIC IPO ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋಟ್‌ ನಕಾರ

Exit mobile version