Site icon Vistara News

LIC IPO ಯಶಸ್ವಿ ಮುಕ್ತಾಯ, 2.55 ಪಟ್ಟು ಬಿಡ್‌ ಸಲ್ಲಿಕೆ

ಮುಂಬಯಿ: ಷೇರು ಪೇಟೆಯಲ್ಲಿ ಸಂಚಲನ ಸೃಷ್ಟಿಸಿದ ಎಲ್‌ಐಸಿಯ ಐಪಿಒ ಸೋಮವಾರ ಮುಕ್ತಾಯವಾಗಿದ್ದು, ಹೂಡಿಕೆದಾರಿಂದ ಒಟ್ಟಾರೆಯಾಗಿ 2.55 ಪಟ್ಟು ಬಿಡ್‌ ಸಲ್ಲಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಯ ತಲ್ಲಣ, ಬಡ್ಡಿ ದರ ಏರಿಕೆ, ಹಣದುಬ್ಬರದ ಆತಂಕ, ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವು ಇತ್ಯಾದಿ ಸವಾಲುಗಳ ನಡುವೆಯೂ ಎಲ್‌ಐಸಿ ಐಪಿಒಗೆ ಸಕಾರಾತ್ಮಕ ಸ್ಪಂದನೆ ಲಭಿಸಿದೆ.

ಸೋಮವಾರ ಮಧ್ಯಾಹ್ನದ ವೇಳೆಗೆ 16.20 ಕೋಟಿ ಷೇರುಗಳಿಗೆ ಪ್ರತಿಯಾಗಿ 36.35 ಕೋಟಿ ಬಿಡ್‌ಗಳು ಸಲ್ಲಿಕೆಯಾಗಿತ್ತು. ಕೆಟಗರಿಯ ಪ್ರಕಾರ ಕ್ಯೂಐಬಿಯಿಂದ 2.22 ಪಟ್ಟು, ಎನ್‌ಐಐಯಿಂದ 2.12 ಪಟ್ಟು, ರಿಟೇಲ್‌ ವಿಭಾಗದಿಂದ 1.85 ಪಟ್ಟು, ಉದ್ಯೋಗಿಗಳ ವಿಭಾಗದಿಂದ 5.73 ಪಟ್ಟು ಹಾಗೂ ಪಾಲಿಸಿದಾರರ ಕಡೆಯಿಂದ 2.55 ಪಟ್ಟು ಬಿಡ್‌ ಸಲ್ಲಿಕೆಯಾಗಿದೆ. ಅರ್ಹ ಸಾಂಸ್ಥಿಕ ಹೂಡಿಕೆದಾರರ (ಕ್ಯೂಐಬಿ) ವಿಭಾಗದಿಂದ ಕೊನೆಯ ದಿನ ಸಂಪೂಣ ಚಂದಾದಾರಿಕೆ ನಡೆದಿದೆ.

LIC ಐಪಿಓLIC IPOಗೆ ಭರ್ಜರಿ ರೆಸ್ಪಾನ್ಸ್‌, ಎರಡೇ ದಿನದಲ್ಲಿ ಶೇ.95 ಷೇರುಗಳಿಗೆ ಬಿಡ್‌ ಸಲ್ಲಿಕೆ

ದೀರ್ಘಕಾಲೀನ ಹೂಡಿಕೆಗೆ ಸೂಕ್ತ
ದೀರ್ಘಕಾಲೀನ ಹೂಡಿಕೆಗೆ ಉತ್ತಮ ಆಯ್ಕೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಅತ್ಯಂತ ವೃತ್ತಿಪರ ವಿಮೆ ಸಂಸ್ಥೆಯಾಗಿದ್ದು, ಈಗಲೂ ವಿಮೆ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಸಂಸ್ಥೆಯ ರಿಸ್ಕ್‌ ಮ್ಯಾನೇಜ್‌ಮೆಂಟ್‌ ಕೂಡ ಚೆನ್ನಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ರಿಟೇಲ್‌ ಹೂಡಿಕೆದಾರರಿಂದ ದಾಖಲೆಯ 10.9 ಕೋಟಿ ಬಿಡ್‌ಗಳನ್ನು ಎಲ್‌ಐಸಿ ಗಳಿಸಿದೆ. ಅವರಿಗೆ 6.9 ಕೋಟಿ ಷೇರುಗಳನ್ನು ಮೀಸಲಿಡಲಾಗಿತ್ತು. ಮೇ 17ರಂದು ಎಲ್‌ಐಸಿ ಷೇರುಗಳು ಎನ್‌ಎಸ್‌ಇ ಮತ್ತು ಬಿಎಸ್‌ಇಗಳಲ್ಲಿ ನೋಂದಣಿಯಾಗಲಿದ್ದು, ಬಳಿಕ ಸೆಕೆಂಡರಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಯಲಿದೆ.

ಮೇ 4ರಿಂದ ಐಪಿಒ ಆರಂಭವಾಗಿತ್ತು. ಕೇಂದ್ರ ಸರಕಾರ 21,000 ಕೋಟಿ ರೂ. ಗಾತ್ರದ ಐಪಿಒ ನಡೆಸಿದೆ. ಒಟ್ಟು 22.1 ಕೋಟಿ ಷೇರುಗಳನ್ನು ಮಾರಾಟಕ್ಕಿಡಲಾಗಿತ್ತು.

LIC ಐಪಿಓಗ್ರೇ ಮಾರ್ಕೆಟ್‌ನಲ್ಲಿ LIC IPO ಮೌಲ್ಯ ಹೆಚ್ಚಳ: ₹45-₹80ರ ವರೆಗೆ GMP

Exit mobile version