ಹೊಸದಿಲ್ಲಿ: ಇತ್ತಿಚಿನ ಕೆಲವು ವರ್ಷಗಳಲ್ಲಿ ಖಾಸಗಿ ವಲಯದ ಉದ್ಯೋಗಗಳು ಆಕರ್ಷಕ ವೇತನವನ್ನು ನೀಡಿದರೂ ಅವುಗಳಲ್ಲಿ ಸಾಮಾನ್ಯವಾಗಿ ಪಿಂಚಣಿ (pension) ಸೌಲಭ್ಯವನ್ನು ಹೊಂದಿರುವುದಿಲ್ಲ. ಹೀಗಾಗಿ ಹೆಚ್ಚಿನ ಉದ್ಯೋಗಿಗಳು ಉತ್ತಮ ಪಿಂಚಣಿ ಯೋಜನೆ ಹುಡುಕಾಟದಲ್ಲಿರುತ್ತಾರೆ. ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation) ಹಲವಾರು ದಶಕಗಳಿಂದ ಭಾರತೀಯರಿಗೆ ವಿಶ್ವಾಸಾರ್ಹ ವಿಮಾ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪಿಂಚಣಿ ಭದ್ರತೆಯ ಹೆಚ್ಚುತ್ತಿರುವ ಅಗತ್ಯವನ್ನು ಗುರುತಿಸಿರುವ ಎಲ್ ಇಸಿ ಸರಳ ಪಿಂಚಣಿ ಯೋಜನೆಯನ್ನು (LIC Pension Scheme) ಪ್ರಾರಂಭಿಸಿದೆ (Money Guide).
ಎಲ್ಐಸಿ ಸರಳ ಪಿಂಚಣಿ ಯೋಜನೆಯು ಹೂಡಿಕೆ ಮತ್ತು ನಿವೃತ್ತಿ ಜೀವನದಲ್ಲಿ ನಿರ್ದಿಷ್ಟ ಆದಾಯವನ್ನು ಹೊಂದಬೇಕು ಎನ್ನುವ ಯೋಚನೆಯಲ್ಲಿರುವವರಿಗೆ ಇದೊಂದು ಉತ್ತಮ ಆಯ್ಕೆ.
ಎಲ್ಐಸಿ ಸರಳ ಪಿಂಚಣಿ ಯೋಜನೆ (LIC Saral Pension Scheme)
ಎಲ್ಐಸಿಯ ಸರಳ ಪಿಂಚಣಿ ಯೋಜನೆಯು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ಮಾರ್ಗಸೂಚಿಗಳ ಮೂಲಕ ಪ್ರಮಾಣಿತ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿಯ ಪ್ರಾರಂಭದಲ್ಲೇ ನಿರ್ದಿಷ್ಟ ವಾರ್ಷಿಕ ದರಗಳನ್ನು ಖಾತರಿಪಡಿಸುತ್ತದೆ. ನಿವೃತ್ತಿಯ ಅನಂತರ ಜೀವಿತಾವಧಿಯಲ್ಲಿ ನಿಖರವಾದ ಪಿಂಚಣಿಯನ್ನು ಒದಗಿಸುತ್ತದೆ.
ಇದನ್ನೂ ಓದಿ: Electronic voting machine: ಎಲೆಕ್ಟ್ರಾನಿಕ್ ಮತಯಂತ್ರ ಹೇಗೆ ಕೆಲಸ ಮಾಡುತ್ತೆ ಗೊತ್ತಾ ?
ಎರಡು ಆಯ್ಕೆ ಇದೆ
ಈ ಯೋಜನೆಯಲ್ಲಿ ಪಾಲಿಸಿದರನಿಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಒಂದು ಖರೀದಿ ಬೆಲೆಯ ಶೇ. 100ರಷ್ಟು ಲಾಭದೊಂದಿಗೆ ಜೀವನ ಪರ್ಯಂತ ಪಿಂಚಣಿ ಸೌಲಭ್ಯ ಹಾಗೂ ಇನ್ನೊಂದು ತನ್ನ ಮರಣದ ಬಳಿಕ ಅವಲಂಬಿತರಿಗೆ ಶೇ. 100ರಷ್ಟು ಆರ್ಥಿಕ ಭದ್ರತೆಯನ್ನು ಒದಗಿಸುವುದು. ಎರಡನೇ ಆಯ್ಕೆಯನ್ನು ವಿವಾಹಿತರು ತಮ್ಮ ಸಂಗಾತಿಗಾಗಿ ಆಯ್ಕೆ ಮಾಡಿಕೊಳ್ಳಬಹುದು.
ಅರ್ಹತೆ
ಈ ಯೋಜನೆಯ ಅರ್ಹತೆ ಪಡೆಯಲು ಪಾಲಿಸಿದಾರರು 40 ರಿಂದ 80 ವರ್ಷ ವಯಸ್ಸಿನವರಾಗಿರಬೇಕು. ಖರೀದಿ ಬೆಲೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ.
ಕನಿಷ್ಠ ಮೊತ್ತ
ಎಲ್ಐಸಿ ಸರಳ ಪಿಂಚಣಿ ಯೋಜಯು ಮೂರು ಖರೀದಿ ಬೆಲೆಯ ಸ್ಲ್ಯಾಬ್‌ಗಳಿಗೆ ವಾರ್ಷಿಕ ದರಗಳನ್ನು ಹೆಚ್ಚಿಸುವುದರೊಂದಿಗೆ ಹೆಚ್ಚಿನ ಖರೀದಿ ಬೆಲೆಗಳಿಗೆ ಪ್ರೋತ್ಸಾಹವನ್ನು ಒದಗಿಸುತ್ತದೆ. ವಾರ್ಷಿಕ ಪಾವತಿಗಳ ಆಧಾರದಲ್ಲಿ ಪ್ರೋತ್ಸಾಹವು ಬದಲಾಗುತ್ತದೆ ಮತ್ತು ಪಾವತಿಯಲ್ಲಿನ ಕಡಿತದಲ್ಲೂ ವ್ಯತ್ಯಾಸವಾಗುತ್ತದೆ.
ನಿವೃತ್ತಿ ಯೋಜನೆ ಪ್ರಯೋಜನಗಳು
ಸರಳ ಪಿಂಚಣಿ ಯೋಜನೆಯು ನಿವೃತ್ತಿ ಯೋಜನೆಗೆ ಪರಿಹಾರವಾಗಿದೆ. ಪಿಎಫ್ ಮತ್ತು ನಿವೃತ್ತಿಯ ಅನಂತರ ಸಂಗ್ರಹವಾದ ಗ್ರಾಚ್ಯುಟಿ ಹಣವನ್ನು ಒಳಗೊಂಡು ಒಟ್ಟು ಮೊತ್ತದ ಹೂಡಿಕೆಗಳ ಮೂಲಕ ವಾರ್ಷಿಕವಾಗಿ ಖರೀದಿಗೆ ಅವಕಾಶವಿದೆ.
ಉದಾ- 42 ವರ್ಷ ವಯಸ್ಸಿನವರು 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಪಿಂಚಣಿಯಾಗಿ 12,388 ರೂಪಾಯಿಗಳನ್ನು ಪಡೆಯುತ್ತಾರೆ.
ವಿಶ್ವದ ನಂಬರ್ ಒನ್ ಜಾಗತಿಕ ವಿಮೆ ಬ್ರ್ಯಾಂಡ್ ಎಲ್‌ಐಸಿ
ಭಾರತದ ಬೃಹತ್ ಜೀವವಿಮೆ ಸಂಸ್ಥೆ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜಾಗತಿಕವಾಗಿ ಪ್ರಬಲ ವಿಮಾ ಬ್ರಾಂಡ್ ಆಗಿದೆ. ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ ಸಂಸ್ಥೆಯ 2024ರ ವರದಿ ಇದನ್ನು ತಿಳಿಸಿದೆ.
ಎಲ್ಐಸಿಯ ಬ್ರ್ಯಾಂಡ್ ಮೌಲ್ಯವು 9.8 ಶತಕೋಟಿ ಡಾಲರ್‌ಗಳಲ್ಲಿ ಸ್ಥಿರವಾಗಿದೆ. ಜೊತೆಗೆ ಬ್ರ್ಯಾಂಡ್ ಸಾಮರ್ಥ್ಯದ ಸೂಚ್ಯಂಕ ಸ್ಕೋರ್ 88.3ರಲ್ಲಿದ್ದು, AAA ಬ್ರ್ಯಾಂಡ್ ಸಾಮರ್ಥ್ಯದ ರೇಟಿಂಗ್ ಅನ್ನು ಹೊಂದಿದೆ.
ಎಲ್ ಇಸಿ ನಂತರದ ಶ್ರೇಯಾಂಕಗಳ ಪ್ರಕಾರ ಕ್ಯಾಥೆ ಲೈಫ್ ಇನ್ಶುರೆನ್ಸ್ ಎರಡನೇ ಪ್ರಬಲ ಬ್ರ್ಯಾಂಡ್ ಆಗಿದೆ. ಇದು ಬ್ರ್ಯಾಂಡ್ ಮೌಲ್ಯದಲ್ಲಿ 4.9 ಶತಕೋಟಿ ಡಾಲರ್ ಇದ್ದು, 9 ಶೇಕಡಾ ಹೆಚ್ಚಳ ಕಂಡಿದೆ. NRMA ಇನ್ಶುರೆನ್ಸ್ ನಂತರದ ಸ್ಥಾನದಲ್ಲಿದ್ದು, 82 ಸೂಚ್ಯಂಕ ಹಾಗೂ 1.3 ಶತಕೋಟಿ ಡಾಲರ್ ಬ್ರಾಂಡ್ ಮೌಲ್ಯ ಹೊಂದಿದೆ.